spot_img
spot_img

ಕೇಂದ್ರ ಸರ್ಕಾರದ ಕ್ರಮ ಸ್ವಾಗತಾರ್ಹ

Must Read

ಕಳಸಾ ಬಂಡೂರಿ ಮಹದಾಯಿ ಯೋಜನಾ ವರದಿ ಮಂಜೂರಾತಿಗೆ-ಸಂಸದ ಈರಣ್ಣ ಕಡಾಡಿ ಹರ್ಷ

ಮೂಡಲಗಿ: ಹಲವು ವರ್ಷಗಳ ಕಾಲದಿಂದ ನೆನೆಗುದಿಗೆ ಬಿದ್ದಿದ್ದ ಮಹದಾಯಿ ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡುವ ಮೂಲಕ ಕರ್ನಾಟಕದ ರೈತರ ಪರವಾಗಿ ಒಂದು ಒಳ್ಳೆಯ ನಿರ್ಣಯವಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ಕೇಂದ್ರ ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ.

ಗುರುವಾರ ಡಿ. 29 ರಂದು ಪತ್ರಿಕಾ ಹೇಳಿಕೆ ನೀಡಿದ ಅವರು ವಿರೋಧ ಪಕ್ಷಗಳು ರಾಷ್ಟ್ರೀಯ ಸ್ವತ್ತಾಗಿರುವ ನೀರಿನ ವಿಷಯದಲ್ಲೂ ಕೂಡಾ ರಾಜಕೀಯ ಮಾಡುವಂಥ ಪ್ರಯತ್ನಗಳನ್ನು ಮಾಡಿದ್ದಕ್ಕೆ ಅವರು ಇವತ್ತು ಕಂಡುಕೊಳ್ಳಬೇಕಾಗಿದೆ ಬಿಜೆಪಿ ಎಷ್ಟೊಂದು ಬದ್ದತೆ ಇದೆ ರೈತರ ಪರವಾಗಿ ಆ ಬದ್ದತೆಯನ್ನು ಇವತ್ತು ಕೇಂದ್ರ ಸರ್ಕಾರ ಪ್ರದರ್ಶನ ಮಾಡಿದೆ ಎಂದರಲ್ಲದೇ ಬಿಜೆಪಿ ಯಾವತ್ತಿದ್ದರು ಅದು ರೈತ ಪರವಾಗಿದೆ  ಮುಂದೆ ಕೂಡ ರೈತ ಪರವಾಗಿ ಇರುತ್ತದೆ ಇದು ರೈತ ಪರ ಸರ್ಕಾರ ಅನ್ನೊದು ಮತ್ತೊಮ್ಮೆ ಸಾಬೀತಾಗಿದೆ. ಆದಷ್ಟು ಬೇಗ ಈ ಯೋಜನೆಯನ್ನು ಪೂರ್ಣಗೊಳಿಸುವ ಮುಖಾಂತರ ಈ ಭಾಗದ ರೈತರ ನೀರಿನ ಕೊರತೆಯನ್ನು ನಿವಾರಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಉತ್ತರ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾದ, ಕಳಸಾ ಬಂಡೂರಿ ವಿಸ್ತೃತ ಯೋಜನಾ ವರದಿಗೆ ಅನುಮತಿ ನೀಡಿದ ಪ್ರಧಾನಿಗಳಾದ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಹಾಗೂ ಕೇಂದ್ರ ಜಲ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕೇಂದ್ರ ಸಂಸದೀಯ ವ್ಯವಹಾರಗಳು, ಗಣಿ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಹಾಗೂ ಮಹಾದಾಯಿ ಯೋಜನೆಗೆ ಕೇಂದ್ರದ ಅನುಮೋದನೆ ಪಡೆಯುವಲ್ಲಿ ಶ್ರಮವಹಿಸಿ, ಯೋಜನಾ ವರದಿಯನ್ನು ರೂಪಿಸಿದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರನ್ನು ರಾಜ್ಯದ ರೈತರ ಪರವಾಗಿ ಅಭಿನಂದಿಸುವುದಾಗಿ ಸಂಸದ ಈರಣ್ಣ ಕಡಾಡಿ ತಿಳಿಸಿದರು.

- Advertisement -
- Advertisement -

Latest News

ಉಂಡು ಮಲಗಿದ ಮೇಲೂ ಗಂಡ ಹೆಂಡಿರ ಜಗಳ !

ಸಂಸಾರದ ಬಂಡಿ ಸರಾಗವಾಗಿ ಸಾಗಬೇಕಾದರೆ ಗಂಡ ಹೆಂಡತಿ ಎನ್ನುವ ಎರಡು ಗಾಲಿಗಳು ಸಮಸಮವಾಗಿ ಚಲಿಸಬೇಕು. ಎರಡೂ ಗಾಲಿಗಳಿಗೆ ಪ್ರಾಧಾನ್ಯತೆಯಿದೆ. ಒಂದು ಹೆಚ್ಚು ಒಂದು ಕಡಿಮೆ ಇಲ್ಲ....
- Advertisement -

More Articles Like This

- Advertisement -
close
error: Content is protected !!