ತಾಲೂಕಿನ ನೀರಾವರಿ ಬವಣೆ ನೀಗಿಸುವಲ್ಲಿ ದಿ.ಮನಗೂಳಿಯವರ ಸಾಧನೆ ಅಮೋಘ – ಡಾ. ಸಾರಂಗ ಶ್ರೀಗಳು

Must Read

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...

ಹೆಣ್ಣು ಮಕ್ಕಳು ಪೌಷ್ಠಿಕ ಆಹಾರ ಸೇವನೆ ಮಾಡಬೇಕು – ಡಾ.ನಯನಾ ಭಸ್ಮೇ

ಸವದತ್ತಿ - “ಹೆಣ್ಣು ಮಕ್ಕಳು ಮಾನಸಿಕವಾಗಿ ಹಾಗೂ ದೈಹಿಕವಾಗಿಯೂ ಸದೃಢವಾಗಿರಬೇಕು ಅವರು ಹದಿ ಹರೆಯದ ವಯಸ್ಸಿಗೆ ಬಂದಾಗ ಅವರಲ್ಲಿ ನೈಸರ್ಗಿಕವಾದ ಬದಲಾವಣೆಗಳು ಆಗುತ್ತವೆ ಅಂತಹ ಸಂದರ್ಭದಲ್ಲಿಯೂ...

ಪ್ರೊ.ಅಲಕಾ ಕುರಣೆ ಯವರಿಗೆ ‘ ಶಿಕ್ಷಕ ಶ್ರೀ ‘ ರಾಜ್ಯ ಮಟ್ಟದ ಪ್ರಶಸ್ತಿ

ಬೆಳಗಾವಿ: ಅಕ್ಷರ ದೀಪ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ವೇದಿಕೆ, ಧಾರವಾಡ ಬೆಂಗಳೂರು ಘಟಕದಿಂದ ನೀಡಲಾಗುವ ರಾಜ್ಯ ಮಟ್ಟದ ಶಿಕ್ಷಕ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಳಗಾವಿಯ...

ಸಿಂದಗಿ: ಶ್ರದ್ಧೆ ಯಾರಲ್ಲಿ ಇರುತ್ತದೆ ಅದು ಸಾಮಾಜಿಕ ಕಾರ್ಯಗಳಲ್ಲಿ ಒಂದಾಗಿ ಕೆಲಸ ಮಾಡುತ್ತದೆ ಅದಕ್ಕೆ ಶ್ರದ್ದೆಯಿಂದ ಕಾರ್ಯನಿರ್ವಹಿಸಿದ ಪ್ರತಿಫಲವಾಗಿ ತಾಲೂಕಿನ ನೀರಾವರಿ ಬವಣೆ ನೀಗಿದಂತಾಗಿದೆ ಅಲ್ಲದೇ ತಾಲೂಕಿನ ಬವಣೆ ನೀಗಿಸುವಲ್ಲಿ ದಿ.ಎಂ.ಸಿ.ಮನಗೂಳಿಯವರ ಸಾಧನೆ ಅಮೋಘವಾದದ್ದು ಅವರನ್ನು ಸ್ಮರಿಸಬೇಕಾಗಿರುವದು ಅತ್ಯವಶ್ಯಕವಾಗಿದೆ ಎಂದು ಸಾರಂಗಮಠದ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಅಭಿಮತ ವ್ಯಕ್ತಪಡಿಸಿದರು.

ಪಟ್ಟಣದ ಕೆರೆಗೆ ರೂ 27.10 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಭ್ರಹತ್ ನೀರಾವರಿ ಯೋಜನೆಯಡಿ ಬಳಗಾನೂರ ಕೆರೆಯಿಂದ ನೀರು ಹರಿಸಲಾಗಿದ್ದು ಅದಕ್ಕೆ ಭಾಗೀನ ಅರ್ಪಿಸಿ ಮಾತನಾಡಿ, ಪಟ್ಟಣದಲ್ಲಿ ಕೆರೆ ನಿರ್ಮಿಸಿ ಯರಗಲ್ ಇಂಡಿ ಮುಖ್ಯ ಕಾಲುವೆಯಿಂದ ನೀರು ತರುವುದಾಗಲಿ, ಮುಳವಾಡ ಏತ ನೀರಾವರಿ, ಚಿಮ್ಮಲಗಿ ಏತನೀರಾವರಿ, ಗುತ್ತಿಬಸವಣ್ಣ ಏತ ನೀರಾವರಿ ತರುವಲ್ಲಿ ದಿ,ಎಂ.ಸಿ.ಮನಗೂಳಿ ಅವರ ಪರಿಶ್ರಮ ಸಾಕಷ್ಠಿದೆ. ಅಂತವರ ಕಾಲದಲ್ಲಿ ಇನ್ನೂ ಹಲವಾರು ಯೋಜನೆಗಳು ಸಹಕಾರಗೊಳ್ಳಬೇಕಾಗಿತ್ತು ಆದರೆ ಅವರು ದೈವಾಧೀನರಾಗಿದ್ದಾರೆ ಮುಂದೆ ಅವರ ಹಾದಿಯಲ್ಲಿ ಹಲವಾರು ಕಾರ್ಯಗಳು ಪ್ರಜ್ವಲಿಸಲಿ ಎಂದು ಶುಭ ಹಾರೈಸಿದರು.

ಊರಿನ ಹಿರಿಯ ಮಠದ ಸಿಂದಗಿ ಕೆರೆಗೆ ನೀರು ಹರಿಸಿದ ದಿ.ಮನಗೂಳಿ ಅವರ ಹೆಸರನ್ನು ಸಿಂದಗಿ ಕೆರೆಗೆ ಇಡಲು ಪುರಸಭೆ ಈಗಾಗಲೇ ಠರಾವು ಪಾಸ ಮಾಡಿದೆ ಅದರ ಜೊತೆಗೆ ಕೆರೆಯಲ್ಲಿ ಅವರ ಪುತ್ತಳಿ ನಿರ್ಮಾಣವಾಗಬೇಕು. ದಿ.ಮನಗೂಳಿ ಅವರು ತಮ್ಮ ಮಕ್ಕಳನ್ನು ಹೆಚ್ಚು ಪ್ರೀತಿಸಿಲ್ಲ ಅದರ ಬದಲಾಗಿ ಸಿಂದಗಿ ಕ್ಷೇತ್ರವನ್ನು ಮತ್ತು ಈ ಕ್ಷೇತ್ರದ ಅಭಿವೃದ್ದಿಯನ್ನು ಹೆಚ್ಚು ಪ್ರೀತಿಸಿದರವರು ಅವರ ಕಾರ್ಯವನ್ನು ಯಾವತ್ತು ಪಟ್ಟಣದ ಜನತೆ ಮರೆಯುವಂತಿಲ್ಲ ಅವರೊಬ್ಬ ಮಾದರಿ ರಾಜಕಾರಣಿ ಎಂದು ಬಣ್ಣಿಸಿದರು.

- Advertisement -

ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥೀ ಅಶೋಕ ಮನಗೂಳಿ ಮಾತನಾಡಿ, ಸಮ್ಮಿಶ್ರ ಸರಕಾರದ ಅವಧಿಯಲ್ಲಿ ಪಟ್ಟಣದ 2055 ವರ್ಷದದ ಅವಧಿಯ ಜನಸಂಖ್ಯೆ ಆಧಾರದನ್ವಯ ನೀರು ಸರಬರಾಜು ಆಗುವಂತೆ ರೂ.27.10 ಕೋಟಿ ವೆಚ್ಚದಲ್ಲಿ ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಹರಿದು ಬಂದಿದ್ದು ಈ ಕಾಮಗಾರಿ ಯಾಗುವಲ್ಲಿ ಸಹಕರಿಸಿದ ಪಟ್ಟಣದ ಜನತೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಪುರಸಭೆ ಅಧ್ಯಕ್ಷ ಡಾ. ಶಾಂತವೀರ ಮನಗೂಳಿ ಮಾತನಾಡಿ, ಪಟ್ಟಣದ ಜನತೆಗೆ 24 ಗಂಟೆಗಳ ಕಾಲ ಕುಡಿಯುವ ನೀರು ಸಿಗಬೇಕು ಎನ್ನುವ ಯೋಜನೆಗೆ ರೂ 13 ಲಕ್ಷ ವೆಚ್ಚ ಮಾಡಿ ಸರ್ವೆ ಕಾರ್ಯ ಮುಗಿಸಿ ಸುಮಾರು ರೂ 60 ಕೋಟಿ ವೆಚ್ಚದ ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದ್ದು ಮುಂಬರುವ ದಿನಗಳಲ್ಲಿ ಎಲ್ಲ ಸದಸ್ಯರ ನಿಯೋಗದೊಂದಿಗೆ ಸರಕಾರಕ್ಕೆ ಮನವರಿಕೆ ಮಾಡಿಕೊಂಡು ದಿನದ 24 ಗಂಟೆಗೆ ಕಾಲ ನೀರು ಕೊಡುವ ಯೋಜನೆಗೆ ಪ್ರಾಮಾಣಿಕವಾಗಿ ಪ್ರಯತ್ನಸುವದಾಗಿ ಹೇಳಿದರು.

ಪುರಸಭೆಯ ಸದಸ್ಯ ರಾಜಣ್ಣ ನಾರಾಯಣಕರ, ಕಾಂಗ್ರೆಸ್ ಮುಖಂಡ ಶರಣಪ್ಪ ವಾರದ, ಮಾಜಿ ಪುರಸಭೆಯ ಸದಸ್ಯ ರಾಜಶೇಖರ ಕೂಚಬಾಳ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆಯ ಉಪಾಧ್ಯಕ್ಷ ಹಾಸಿಂ ಆಳಂದ, ಸದಸ್ಯರಾದ ಶಾಂತವೀರ ಬಿರಾದಾರ, ಶ್ರೀಶೈಲ ಬೀರಗೊಂಡ, ಬಸವರಾಜ ಯರನಾಳ, ಶರಣಗೌಡ ಪಾಟೀಲ ಮತ್ತು ಮುಖಂಡರಾದ ಮಹಾಂತೇಶ ಪಟ್ಟಣಶೆಟ್ಟಿ, ಡಾ.ಸಂಧ್ಯಾ ಮನಗೂಳಿ, ಮಹಾದೇವ ಸುಲ್ಪಿ, ಚನ್ನು ಪಟ್ಟಣಶೆಟ್ಟಿ, ಬಸವರಾಜಗುಗ್ಗರಿ, ಚನ್ನಪ್ಪಗೋಣಿ, ಮಹೇಶ ಮನಗುಳಿ, ಭೀಮನಗೌಡ ಬಿರಾದಾರ, ಮಲ್ಲಿಕಾರ್ಜುನ ಶಂಬೇವಾಡ, ಸಂಗಯ್ಯ ಹಿರೇಮಠ, ವ್ಹಿ.ಬಿ.ಕುರುಡೆ,ಪಾಪಾ ಚಾಂದಕೋಟೆ,ಬಸ್ಸು ಪಾಟೀಲ, ಶಬೀರ ಮರ್ತೂರ, ಗುರು ಬಸರಕೋಡ, ಶಿವು ಉಪ್ಪಿನ, ಪರುಶುರಾಮ ಕಾಂಬಳೆ, ನೂರಹ್ಮದಅತ್ತಾರ, ಮಂಜುನಾಥ ಬಿಜಾಪೂರ ಸೇರಿದಂತೆ ಅನೇಕರು ಇದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕುಡಿಯುವ ನೀರು ವ್ಯತ್ಯಯ ಆಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ರುದ್ರೇಶ ಘಾಳೆ

ಬೆಳಗಾವಿ - ಕಾರ್ಮಿಕರು ತಮ್ಮ ಬೇಡಿಕೆಗಳನ್ನು ಈಡೇರಿಸಲು ನಡೆಸಿದ ಮುಷ್ಕರದಿಂದಾಗಿ ಬೆಳಗಾವಿ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆಯಲ್ಲಿ ತೊಂದರೆ ಉಂಟಾಗಿದ್ದು ವಿಷಾದನೀಯವಾಗಿದೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿ...
- Advertisement -

More Articles Like This

- Advertisement -
close
error: Content is protected !!