ಚಿತ್ರದುರ್ಗದ ಮುರಘಾ ಶ್ರೀಗಳ ವಿರುದ್ಧ ಮಾಡಿರುವ ಆರೋಪ ನಿರಾಧಾರವಾಗಿದ್ದು ತಕ್ಷಣವೇ ಅದನ್ನು ಹಿಂತೆಗೆದುಕೊಂಡು ಕ್ಷಮೆ ಕೇಳದಿದ್ದರೆ ಉಗ್ರಹೋರಾಟ ನಡೆಸುವುದಾಗಿ ಲಿಂಗಾಯತ ಮುಖಂಡರು ಬೀದರ್ ನಿಂದ ಎಚ್ಚರಿಕೆ ನೀಡಿದ್ದಾರೆ.
ಚಿತ್ರದುರ್ಗದ ಶ್ರೀಗಳ ಮೇಲೆ ಹೊರೆಸಲಾದ ಲೈಂಗಿಕ ಆರೋಪ ಸತ್ಯಕ್ಕೆ ದೂರವಾದದ್ದು ಎಂದು ಜಾಗತಿಕ ಲಿಂಗಾಯತ ಮಹಾಸಭಾ ರಾಜ್ಯ ಕಾರ್ಯದರ್ಶಿ ಕಿರಣ ಖಂಡ್ರೆ, ರಾಷ್ಟ್ರೀಯ ಬಸವ ದಳ ತಾಲೂಕು ಅಧ್ಯಕ್ಷ ಶ್ರೀಕಾಂತ್ ಭೂರಾಳೆ ಹಾಗೂ ಬಸವ ತತ್ವ ನಿಷ್ಠರಾದ ವಿಶ್ವನಾಥ ಬಿರಾದಾರ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
ಶ್ರೀ ಮಠದ ಏಳಿಗೆ ಸಹಿಸದ ಒಂದಿಷ್ಟು ಜನ ಪೂಜ್ಯರ ಸಾಮಾಜಿಕ ಒಳ್ಳೆಯ ಕಾರ್ಯ ಸಹಿಸದ ವಿರೋಧಿಗಳ ಕೆಲಸ ಇದಾಗಿದೆ ಎಂದು ಲಿಂಗಾಯತ ಸಮುದಾಯದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಈ ಕೃತ್ಯದ ಹಿಂದೆ ನಡೆದ ದೊಡ್ಡಮಟ್ಟದಲ್ಲಿ ಕಾಣದ ಕೈಗಳ ಕೆಲಸ ಮಾಡುತ್ತಿವೆ ಎಂದು ಎದ್ದು ಕಾಣಿಸುತ್ತಿದೆ ಎಂದ ಆರೋಪ ಮಾಡಿದ ಲಿಂಗಾಯತ ಧರ್ಮದ ಮುಖಂಡರು ಬೀದರನಲ್ಲಿ ಆರೋಪಿಸಿದರು.
ಇಂತಹ ಗುರುದ್ರೋಹಿ ಧರ್ಮ ದ್ರೋಹಿಗಳ ವಿರುದ್ಧ ಘನ ಸರಕಾರದ ಮುಖ್ಯಮಂತ್ರಿಗಳು ಸೂಕ್ತ ಕ್ರಮ ಕೈಗೊಂಡು ಪಿತೂರಿ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು. ಆರೋಪದ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು ಜೊತೆಗೆ ಶ್ರೀ ಮಠದ ಘನತೆ ಗೌರವ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಶ್ರೀಗಳ ಹೆಸರಿಗೆ ಕಳಂಕ ತರುವ ಕೆಲಸಕ್ಕೆ ಯಾಕೆ ಕೈ ಹಾಕುತ್ತಾರೆ ಎಂಬುದು ಗೊತ್ತು ಹೀಗೆ ಮುಂದು ವರೆದರೆ ರಾಜ್ಯಾದ್ಯಂತ ಬಸವಣ್ಣನವರ ಕ್ರಾಂತಿಯಂತೆ ಉಗ್ರ ಹೋರಾಟಕ್ಕೆ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ ಲಿಂಗಾಯತ ಧರ್ಮದ ಮುಖಂಡರು ಈ ಹೋರಾಟ ಬೀದರನಿಂದಲೇ ಆರಂಭವಾಗುವುದು ಎಂದರು. ಈ ಸಂದರ್ಭದಲ್ಲಿ ಲಿಂಗಾಯತ ಮುಖಂಡರಾದ ದತ್ತು ಕರಕಾಳೆ, ಜೈರಾಜ್ ಕೊಳ್ಳ, ಕೇಸ್ಕರ್ ಕಿರಣ ಖಂಡ್ರೆ ಮುಂತಾದ ಲಿಂಗಾಯತ ಧರ್ಮದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ವರದಿ: ನಂದಕುಮಾರ ಕರಂಜೆ, ಬೀದರ