spot_img
spot_img

ಯುವ ಜನತೆಯ ಚಿತ್ತ ಗಾಂಧಿಯತ್ತ – ನಾಡೋಜ ಡಾ.ವೂಡೇ.ಪಿ.ಕೃಷ್ಣ ಅಭಿಮತ

Must Read

spot_img

ಬೆಂಗಳೂರು – ಗಾಂಧಿ ನಂತರದ ಮೂರನೇ ತಲೆಮಾರಿನವರಾದ ಇಂದಿನ ಯುವ ಜನತೆ ಗಾಂಧಿ ಚಿಂತನೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು , ನೈಜವಾದ ಗಾಂಧಿ ಚರಿತೆಯನ್ನು ಓದಬೇಕು ಹೊರತು ಸಾಮಾಜಿಕ ಜಾಲತಾಣದಲ್ಲಿ ಮೂಡಿಬರುವ ವಿಚಾರಗಳನ್ನು ಅಲ್ಲ , ನನ್ನ ಜೀವನವೇ ನನ್ನ ಸಂದೇಶ ಎಂದು ಸಾರಿದ ರಾಷ್ಟ್ರಪಿತನ ವಿಚಾರಧಾರೆ ಇಂದಿಗೂ ಪ್ರಸ್ತುತ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ , ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌ| ಪ್ರಧಾನ ಕಾರ್ಯದರ್ಶಿ ನಾಡೋಜ ಡಾ.ವೂಡೇ.ಪಿ.ಕೃಷ್ಣ ಅಭಿಮತ ವ್ಯಕ್ತಪಡಿಸಿದರು.

ನಗರದ ಶೇಷಾದ್ರಿಪುರಂನ ಶೇಷಾದ್ರಿಪುರಂ ಇನ್ಸಸ್ಟಿಟ್ಯೂಟ್ ಆಫ್ ಕಾಮರ್ಸ ಮತ್ತು ಮ್ಯಾನೇಜ್ಮೆಂಟ್‍ನ ಗಾಂಧಿ ಅಧ್ಯಯನ ಕೇಂದ್ರದವರು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ರಾಸೇಯೋ ಮತ್ತು ಯುವ ಸಬಲೀಕರಣ ಇಲಾಖೆಯ ಸಹಯೋಗದಲ್ಲಿ ‘ನಮ್ಮ ಗಾಂಧಿ’ ಗಾಂಧಿ ವಿಚಾರಗಳ ವಿಶ್ಲೇಷಣೆ– ಅಂತರ ಕಾಲೇಜು ಭಾಷಣ ಸ್ಪರ್ಧೆಯ ಪ್ರಶಸ್ತಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಮಾರಂಭದಲ್ಲಿ ಕ.ಗಾ.ಸ್ಮ.ನಿ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ ಆಶಯ ನುಡಿಗಳನ್ನಾಡಿದರು, ಎಸ್.ಜೆ.ಆರ್ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ.ಪ್ರೇಮ ಸಿದ್ಧರಾಜು ‘ಕಸ್ತೂರಬಾ ಗಾಂಧಿ ‘ಕುರಿತು ವಿಶೇಷ ಉಪನ್ಯಾಸ ನಡೆಸಿಕೊಟ್ಟರು.

ಎಸ್‍ಐಸಿಎಂ ಪ್ರಾಂಶುಪಾಲೆ ಪ್ರೊ.ವಿದ್ಯಾಶಿವಣ್ಣವರ್ , ಸಂಚಾಲಕರಾದ ಡಾ.ಪೂರ್ಣಿಮ ಎಸ್., ಡಾ.ಎಸ್ .ರಾಮಲಿಂಗೇಶ್ವರ (ಸಿಸಿರಾ) ವೇದಿಕೆಯಲ್ಲಿದ್ದರು. ಗಾಂಧಿ ಶಾಂತಿಪ್ರತಿಷ್ಠಾನದ ಗೌ| ಕಾರ್ಯದರ್ಶಿ ಡಾ.ಸತ್ಯಮಂಗಲ ಮಹಾದೇವ, ಅಮರ ಬಾಪು ಚಿಂತನ ಉಪ ಸಂಪಾದಕ ಡಾ. ಗುರುರಾಜ ಪೋಶೆಟ್ಟಿಹಳ್ಳಿ ತೀರ್ಪುಗಾರರಾಗಿ ಭಾಗವಹಿಸಿದ್ದರು.

- Advertisement -
- Advertisement -

Latest News

ಸಾಹಿತ್ಯ ಕ್ಷೇತ್ರದಲ್ಲಿ ರಶ್ಮಿಯಾಗಿ ಹೊಳೆದ ವಿ.ಕೃ.ಗೋಕಾಕ್!

ಬೇರೆಯವರ ಮೇಲೆ ಅವಲಂಬಿತವಾದ ಬದುಕು, ಸಾಧನೆ “ಮರವನ್ನು ಆಶ್ರಯಿಸಿ ಬೆಳೆದ ಬಳ್ಳಿಯಂತೆ” ಆಶ್ರಯ ತಪ್ಪಿದಾಗ ಅದು ನೆಲಕಚ್ಚುವುದು ಎಂದವರು ವಿನಾಯಕ ಕೃಷ್ಣ ಗೋಕಾಕ್ (ವಿ.ಕೃ.ಗೋಕಾಕ್). ಕನ್ನಡಕ್ಕೆ...
- Advertisement -

More Articles Like This

- Advertisement -
close
error: Content is protected !!