spot_img
spot_img

ಗಣಿತ ದಿನದ ಆಚರಣೆಯ ಹಿಂದಿನ ಮುಖ್ಯ ಉದ್ದೇಶವೆಂದರೆ ಮಾನವೀಯತೆಯ ಬೆಳವಣಿಗೆ – ವ್ಹಿ.ಸಿ.ಹಿರೇಮಠ

Must Read

- Advertisement -

ಸವದತ್ತಿಃ “ಗಣಿತ ದಿನದ ಹಿಂದಿನ ಮುಖ್ಯ ಉದ್ದೇಶವೆಂದರೆ ಮಾನವೀಯತೆಯ ಬೆಳವಣಿಗೆಗೆ ಗಣಿತದ ಮಹತ್ವದ ಜಾಗೃತಿ ಮೂಡಿಸುವುದು. ಮಕ್ಕಳಲ್ಲಿ ಗಣಿತದ ಕುರಿತು ಸಕಾರಾತ್ಮಕ ಮನೋಭಾವವನ್ನು ಮೂಡಿಸುವುದು.ಗಣಿತವೆಂದರೆ ಕಬ್ಬಿಣದ ಕಡಲೆಯಲ್ಲ ಎಂಬುದನ್ನು ಸರಳ ಮತ್ತು ಸುಲಭ ರೂಪದಲ್ಲಿ ಗಣಿತವನ್ನು ಕಲಿಸುವ ಮೂಲಕ ಅವರಲ್ಲಿ ಗಣಿತದಲ್ಲಿ ಆಸಕ್ತಿ ಉಂಟಾಗುವಂತೆ ಮಾಡುವುದು.ಈ ದಿಸೆಯಲ್ಲಿ ಇಂದು ಶಾಸಕರ ಮಾದರಿ ಶಾಲೆಯಲ್ಲಿ ಮಕ್ಕಳು ಗಣಿತದ ಕುರಿತು ಹಮ್ಮಿಕೊಂಡ ಚಟುವಟಿಕೆಗಳನ್ನು ಗಮನಿಸಿದಾಗ ಮಕ್ಕಳು ಬಹಳಷ್ಟು ಆಸಕ್ತಿಯಿಂದ ಗಣಿತದ ಪ್ರಕ್ರಿಯೆಗಳನ್ನು ಸಂಭಾಷಣೆ ಮೂಲಕ ತಿಳಿಸಿದ್ದು ನಿಜಕ್ಕೂ ಹೆಮ್ಮೆಯ ಸಂಗತಿ” ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ವ್ಹಿ.ಸಿ.ಹಿರೇಮಠ ತಿಳಿಸಿದರು.

ಅವರು ಸವದತ್ತಿಯ ಗುರ್ಲಹೊಸೂರಿನ ಸರಕಾರಿ ಹಿರಿಯ ಪ್ರಾಥಮಿಕ ಶಾಸಕರ ಮಾದರಿ ಶಾಲೆಯಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. “ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವನ್ನು ದೇಶಾದ್ಯಂತ ರಾಷ್ಟ್ರೀಯ ಗಣಿತ ದಿನವನ್ನಾಗಿ ಆಚರಿಸಲಾಗುತ್ತದೆ.ರಾಮಾನುಜನ್ ಅವರಿಗೆ ಗಣಿತ ವಿಷಯದೊಂದಿಗೆ ಇದ್ದ ಒಲವು ಅಪಾರ ಜ್ಞಾನದ ಕುರಿತು” ಅವರು ಈ ಸಂದರ್ಭದಲ್ಲಿ ತಿಳಿಸಿದರು.

- Advertisement -

ಮುಖ್ಯೋಪಾಧ್ಯಾಯರಾದ ಎಂ. ಬಿ. ಕಮ್ಮಾರ ಅವರ ಮಾರ್ಗದರ್ಶನ ದಲ್ಲಿ ಗಣಿತ ಶಿಕ್ಷಕರಾದ ಎಸ್.ಎಸ್.ಕರಿಗಾರ ನೇತೃತ್ವದಲ್ಲಿ ಆರನೆಯ ತರಗತಿಯ ವಿದ್ಯಾರ್ಥಿನಿಯರಾದ ತೇಜಸ್ವಿನಿ ಬಕಾಳೆ,ರೋಹಿನಿ ಹಿಂದಿನಮನಿ,ಕಲ್ಪನಾ ಸಂಕನ್ನವರ,ಅಶ್ವಿನಿ ಮೇಟಿ,ಶಾಹೀನ್ ಬೇಗಂ ನದಾಫ್,ಆಫ್ರಿನ್ ಸುತಗಟ್ಟಿ,ಪ್ರಜ್ವಲ್ ಡಬಕೆ,ಅಸದ್ ಅತ್ತಾರ,ಅರವಿಂದ ಬಡಿಗೇರ,ಸ್ನೇಹಾ ಗೋಟಕಿಂಡಿ,ಮಿಜಬಾ ಸೆರಗಾರ ಗಣಿತದ ಮಾದರಿಗಳಾದ ಕೈವಾರ,ಜೋಡಿ ಮೂಳೆ ಪಟ್ಟಿ,ವಿಭಾಜಕ,ಅಳತೆಪಟ್ಟಿ,ಕೋನಗಳು,ಸಂಕಲನ,ವ್ಯವಕಲನ,ಗುಣಾಕಾರ,ಭಾಗಾಕಾರ, ಕೋನ ಮಾಪಕ, ಚೌಕ ಕುರಿತು ಏಳನೆಯ ತರಗತಿಯ ವಿದ್ಯಾರ್ಥಿನಿಯರಾದ ಅನನ್ಯಾ ಹಂಚಾಟೆ,ಆಫ್ರೀನ್ ನದಾಫ್,ಸಾವಿತ್ರಿ ಬೋವಿ,ಸುಷ್ಮಾ ವಣ್ಣೂರ, ಕವಿತಾ ಸುತಗಟ್ಟಿ.ಅನ್ನಪೂರ್ಣ ಜಾಬಣ್ಣವರ ತ್ರಿಭುಜ,ವೃತ್,.ನಿಬಂಧನೆಗಳು,ಸಂಖ್ಯೆಗಳು,ಶೇಕಡಾ ಕ್ರಮ,ಭಿನ್ನರಾಶಿ,ಸಮೀಕರಣ ಕುರಿತು ಹಾಗೂ ಎಂಟನೆಯ ತರಗತಿಯ ವಿದ್ಯಾರ್ಥಿನಿಯರಾದ ಅಕ್ಷತಾ ಹುಲಮನಿ,ಸ್ವಾತಿ ಗೌಡರ,ರೇಣುಕಾ ಪಟ್ಟಣ,ಭಕ್ತಿ ಪ್ರಿಯಾ ಮಠದ,ಸುಮಾ ಬಿಕ್ಕನ್ನವರ ಘನ ಸಂಖ್ಯೆ,ವಜ್ರಾಕೃತಿ,ಚೌಕ,ಚತುರ್ಭುಜ,ವರ್ಗಸಂಖ್ಯೆ,ಆಯತ ಕುರಿತಂತೆ ಆಕೃತಿಗಳ ಪ್ರತಿಕೃತಿಗಳೊಂದಿಗೆ ವಿಷಯವನ್ನು ನಿರೂಪಿಸಿದ್ದು ವಿಶೇಷವಾಗಿತ್ತು.

ಇದೇ ಸಂದರ್ಭದಲ್ಲಿ ವಿಜ್ಞಾನ ಶಿಕ್ಷಕಿ ಶಶಿಕಲಾ ಮಿರ್ಜಿ ಗಣಿತ ವಿಷಯ ಕುರಿತು ಏರ್ಪಡಿಸಲಾಗಿದ್ದ ಕ್ವಿಜ್ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಮುದಾಯದತ್ತ ಶಾಲೆ ಕಾರ್ಯಕ್ರಮದ ಮಾರ್ಗದರ್ಶಕರಾಗಿ ಆಗಮಿಸಿದ್ದ ಸವದತ್ತಿಯ ಸರಕಾರಿ ಪ್ರೌಢಶಾಲೆ ಶಿಕ್ಷಕಿ ಎ.ಸಿ ಕಿತ್ತೂರ. ವಿಕಲಚೇತನ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ,ಶಿಕ್ಷಕರಾದ ಎಮ್.ಜಿ.ದೊಡಮನಿ,ಆರ್.ಬಿ.ಐಹೊಳೆ,ಗುರುಮಾತೆಯರಾದ ಬಿ.ಕೆ.ಸಂತಿ,ವ್ಹಿ.ಆರ್.ಗೊರಗುದ್ದಿ,ಜೆ.ಸಿ.ಗುಂಡಾರ,ಜಿ.ಕೆ.ಕೆಂಪಯ್ಯನವರ,ಎನ್.ಆರ್.ಯಕ್ಕುಂಡಿ,ಅತಿಥಿ ಶಿಕ್ಷಕರಾದ ಆರ್.ಎನ್.ಇಂಚಲ,ಎಸ್.ವ್ಹಿ.ಗೋಪೆನ್ನವರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಗಣಿತ ಶಿಕ್ಷಕ ಎಸ್.ಎಸ್.ಕರಿಗಾರ ಗಣಿತಶಾಸ್ತ್ರಜ್ಞ ಶ್ರೀನಿವಾಸ ರಾಮಾನುಜನ್ ಬದುಕನ್ನು ಕುರಿತು ಮಾತನಾಡಿದರು.ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಂಘದ ನಿರ್ದೇಶಕರಾದ ಶಿಕ್ಷಕ ಪಿ.ಎಸ್.ಶಿಂಧೆ ಸ್ವಾಗತಿಸಿದರು.ಎ.ಸಿ.ಬೆಳವಟಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಎಮ್.ಎಮ್.ಮಾಟೊಳ್ಳಿ ಕಾರ್ಯಕ್ರಮ ನಿರೂಪಿಸಿದರು.ಬಿ.ಎನ್.ದೊಡ್ಡಕಲ್ಲನ್ನವರ ವಂದಿಸಿದರು.

- Advertisement -
- Advertisement -

Latest News

ಬಡವರ ಮನೆ ಊಟ ಚಂದ ಸ್ಥಿತಿವಂತರ ಮನೇಲಿ ಆಟ ಚಂದ ಆದರೂ ಯಾರ ನೆಮ್ಮದಿ ಎಲ್ಲಿ ಅಡಗಿದೆಯೋ ಬಲ್ಲವರಾರು?

ಅಮ್ಮ ನಿನಗ್ ಎಷ್ಟ ಸಲ ಹೇಳಿದಿನಿ ಪಕ್ಕದ ಮನೆಗೆ ಹೋಗಬೇಡಾ ಅಂತ.ನಿನಗೆ ಬೇಜಾರಾದ್ರೆ ಟಿವಿ ನೋಡು,ನಿದ್ದೆ ಮಾಡು, ಬೇಕಿದ್ರೆ ಮನೇಲೆ ಭಜನೆ, ದೇವರ ನಾಮಸ್ಮರಣೆ ಇಂತದ್ದೇನೋ...
- Advertisement -

More Articles Like This

- Advertisement -
close
error: Content is protected !!
Join WhatsApp Group