spot_img
spot_img

ಭಗವಂತನ ಕರುಣೆ ಕೆಲವೊಮ್ಮೆ ಗುರುಗಳ ಮೂಲಕ ಹರಿದು ಬರುತ್ತದೆ – ಅಭಿನವ ನಾಗಲಿಂಗ ಮಹಾಸ್ವಾಮಿಗಳು

Must Read

- Advertisement -

ಸವದತ್ತಿಃ ಭಗವಂತನ ಕರುಣೆ ಕೆಲವೊಮ್ಮೆ ಗುರುಗಳ ಮೂಲಕ ಹರಿದು ಬರುತ್ತದೆ. ಅದು ನಮ್ಮ ಕಣ್ಣು ಕಿವಿ ಮನಸ್ಸುಗಳಿಗೆ ಆಗಾಗ ಕವಿಯುವ ಪೊರೆ ಜಿಡ್ಡುಗಳಿಂದ ಮುಕ್ತಿ ನೀಡುತ್ತದೆ ಜೀವನದಲ್ಲಿ ಗುರಿ ಇರಬೇಕು. ಗುರುವೂ ಇರಬೇಕು.ಗುರಿಯ ಕಡೆಗೆ ದಾರಿ ತೋರುವವನೇ ಗುರು.ಹುಟ್ಟಿದ ಕ್ಷಣದಿಂದ ಅಂತಿಮ ಕ್ಷಣದವರೆಗೆ ಬದುಕಿನ ದಾರಿಯಲ್ಲಿ ಕೈಹಿಡಿದು ಮುನ್ನಡೆಸುವವರು ಗುರು ಸಮಾನರು.

ಕಲಿಯುವ ಮನಸ್ಸಿದ್ದರೆ ಗುರುತಿಸುವ ದೃಷ್ಟಿ ಇದ್ದರೆ ಇರುವೆಗಳ ಶಿಸ್ತೂ ಕೂಡ ಗುರುಪಾಠವೇ, ಗುರು ಎಂದರೆ ಅದೊಂದು ಪದವಿಯಲ್ಲ, ಪಟ್ಟವಲ್ಲ, ತಿಳಿವಿನ ಬೆಳಕು, ಕತ್ತಲೆಯಲ್ಲಿ ಕಣ್ಕಟ್ಟಿದಾಗ ಕೈಹಿಡಿದು ನಡೆಸುವ ಬಂಧುವೇ ಗುರು.ಗೊಂದಲಗಳಿಂದ ಮುಂದೇನು ಮಾಡಬೇಕೆಂದು ತಿಳಿಯದೇ ಹೋದಾಗ ಸ್ಪಷ್ಟತೆಯ ದಾರಿ ತೋರಿಸುವವನು ಗುರು ತನಗಾಗಿ ಏನನ್ನೂ ಆಸೆ ಪಡದೇ ಜಗತ್ತಿನ ಒಳಿತಿಗಾಗಿ ಶ್ರಮಿಸುವವನು ಗುರು ಎಂದು ಚಿಕ್ಕುಂಬಿಯ ಶ್ರೋ.ಬ್ರಹ್ಮನಿಷ್ಟ. ಶ್ರೀಮದ್ ಅಭಿನವ ನಾಗಲಿಂದ ಮಹಾಸ್ವಾಮಿಗಳು ನುಡಿದರು.

- Advertisement -

ಅವರು ಚಿಕ್ಕುಂಬಿಯ ಅಜಾತ ನಾಗಲಿಂಗ ಮಹಾಸ್ವಾಮಿಗಳ ಮಠದಲ್ಲಿ ಗುರುವಾರ ಜರುಗಿದ ಶ್ರೀ ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳವರ 140ನೆಯ ಪುಣ್ಯಾರಾಧನೆಯ ಐದನೆಯ ದಿನದ ಕಾರ್ಯಕ್ರಮದಲ್ಲಿ ಗುರುಕಾರುಣ್ಯವಿಷಯ ಕುರಿತಂತೆ ಮಾತನಾಡಿದರು.

ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಿದ್ದ ಉಗರಗೋಳದ ಗುರು ನಿರ್ವಾಣೇಶ್ವರಮಠದ ಶ್ರೀ.ಮ.ನಿ.ಪ್ರ. ಮಹಾಂತ ಸ್ವಾಮಿಗಳು ಬದುಕಿನ ಪ್ರತಿಯೊಂದು ಕ್ಷಣ ಹಂತದಲ್ಲಿ ಗುರು ಕಾರುಣ್ಯವಿಲ್ಲದೆ ಯಾವ ಸಿದ್ಧಿಯೂ ಇಲ್ಲ. ಲೌಕಿಕ ಜಗತ್ತಿನಲ್ಲಿ ಏನೆಲ್ಲ ಸಿರಿಸಂಪತ್ತುಗಳಿದ್ದರೂ ಪಾರಮಾರ್ಥಿಕ ಬೆಳಕಿನ ಮಾರ್ಗ ತೋರಿಸುವ ಗುರುವಿನ ಅನುಗ್ರಹವಿಲ್ಲದೇ ಹೋದರೆ ಏನಿದ್ದರೇನು ಪ್ರಯೋಜನ.? ಎಲ್ಲವೂ ವ್ಯರ್ಥ.ಜೀವನದ ಪ್ರತಿಯೊಂದು ಹಂತದಲ್ಲಿ ನಮ್ಮ ಕೈಹಿಡಿದು ಮುನ್ನಡೆಸಿದ ಗುರುವಿನ ಬಗ್ಗೆ ನಮ್ಮಲ್ಲಿ ಗೌರವ ಭಾವ ಇರಬೇಕು. ಮತ್ತು ಗುರುವನ್ನು ಸದಾ ಗೌರವಿಸುವ ಮೂಲಕ ಗುರುವಿನ ಕೃಪೆಗೆ ಪಾತ್ರರಾಗಬೇಕು.”ಎಂದು ತಿಳಿಸಿದರು.

- Advertisement -

ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಬೆನಕನಕೊಪ್ಪದ ಶ್ರೀ ಗುರುದೇವ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಶ್ರೀ ಶಿವಾನಂದ ಮಹಾಸ್ವಾಮಿಗಳು, ಹನುಮನಹಳ್ಳಿ (ದಡೇರಕೊಪ್ಪ) ಶ್ರೀ ಶಿವಾನಂದ ಆಶ್ರಮದ ಶ್ರೋತ್ರೀಯ ಬ್ರಹ್ಮನಿಷ್ಠ ಶ್ರೀ ಶಿವಬಸವ ಮಹಾಸ್ವಾಮಿಗಳು, ಅಬ್ಬೀಗೇರಿಯ ಶ್ರೀಯಲ್ಲಾಲಿಂಗೇಶ್ವರಮಠದ ಬಸವರಾಜ ಮಹಾಸ್ವಾಮಿಗಳು, ಹಾರೋಗೊಪ್ಪದ ಶ್ರೀ ಚನ್ನವೃಷಬೇಂದ್ರ ಲೀಲಾಮಠದ ಮಾತೋಶ್ರೀ ಶಿವಯೋಗಿನಿದೇವಿ, ಮೊರಬ ಶ್ರೀ ಸಿದ್ದಾರೂಢ ಮಠದ ಮಾತೋಶ್ರೀ ಬ್ರಹ್ಮಗಾಯತ್ರಿದೇವಿ, ಅಥರ್ಗಾದ ಅಕ್ಕಮಹಾದೇವಿಮಠದ ಮಾತೋಶ್ರೀ ವಚನಶ್ರೀ. ವೇದಮೂರ್ತಿ ಡಾ.ಜಗದಯ್ಯ ಶಾಸ್ತ್ರೀಗಳು ಚಿಕ್ಕನರ್ಥಿ ಉಪಸ್ಥಿತರಿದ್ದರು.

“ಗುರುಕಾರುಣ್ಯ” ಕುರಿತಂತೆ ವೇದಿಕೆಯ ಮೇಲಿನ ಎಲ್ಲ ಪರಮಪೂಜ್ಯರು “ಗುರುವಿನ ಗುಲಾಮನಾಗದ ತನಕ ದೊರೆಯದನ್ನ ಮುಕುತಿ,ತಾಯಿಯೇ ಮೊದಲ ಗುರು.ಹುಟ್ಟಿನಿಂದ ಸಾವಿನವರೆಗೆ ಪ್ರತಿ ಕ್ಷಣದಲ್ಲೂ ಕಲಿಯುವ ಕಲಿಸುವ ಪ್ರಕ್ರಿಯೆ ನಿರಂತರ.ವಿದ್ಯೆ.ಬುದ್ಧಿ.ವೃತ್ತಿ.ಬದುಕಿನ ವಿಸ್ತಾರ ಇವುಗಳು ಎಲ್ಲ ಹಂತದಲ್ಲೂ ಒಬ್ಬೊಬ್ಬ ಗುರುಗಳು ಕಲಿಸುತ್ತಾರೆ.ಎನ್ನುವ ಜೊತೆಗೆ ನವಲಗುಂದ ನಾಗಲಿಂಗಸ್ವಾಮಿಗಳು ಮತ್ತು ಸಮಗಾರ ಭೀಮವ್ವಳ ನಿಷ್ಠೆ ಕುರಿತು ದೃಷ್ಟಾಂತವನ್ನು ಇದೇ ಸಂದರ್ಭದಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಕೌದಿ ಪೂಜೆ ಜರುಗಿತು.ಕಾರ್ಯಕ್ರಮದ ಪ್ರಾರಂಭದಲ್ಲಿ ಕಾರ್ಯಕ್ರಮದ ಪ್ರಾರಂಭದಲ್ಲಿ ಸಂಗೀತಸೇವೆಯನ್ನು ನೀಡುತ್ತಿರುವ ಎಂ.ಎಂ.ಬಡಿಗೇರ ಸಂಗೀತ ಕಲಾವಿದರು ಸವದತ್ತಿ ಇವರಿಂದ ಪ್ರಾರ್ಥನೆ ಜರುಗಿತು. ಶಿಕ್ಷಕ ಎನ್.ಜಿ.ತೊಪ್ಪಲದ ಸ್ವಾಗತಿಸಿದರು. ಎಂ.ಪಿ.ಪಾಟೀಲ ನಿರೂಪಿಸಿದರು. ಮಹಾಮಂಗಲ ಮತ್ತು ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.


ವರದಿ: ವೈ.ಬಿ.ಕಡಕೋಳ ಸಂಪನ್ಮೂಲ ವ್ಯಕ್ತಿಗಳು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group