ಹಗರಣಗಳಿಲ್ಲದ ಮೋದಿ ಸರ್ಕಾರ ವಿಶ್ವದ ಮೆಚ್ಚುಗೆ ಗಳಿಸಿದೆ – ಹಾಲಪ್ಪ ಆಚಾರ್ಯ

Must Read

ಸಿಂದಗಿ: 2018ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆ ಭಾವನಾತ್ಮಕ ವಿಚಾರದಲ್ಲಿ ಬಿಜೆಪಿ ಅಭ್ಯರ್ಥಿ ಅಲ್ಪ ಮತಗಳ ಅಂತರದಲ್ಲಿ ಸೋತಿದ್ದರೂ ಕಳೆದ 2 ಅವಧಿಯಲ್ಲಿ ರಮೇಶ ಭೂಸನೂರ ಅವರು ನೀರಾವರಿ ಯೋಜನೆ ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿರುವ ಹಿನ್ನೆಲೆಯಲ್ಲಿ ಈ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಹು ಅಂತರದ ಮತಗಳಿಂದ ಗೆದ್ದು ಬರುತ್ತಾರೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್ಯ ಹೇಳಿದರು.ಪಟ್ಟಣದ ಚೌಧರಿ ಲೇಔಟನಲ್ಲಿರುವ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ಅವರ ಮನೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಏಳೂವರೆ ವರ್ಷದಿಂದ ಕೇಂದ್ರದಲ್ಲಿ ಮೋದಿ ಸರಕಾರ ಯಾವುದೇ ಕಪ್ಪು ಚುಕ್ಕೆ ಅಂಟಿಸಿಕೊಳ್ಳದೇ ಆಡಳಿತ ನಡೆಸಿದ್ದನ್ನು ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತ ಪಡಿಸಿದೆ. ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದು ಮುಖ್ಯಮಂತ್ರಿ ಬಸವರಾಜ ಬೋಮ್ಮಾಯಿ ಅವರು ಭಾರತ ಸರಕಾರದ ಅಮೃತ ಮಹೋತ್ಸವದ ಅಂಗವಾಗಿ 14 ಇಲಾಖೆಗಳ ಮೂಲಕ 7500 ಸ್ವಸಹಾಯ ಗುಂಪುಗಳಿಗೆ, 1 ಲಕ್ಷ ಸಹಾಯಧನ, ಅನೇಕ ಗ್ರಾಪಂ, ಸಹಕಾರಿ ಸಂಘಗಳಿಗೆ , ಅಂಗನವಾಡಿ ಕೇಂದ್ರಗಳು ಸೇರಿದಂತೆ ರೈತರ ಮಕ್ಕಳು ಶೈಕ್ಷಣಿಕವಾಗಿ ಹಿಂದೆ ಬಿಳಬಾರದಂತೆ ಸೌಲಭ್ಯ ಕಲ್ಪಿಸಿಕೊಡಲಾಗಿದೆ ಈ ಎಲ್ಲ ವಿನೂತನ ಸೌಲಭ್ಯಗಳನ್ನು ನೀಡುವ ಬಿಜೆಪಿ ತತ್ವ ಸಿದ್ದಾಂತದ ಮೇರೆಗೆ ಜನರಿಗೆ ಎಟಕುವ ರೀತಿಯಲ್ಲಿ ನಡೆಸುತ್ತಿರುವ ಆಡಳಿತಕ್ಕೆ ಜನರು ಆಶೀರ್ವಾದ ನೀಡುತ್ತಾರೆ ಎನ್ನುವ ಭರವಸೆ ನನಗಿದೆ ಎಂದರು.

ಈ ಸಂದರ್ಭದಲ್ಲಿ ದೇವರಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ, ಎಂಎಲ್ಸಿ ಅರುಣ ಶಹಾಪುರ, ಜಿಲ್ಲಾ ವಕ್ತಾರ ರಾಜಶೇಖರ ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗುರ, ಮಂಡಲ ಅಧ್ಯಕ್ಷ ಈರಣ್ಣಾ ರಾವೂರ. ಪತ್ರಿಕಾ ಪತಿನಿಧಿಗಳಾದ ಸುದರ್ಶನ ಜಿಂಗಾಣಿ ಇದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group