spot_img
spot_img

ಹಳೆ ದ್ವೇಷಕ್ಕೆ ಕಾರಿಗೆ ಬೆಂಕಿ ಇಟ್ಟ ಕಿರಾತಕರು

Must Read

ಬೀದರ – ಹಳೆಯ ದ್ವೇಷವನ್ನೇ ಮನಸಿನಲ್ಲಿಟ್ಟುಕೊಂಡ ಕಿರಾತಕರು ಕಾರಿಗೆ ಬೆಂಕಿ ಹಚ್ಚಿರುವ ಪ್ರಕರಣ ಜಿಲ್ಲೆಯ ಹುಲಸೂರು ತಾಲೂಕಿನ ಹಾಲಹಳ್ಳಿಯಲ್ಲಿ ನಡೆದಿದೆ.

ಹಾಲಹಳ್ಳಿ ಗ್ರಾಮದ ರೈತರಾದ ಗೋವಿಂದರಾವ ಪಾಟೀಲ ಎನ್ನುವವರ ಮಾಲಿಕತ್ವದ ಕಾರಿಗೆ ಕಿರಾತಕರು ಶುಕ್ರವಾರ ನಸುಕಿನ ಜಾವದಲ್ಲಿ ಬೆಂಕಿ ಹಚ್ಚಿರುವುದಾಗಿ ತಿಳಿದು ಬಂದಿದ್ದು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈತ ಪಾಟಿಲ ರವರು ಹೊಲದ ಶೆಡ್ ನಲ್ಲೆ ವಾಸ ಮಾಡುತಿದ್ದರು. ಗುರುವಾರ ಬೇರೆ ಊರಿಗೆ ಹೋಗಿ ಬಂದಿದ್ದು ಕಾರು ಸ್ವಲ್ಪ ದೂರದಲ್ಲಿ ನಿಲ್ಲಿಸಿ ನಿದ್ರೆಗೆ ಜಾರಿದ್ದಾರೆ ನಸುಕಿನ ಜಾವದಲ್ಲಿ ಶೌಚಕ್ಕೆ ಎದ್ದಾಗ ಅನಿಲ ಹಾಗು ಅವನ ಮಗ ಮಾರುತಿ ಎಂಬುವವರು ಕಾರಿಗೆ ಬೆಂಕಿ ಹಚ್ಚಿರುವುದನ್ನು ತಾವು ನೋಡಿರುವುದಾಗಿ ಫಿರ್ಯಾದಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಕಿರಾತಕರ ಕೃತ್ಯ ಇದೊಂದೇ ಅಲ್ಲ ಮೊದಲು ಕೂಡಾ ಬಣವಿಗೆ ಬೆಂಕಿ ಹಚ್ಚಿದಾನೆ,ಅದಲ್ಲದೆ , ಹಾರ್ಟಿಕಲ್ಚರ ಬೆಳೆಗಳಾದ ನುಗ್ಗೆಕಾಯಿ ,ಸಿತಾಫಳ ಹಾಗು ಇತರ 200 ಗಿಡಗಳನ್ನು ನಾಶ ಮಾಡಿರುತ್ತಾರೆ, ಇದಕ್ಕಿಂತ ಮೊದಲು ಆತನ ಮೇಲೆ ಎರಡು ಎಫ್ ಐ ಆರ್ ಇದ್ದರು ಕೂಡಾ ಅವನ ಹಳೆ ಚಾಳಿ ಬಿಡುತ್ತಿಲ್ಲ ಎಂದು ಕಾರ ಮಾಲಿಕತ್ವ ಹೊಂದಿದ್ದ ಪಾಟೀಲ ಅವರು ಹೇಳಿಕೆ ನೀಡಿದ್ದಾರೆ.

ಇವರಿಂದ ನನಗೆ ಬಹಳಷ್ಟು ಹಾನಿಯಾಗುತ್ತಿದೆ,ಆದರಿಂದ ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹುಲಸೂರ ಪೋಲಿಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದ್ದು ಈ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿರುವುದಾಗಿ ತಿಳಿದು ಬಂದಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಈಗಿನಿಂದಲೇ ತಟ್ಟಿದ ಚುನಾವಣೆಯ ಬಿಸಿ

ಬೀದರನ ಭಾಲ್ಕಿಯಲ್ಲಿ ತಂದೆ - ಮಗನ ವಿಭಿನ್ನ ಹೋರಾಟ ಬೀದರ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ  ಹತ್ತಿರ ಬರುತ್ತಿದ್ದಂತೆ ಜಿಲ್ಲೆಯ  ಭಾಲ್ಕಿ ಕ್ಷೇತ್ರವು ಎರಡು ರೀತಿಯ ಪ್ರಕರಣಗಳಿಂದ ಸುದ್ದಿಗೆ...
- Advertisement -

More Articles Like This

- Advertisement -
close
error: Content is protected !!