ಬೀದರ – ಮುಖ ಮತ್ತು ಮರ್ಮಾಂಗಕ್ಕೆ ಹೊಡೆದು ವ್ಯಕ್ತಿಯೊಬ್ಬನನ್ನು ಭೀಕರವಾಗಿ ಕೊಲೆ ಮಾಡಿರುವ ಅಪರಿಚಿತರು ಪಟ್ಟಣದ ಹೊರವಲಯದ ಕೃಷಿ ತರಬೇತಿ ಕೇಂದ್ರದ ಹತ್ತಿರ ಶವ ಬಿಸಾಕಿ ಹೋಗಿದ್ದಾರೆ.
ಕೊಲೆಯಾದ ವ್ಯಕ್ತಿಯು ಔರಾದ ತಾಲೂಕಿನ ಕರಂಜಿ (ಕೆ) ಗ್ರಾಮದವನಾಗಿದ್ದು ಸದ್ಯ ಪಟ್ಟಣದ ಲಿಡ್ಕರ್ ಕಾಲೋನಿಯ ನಿವಾಸಿ ವಿಜಯಕುಮಾರ್ ವೃತ್ತಿಯಲ್ಲಿ ಶಿಕ್ಷಕ ಎನ್ನಲಾಗುತ್ತಿದೆ.
ದುರುಳರು ಮೃತ ದುರ್ದೈವಿ ವಿಜಯಕುಮಾರ ಮುಖಕ್ಕೆ ಕಲ್ಲಿನಿಂದ ಹೊಡೆದು ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಔರಾದ ಪೊಲೀಸ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ