ಸರ್ಕಾರಿ ಶಾಲೆಗಳ ನಲಿಕಲಿ ಅಭಿಯಾನ ಪಠ್ಯಪುಸ್ತಕವಾಗಬೇಕು

Must Read

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...

ಸ್ನೇಹಿತರ ದಿನಾಚರಣೆಯ ಶುಭಾಷಯಗಳು

ನಮ್ಮಲ್ಲಿ ಎಷ್ಟೋ ದಿನಾಚರಣೆಗಳಿವೆ. ಇದರಲ್ಲಿ ಸ್ನೇಹಕ್ಕೆ ಕೊಡುವ ಬೆಲೆ ಯಾವುದಕ್ಕೂ ಕೊಡಲಾಗದು ಎನ್ನುತ್ತಾರೆ. ಕಾರಣ ಇಲ್ಲಿ ಸ್ವಾರ್ಥ ಅಹಂಕಾರವಿರದೆ ಶುದ್ದ ಭಾವನೆಗಳ ಸಮ್ಮಿಲನವಿರುತ್ತದೆ. ಬಡವ ಬಡವನನ್ನು...

ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಒತ್ತಾಯ

ಸಿಂದಗಿ: ರಾಜ್ಯದಲ್ಲಿ ಪಿಂಜಾರ, ನದಾಫ್ ಸಮುದಾಯಗಳು ಶಿಕ್ಷಣ, ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿದ್ದು ಈ ಜನಾಂಗ ಉದ್ದಾರವಾಗಬೇಕಾದರೆ ಪಿಂಜಾರ್ ಅಭಿವೃದ್ಧಿ ನಿಗಮ ಅವಶ್ಯಕತೆ ಇದೆ. ಪ್ರವರ್ಗ...

ಭ್ರಷ್ಟಾಚಾರ ಹೇಗೆ ಒಂದು ಸಾಂಕ್ರಾಮಿಕ ರೋಗವೋ ಹಾಗೆಯೇ ಕೊರೊನ ವೂ ದಿನದಿಂದ ದಿನಕ್ಕೆ ಬೆಳೆದು ಜೀವನವನ್ನು ಹದಗೆಡಿಸಿದೆ. ಇದಕ್ಕೆ ಪರಿಹಾರವನ್ನು ಆಧ್ಯಾತ್ಮದ ಮೂಲಕ ಹುಡುಕೋ ಬದಲಾಗಿ ಸರ್ಕಾರ ವಿಜ್ಞಾನದ ಕಡೆ ನಡೆದರೆ ರೋಗ ಹೊರಗೆ ಉಳಿದು ಇನ್ನಷ್ಟು ಜೀವವನ್ನು ತೆಗೆಯಬಹುದು.

ಅಂದರೆ ಅತಿಥಿಗಳನ್ನು ಸತ್ಕಾರ ಮಾಡಿದ್ದಷ್ಟೂ ಹೇಗೆ ಹೆಚ್ಚುವರೋ ಹಾಗೆ ಇಲ್ಲಿ ರೋಗವನ್ನು ತಡೆಯೋ ನೆಪದಲ್ಲಿ ರೋಗವನ್ನು ಮನೆ ಮನೆಗೆ ಕಳಿಸುವುದರಲ್ಲಿ ಭಯವನ್ನು ಹುಟ್ಟಿಸುವ ಮಧ್ಯವರ್ತಿಗಳು ಬೆಳೆದಿದ್ದಾರೆ.

ಆದರೆ, ರೋಗ ಮಧ್ಯವರ್ತಿಗಳಿಗೆ ಹೆಚ್ಚು ಕಾಡುತ್ತಿಲ್ಲ. ಕಾರಣ ಅವರು ಲಸಿಕೆ ಪಡೆದು ತಮ್ಮ ತಮ್ಮ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಯಾರು ಕರ್ಮವನ್ನು ಮಾಡುವರೋ ಅವರಿಗೆ ರೋಗ ಬರೋದಿಲ್ಲವೆನ್ನುವ ಆಧ್ಯಾತ್ಮ ಸತ್ಯದಂತೆ ಭಾರತೀಯರ ದಿನನಿತ್ಯದ ಕಾಯಕ ಯಾವುದೇ ಭಯವಿಲ್ಲದೆ ಕಾಯಕವೇ ಕೈಲಾಸವೆಂದು ನಡೆದರೆ ಆರೋಗ್ಯ ಉತ್ತಮವಾಗಿರುತ್ತದೆ.

- Advertisement -

ಇದು ದೇಶದ ಭವಿಷ್ಯವನ್ನು ರೂಪಿಸುವ ಮಕ್ಕಳಿಗೂ ಅನ್ವಯಿಸುತ್ತದೆ. ಆದರೆ, ಕಾಯಕ,ಕಲಿಕೆ ಎರಡೂ ಸ್ವಚ್ಚವಾಗಿರಬೇಕಷ್ಟೆ ಇದಕ್ಕೆ ಮನೆ ಮನೆಯೊಳಗೆ ಮಕ್ಕಳಿಗೆ ಸಾತ್ವಿಕ ಶಿಕ್ಷಣ ನೀಡಿ ಹೊರಗಿನ ಕಲಿಕೆಗೆ ಪ್ರೋತ್ಸಾಹ ನೀಡುವುದು ಪೋಷಕರ ಧರ್ಮಕರ್ಮ.

ಆದರೆ, ನಮ್ಮ ಶಿಕ್ಷಣದಲ್ಲಿಯೇ ಅಡಗಿರುವ ಭ್ರಷ್ಟಾಚಾರ ವನ್ನು ಒಪ್ಪಿಕೊಂಡು ಮಕ್ಕಳ ಮೇಲೆ ಸಾಲದ ಹೊರೆ ಸಣ್ಣ ವಯಸ್ಸಿಗೇ ಹಾಕಿ. ಅನಗತ್ಯ ಪ್ರಭುದ್ದ ಹಾಗೂ ವೈಜ್ಞಾನಿಕ ವಿಚಾರಗಳಿಂದ ಶಿಕ್ಷಣ ನೀಡಿದ ಪೋಷಕರಿಗೆ ಕೊನೆಯಲ್ಲಿ ಸಿಕ್ಕಿರುವುದು ಸಾಲಮಯ ಜೀವನ, ವೃದ್ದಾಶ್ರಮ, ಅಬಲಾಶ್ರಮ,‌ಅನಾಥಾಶ್ರಮ ಇನ್ನಿತರ ಆಶ್ರಮಗಳಲ್ಲಿ ಕೊನೆಉಸಿರು ಬಿಡೋದನ್ನು ಪ್ರಗತಿ ಎನ್ನಬಹುದೆ?

ಕೆಲವು ಮಧ್ಯಮವರ್ಗದವರು ಮನೆಯೊಳಗೆ ಸಂಸ್ಕಾರ ನೀಡಿ ಹೊರಗಿನ ಶಿಕ್ಷಣದಿಂದ ಮಕ್ಕಳನ್ನು ಬೆಳೆಸಿದ್ದರೂ ಕೇವಲ ತಮ್ಮ ಸಂಸಾರಕ್ಕಷ್ಟೆ ಮಹತ್ವಕೊಟ್ಟು ಸಮಾಜದಲ್ಲಿ ಉತ್ತಮ ಬದಲಾವಣೆಗೆ ಸ್ಪಂದಿಸುವ ಗುಣ ಇಲ್ಲದೆ ಇನ್ನೊಬ್ಬರ ಕಾಲು ಎಳೆದು ಕಾಲಕಳೆಯುತ್ತಿದ್ದರೆ ಶ್ರೀಮಂತ ವರ್ಗ ವಿದೇಶಿಗಳಂತೆ ಜೀವನ ನಡೆಸುತ್ತಾ ಮಕ್ಕಳಿಗೆ ವಿದೇಶಿ ಶಿಕ್ಷಣದ ಜೊತೆಗೆ ದೇಶವನ್ನು ನಡೆಸೋ ಅಧಿಕಾರವನ್ನು ಕೊಟ್ಟು ದೇಶವನ್ನು ವಿದೇಶ ಮಾಡಲು ಹೊರಟು ,ಈಗ ಕೊರೊನ ಮಧ್ಯೆ ಬಂದು ಎಲ್ಲರನ್ನೂ ಮನೆಯೊಳಗೆ ಜೀವ ಉಳಿಸಿಕೊಳ್ಳಲು ಅವಕಾಶ ನೀಡಿ, ಶಿಕ್ಷಣ, ವ್ಯವಹಾರ, ಮಠ, ಮಂದಿರ, ಇನ್ನಿತರ ಸಮಾಜದ ಸಂಘಟನೆಗಳ‌ ಕಾರ್ಯಕ್ಕೆ ತಡೆ ಹಾಕಿದರೂ ಇನ್ನೂ ಬುದ್ದಿ ಕಲಿಯದೆ , ಹಿಂದಿನಂತೆಯೇ ಶಿಕ್ಷಣ, ವ್ಯವಹಾರ, ಮನರಂಜನೆ, ಕಾರ್ಯಕ್ರಮದಿಂದ ಬೇಕಾದರೆ ಹೊರಗೆ ಬಂದರೆ ಮೂರನೆ ಅಲೆ ಜೊತೆಗೆ ನಾಲ್ಕನೇ ಅಲೆಯ ತಯಾರಿ ನಡೆಯುತ್ತದೆ.

ಮಾನವನ ಪ್ರಯತ್ನ ಸರಿ,ಆದರೆ ಪ್ರಯತ್ನದಲ್ಲಿ ಸತ್ಯ ಧರ್ಮವೇ ಮರೆಯಾದರೆ ಕೊರೊನ ಮಹಾಮಾರಿ ಶಾಂತವಾಗಲು ಕಷ್ಟ ಕಷ್ಟ. ಜೀವ ಕೊಟ್ಟ ತಾಯಿಯನ್ನು ಆಳಲು ರಾಜಕೀಯ ನಡೆಸೋವಾಗ ಧರ್ಮವಿಲ್ಲವಾದರೆ ಜೀವಕ್ಕೆ ಅಪಾಯ.

ದೇಶದ ತುಂಬಾ ರೋಗಿಗಳು, ರೋಗಿಗಳ ಸೇವಕರು, ನಿರೋಗಿಗಳಿಗೂ ನೀಡೋ ಔಷಧ ತಯಾರಿಕಾ ಕೇಂದ್ರ, ಆಸ್ಪತ್ರೆ ಗಳು,ವೈದ್ಯರುಗಳು, ಶಿಕ್ಷಣ ನೀಡಬೇಕಾದ ಶಿಕ್ಷಕರು ಮಕ್ಕಳ ರೋಗಕ್ಕೆ ಔಷಧ ಕೊಡುವ ಕೆಲಸಮಾಡುತ್ತಾ ನಿಜವಾದ ಜ್ಞಾನವುಳ್ಳ ಯೋಗ ಶಿಕ್ಷಣವನ್ನು ನೀಡದೆ, ಹೆದರಿಸಿ, ಬೆದರಿಸಿ ,ಶಿಕ್ಷೆ ನೀಡಿ ಭೌತಿಕ ವಿಜ್ಞಾನವನ್ನು ತಲೆಗೆ ತುಂಬಿದರೆ ಮಕ್ಕಳ ಮನಸ್ಥಿತಿ, ಜ್ಞಾನದ ಸ್ಥಿತಿ,ಪರಿಸ್ಥಿತಿ ಅರ್ಥ ಆಗೋದಿಲ್ಲ.

ಇಲ್ಲಿ ಏನು ಹೇಳಬೇಕೆಂದರೆ ಪೋಷಕರು ಮಕ್ಕಳಿಗೆ ಶಿಕ್ಷಣ ನೀಡಲೇಬೇಕಾದರೆ ಮೊದಲು ನಿಮ್ಮ ನಿಮ್ಮ ಮನೆಯ ಮೂಲ ಧರ್ಮ ಕರ್ಮ, ದೇವರು,ಸಂಸ್ಕೃತಿ, ಭಾಷೆ, ನೆಲ ಜಲದ ಋಣ ಅಥವಾ ಸಾಲ ತೀರಿಸಲು ಬೇಕಾದ ಸತ್ಯವನ್ನರಿತು ಮಕ್ಕಳನ್ನು ಮನೆಯಲ್ಲಿದ್ದೇ ಉತ್ತಮ ಮಾರ್ಗದರ್ಶನ ನೀಡಿ ಕಲಿಸಿ ಬೆಳೆಸಿದರೆ ಒಳಗಿರುವ ದೈವ ಶಕ್ತಿಯೇ ಜೀವರಕ್ಷಣೆ ಮಾಡುತ್ತಾರೆ.

ಯಾರಿಗೆ ಗೊತ್ತು ಯಾವ ಮಕ್ಕಳಲ್ಲಿ ಯಾವ ಮಹಾತ್ಮ ಇರುವರೋ ಇದನ್ನು ನಮ್ಮೊಳಗೇ ಇರುವ ಸಾಮಾನ್ಯ ಜ್ಞಾನದಿಂದ ಅರ್ಥ ಮಾಡಿಕೊಂಡು ಮಕ್ಕಳನ್ನು ರಕ್ಷಿಸಿ. ಟೊಳ್ಳಾಗಿರುವ ಸತ್ವರಹಿತ ಶರೀರಕ್ಕೆ ಹೊರಗಿನಿಂದ ಇನ್ನಷ್ಟು ರೋಗದ ಔಷಧ ತುಂಬಿ, ಶಿಕ್ಷಣದಲ್ಲಿಯೇ ಅನಾರೋಗ್ಯಕರ ವಿಚಾರಗಳಿಂದ ಮನಸ್ಸು ಕೆಡಿಸಿದರೆ ರೋಗಕ್ಕೆ ದಾರಿಮಾಡಿಕೊಟ್ಟ ಹಾಗೆಯೇ.

ಆಧ್ಯಾತ್ಮ ಚಿಂತಕರುಗಳಿಗೆ ಎಲ್ಲಾ ವಿಚಾರ ತಿಳಿದರೂ ಈವರೆಗೆ ಸರ್ಕಾರದ ವರೆಗೆ ತಲುಪಿಸದೆ ,ತಾವೂ ಔಷಧ ಸೇವನೆ ಮಾಡುತ್ತಿದ್ದರೆ ರೋಗ ಕಡಿಮೆಯಾಗೋದಿಲ್ಲ. ಮನೆಗೆ ಬಂದ ಮಾರಿಯನ್ನು ಸಾಕೋದೆಂದರೆ ಹೀಗೆಯೇ? ಮೊದಲು ಆಧ್ಯಾತ್ಮ ಸತ್ಯ ತಿಳಿದು, ಭಕ್ತರಿಗೆ ತಿಳಿಸಿ ಅವರವರ ಆತ್ಮರಕ್ಷಣೆ ಕಡೆಗೆ ನಡೆದರೆ ಜೀವ ಒಮ್ಮೆ ಹೋಗೋದೆ ಆದರೂ ಆತ್ಮಜ್ಞಾನದ ಕಡೆಗೆ ನಡೆದ ಜೀವಕ್ಕೆ ಶಾಂತಿ,ಮುಕ್ತಿ ಸಿಗುತ್ತದೆ.

ಇಲ್ಲಿ ಮಕ್ಕಳ ಭವಿಷ್ಯ ಇರೋದು ಆತ್ಮಜ್ಞಾನದಲ್ಲಿ.ಮಾನವ ಜೀವ ಬಂದಿರೋದೆ ಆತ್ಮಸಾಕ್ಷಾತ್ಕಾರ ಕ್ಕಾಗಿ ಆದಾಗ ಅಜ್ಞಾನದ ಶಿಕ್ಷಣದಿಂದ ವ್ಯವಹಾರಕ್ಕೆ ಬಳಸಿದ ಶಿಕ್ಷಣ ಆತ್ಮಹತ್ಯೆಯ ಕಡೆಗೆ ನಡೆಸುತ್ತಿದೆ. ಹಿಂದಿನಸಾತ್ವಿಕ ಶಿಕ್ಷಣವೆಲ್ಲಿ? ಇಂದಿನ ರಾಜಸ ಹಾಗು ತಾಮಸ ಶಿಕ್ಷಣವೆಲ್ಲಿ? ಶಿಕ್ಷಣದ ಬದಲಾವಣೆ ಈಗ ಅಗತ್ಯವಿದೆ.

ಪ್ರಾಥಮಿಕ ಹಂತದಲ್ಲಿ ತೆಗೆದುಕೊಳ್ಳುವ ಸಾತ್ವಿಕ ವಿಚಾರದಿಂದ ಮಾತ್ರ ಮಾನವ ಮುಂದೆ ಮಹಾತ್ಮನಾಗಬಹುದು. ಅರ್ಧಸತ್ಯದ ಪ್ರಚಾರ ಕೇವಲ ವ್ಯವಹಾರಿಕವಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗೆ ತನ್ನ ತಾನರಿತು ಆತ್ಮರಕ್ಷಣೆ ಮಾಡಿಕೊಳ್ಳಲು ಬೇಕಾದ ಶಿಕ್ಷಣ ನೀಡದೆ ಮಧ್ಯವರ್ತಿಗಳು ಜೀವದ ಜೊತೆಗೆ ಆಟ ಆಡಿದರೆ ಕಷ್ಟ ನಷ್ಟ ಕಟ್ಟಿಟ್ಟ ಬುತ್ತಿ.

ಮೊದಲನೆ ಅಲೆ ಹಿರಿಯರ ಜೀವ ತೆಗೆಯಿತು. ಆಧ್ಯಾತ್ಮ ಸತ್ಯ ಬಿಟ್ಟು ನಡೆದ ಮಧ್ಯವಯಸ್ಸಿನವರನ್ನು ನಂತರ ಎಚ್ಚರಿಕೆ ನೀಡಿದರೂ ಕೇಳದೆ ಹೊರಬಂದವರ ಜೀವವೂ ಬಲಿಯಾಯಿತು. ಈಗ ಮಕ್ಕಳ ಸರದಿ ಪೋಷಕರು ಯಾರು ಮಕ್ಕಳನ್ನು ಅತಿಯಾಗಿ ಸುಖದೆಡೆಗೆ ಎಳೆದು ಬೆಳೆಸಿರುವರೋ ಅವರು ಎಚ್ಚರವಾಗಬೇಕು.

ಮಕ್ಕಳ ಜೀವರಕ್ಷಣೆಗೆ ಸಾಧ್ಯವಾದರೆ ಆ ಪರಮಾತ್ಮನ ಪ್ರಾರ್ಥನೆ ಹೆಚ್ಚಿಸಿಕೊಂಡು ಮಕ್ಕಳಿಗೂ ಮನೆಯಲ್ಲಿದ್ದೇ ದೈವತ್ವ ದ ಕಡೆ ನಡೆಯೋ ದಾರಿ ತೋರಿಸಬಹುದು. ಇಲ್ಲವಾದರೆ ಪ್ರಾಥಮಿಕ ಶಿಕ್ಷಣದಲ್ಲಿ ನೈತಿಕತೆ, ಧಾರ್ಮಿಕತೆ, ಸತ್ಯ, ನ್ಯಾಯ, ನೀತಿಯುಳ್ಳ ಸದ್ವಿಚಾರ ವನ್ನು ಆಟ, ಪಾಠಗಳಿಂದ ಕಲಿಸುವುದಕ್ಕೆ ಸಹಕರಿಸಿ.

ಸರ್ಕಾರದ ಶಾಲೆಗಳ ನಲಿಕಲಿ ಅಭಿಯಾನವೇ ಪಠ್ಯಪುಸ್ತಕ ವಾದರೆ ಉತ್ತಮ. ವಿದೇಶಿ ವಿಜ್ಞಾನ,ವಿಶೇಷಜ್ಞಾನ ಮಕ್ಕಳೊಳಗಿದೆ.ನಿಧಾನವಾಗಿ ಹೊರಗೆಳೆಯುವ ಪ್ರಯತ್ನ ಶಿಕ್ಷಣದಲ್ಲಿರಬೇಕಿದೆ. ಒಳಗಿನಪ್ರತಿಭೆ ಜ್ಞಾನಶಕ್ತಿ ಬೊಳಗಿನ ಗುರುವೇ ತಿಳಿದು ಕಲಿಸುವುದು ಪೋಷಕರ ಧರ್ಮ.

ಹೊರಗಿನಿಂದ ಹಾಕಿದ ವಿಚಾರ ಒಳಗೆ ಹೋಗಿ ವಿರುದ್ದದಿಕ್ಕಿನಲ್ಲಿ ನಡೆದಾಗಲೆ ರೋಗ ಹೆಚ್ಚುವುದು. ಇಲ್ಲಿರುವ ವಿಜ್ಞಾನವನ್ನು ಗಮನಿ ಸಿಸರ್ಕಾರ ಹೇಳಿದಂತೆ ಕೇಳೋರೆಲ್ಲರೂ ಜೀವನದಲ್ಲಿ ಸರ್ಕಾರದ ರೀತಿ ನೀತಿ ಅಳವಡಿಸಿಕೊಳ್ಳದೆ ಮಕ್ಕಳನ್ನು ಹೊರಗೆ ಕಳಿಸಿದರೆ ಜೀವ ಸರ್ಕಾರದ ಕೈಯಲ್ಲಿ ಇದೆಯೋ? ಮಹಾಮಾತೆ ಮಹಾಮಾರಿಯ ಕೈಯಲ್ಲೂ? ಶಾಲೆ ಪ್ರಾರಂಭವಾಗಲಿ ಅದರೊಡನೆ ಪಠ್ಯ ಪುಸ್ತಕವೂ ಸತ್ಯ ಧರ್ಮದ, ನ್ಯಾಯ ನೀತಿ,ಸಂಸ್ಕೃತಿ, ಸ್ವದೇಶದ ಜ್ಞಾನದ ಪರವಾಗಿರಬೇಕಷ್ಟೆ.

ಆಗಲೇ ಮಾರಿ ಮಾಯ. ಉತ್ತಮಪೌಷ್ಟಿಕ ಆಹಾರದಿಂದ ಜೀವ ನಿಂತಿಲ್ಲ. ಉತ್ತಮ ಜ್ಞಾನದಿಂದ ಜೀವನದ ಭವಿಷ್ಯ ಅಡಗಿದೆ.ದೇಹಕ್ಕೆ ಕೊಡುವ ಆಹಾರದ ಜೊತೆಗೆ ಆತ್ಮಕ್ಕೆ ನೀಡುವ ಜ್ಞಾನವೇ ದೊಡ್ಡದು. ಜೀವರಕ್ಷಣೆಯ ಜೊತೆಗೆ ಆತ್ಮರಕ್ಷಣೆ ಇರಲಿ. ಈ ಕೆಲಸ ಧಾರ್ಮಿಕ ಕ್ಷೇತ್ರ ನೇರವಾಗಿ ಸರ್ಕಾರದ ಜೊತೆಗೆ ಸೇರಿ ನಡೆಸಬೇಕಲ್ಲವೆ? ಎಲ್ಲಿರುವರು ಮಹಾತ್ಮರು? ದಯವಿಟ್ಟು ಇದನ್ನು ನಿಜವಾದ ಮಹಾತ್ಮರವರೆಗೆ ತಲುಪಿಸುವುದರ ಮೂಲಕ ಪ್ರಜಾಧರ್ಮ ಉಳಿಸಬಹುದು.

ಸ್ವಾರ್ಥಕ್ಕೆ ಕಟ್ಟುಬಿದ್ದವರ ಜೀವ ಅತಂತ್ರಸ್ಥಿತಿಗೆ ತಲುಪೋದು ಸತ್ಯ. ಭಾರತೀಯರು ಎಚ್ಚರವಾದರೆ ಉತ್ತಮ.ಭಾರತೀಯರಿಗೆ ಸಾಮಾನ್ಯಜ್ಞಾನದ ಕೊರತೆಯಿದೆ.ಮಕ್ಕಳಿಗೆ ಮೊದಲು ಕಲಿಸುವ ಅಗತ್ಯವಿದೆ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಹೊಸ ಪುಸ್ತಕ ಓದು: ಕನ್ನಡ ಸಾಹಿತ್ಯದಲ್ಲಿ ಅನುಭಾವ

ಕನ್ನಡ ಸಾಹಿತ್ಯದಲ್ಲಿ ಅನುಭಾವ ಪ್ರಧಾನ ಸಂಪಾದಕರು : ಪ್ರೊ. ಬಿ. ಬಿ. ಡೆಂಗನವರ ಪ್ರಕಾಶಕರು : ಬೆಳದಿಂಗಳು ಪ್ರಕಾಶನ, ಬೆಳಗಾವಿ, ೨೦೨೦ ಮೊ: ೯೯೦೨೪೯೫೬೯೫ ‘ಕನ್ನಡದಲ್ಲಿ ಅನುಭಾವ ಸಾಹಿತ್ಯ’ ಇದೊಂದು ಮೌಲಿಕ...
- Advertisement -

More Articles Like This

- Advertisement -
close
error: Content is protected !!