spot_img
spot_img

ಪ್ರಸಾರಾಂಗದ ಕಾರ್ಯವೈಖರಿ ಪ್ರಶಂಸನೀಯ -ಪ್ರೊ. ಸಿ. ಬಿ. ಹೊನ್ನುಸಿದ್ಧಾರ್ಥ

Must Read

ಬೆಳಗಾವಿ: ಪ್ರಸಾರಾಂಗವು ವಿಶ್ವವಿದ್ಯಾಲಯದಲ್ಲಿ ಆಡಳಿತಾಂಗ ಮತ್ತು ಪರಿಕ್ಷಾಂಗಗಳಷ್ಟೇ ಪ್ರಮುಖವಾದದ್ದು, ಆಡಳಿತಾಂಗವು ವಿಶ್ವವಿದ್ಯಾಲಯದ ಭೌತಿಕ ಪ್ರಗತಿಯ ಕಡೆಗೆ ತನ್ನ ಗಮನವನ್ನು ಕೇಂದ್ರೀಕರಿಸುತ್ತದೆ. ಆದರೆ ಪ್ರಸಾರಾಂಗವು ವಿಶ್ವವಿದ್ಯಾಲಯದ ಭೌದ್ಧಿಕ ಪ್ರಗತಿಗೆ ಹಾಗೂ ಜ್ಞಾನದ ಪ್ರಸರಣಕ್ಕೆ ಸಮುದಾಯಮುಖಿಯಾಗಿ ಕೆಲಸ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಸಾರಾಂಗವು ವಿಶೇಷ ಉಪನ್ಯಾಸ ಮಾಲಿಕೆಯನ್ನು ಭಾರತ ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಅಂಗವಾಗಿ ಆರಂಭಿಸುತ್ತಿರುವುದು ನಿಜಕ್ಕೂ ಶ್ಲಾಘನೀಯವಾದ ಸಂಗತಿಯಾಗಿದೆ ಎಂದು ಪ್ರೊ. ಸಿ. ಬಿ. ಹೊನ್ನುಸಿದ್ದಾರ್ಥ ಅವರು ಅಭಿಪ್ರಾಯಪಟ್ಟರು.

ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ಪ್ರಸಾರಾಂಗದ ವತಿಯಿಂದ ದಿನಾಂಕ 09-07-2022ರಂದು ವಿಶೇಷ ಸರಣಿ ಉಪನ್ಯಾಸ ಮಾಲೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರೊ. ಬಸವರಾಜ ಪದ್ಮಶಾಲಿ ಅವರು ಯುವ ಪೀಳಿಗೆಯು ಭಾರತೀಯ ಸಂಸ್ಕೃತಿಯ ಮಹತ್ವವನ್ನು ಅರಿಯದೇ ವಿದೇಶಿ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುರುವುದು ಕಳವಳಕಾರಿ ಎಂದರು.

ಇದೇ ಸಂದರ್ಭದಲ್ಲಿ ವಿಶೇಷ ಉಪನ್ಯಾಸವನ್ನು ನೀಡಿದ ಪ್ರೊ. ಎಸ್. ಎಂ. ಗಂಗಾಧರಯ್ಯ ಅವರು ಬದಲಾದ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿ ಮಾತ್ರವಲ್ಲ ಜಾಗತಿಕ ಸಂಸ್ಕೃತಿ ಇತಿಹಾಸವನ್ನು ಪುನಾರಚಿಸುವ ಕಾರ್ಯ ಶೈಕ್ಷಣಿಕ ವಲಯದಲ್ಲಿ ತುರ್ತಾಗಿ ನಡೆಯಬೇಕಾಗಿದೆ. ಈವರೆಗೆ ಇದ್ದ ಸಂಸ್ಕೃತಿ ಸಂಶೋಧನೆಯ ಮಾದರಿಯು ಹಲವು ವೈರುಧ್ಯಗಳನ್ನು ಹುಟ್ಟುಹಾಕಿದೆ. ಆದುದರಿಂದ ಸಂಸ್ಕೃತಿ ಚರಿತ್ರೆಯ ಪುನಾರಚನೆ ನಡೆಯಬೇಕು ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಸ್. ಬಿ. ಆಕಾಶ ಅವರು ಸಂಸ್ಕೃತಿ ಅಧ್ಯಯನವೆಂದರೆ ಉಳ್ಳವರ ಹಾಗೂ ಕಲಿತವರ ಕುರಿತು ಅಧ್ಯಯನವಲ್ಲ ವಾಸ್ತವ ಸಂಗತಿಗಳನ್ನು ಅಧ್ಯಯನಿಸುವುದಾಗಿದೆ ಎಂದರು.

ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಡಾ. ಪಿ. ನಾಗರಾಜ ಅವರು ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಡಾ. ಗಜಾನನ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಶೋಭಾ ನಾಯಕ ವಂದಿಸಿದರು.

ಡಾ. ಮಹೇಶ ಗಾಜಪ್ಪನವರ ಹಾಗೂ ಡಾ. ಅನಸೂಯಾ ಕಾಂಬಳೆ ಅವರು ಪ್ರತಿಕ್ರಿಯೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರೊ. ಸಿ.ಬಿ. ಹೊನ್ನುಸಿದ್ಧಾರ್ಥ ಅವರನ್ನು ಹಾಗೂ ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡ ಹಿನ್ನೆಲೆಯಲ್ಲಿ ಡಾ. ಶೋಭಾ ನಾಯಕ ಅವರನ್ನು ಪ್ರಸಾರಾಂಗ, ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆ ಹಾಗೂ ವಿದ್ಯಾರ್ಥಿಗಳು ಸನ್ಮಾನಿಸಿದರು.

ಸಂಶೋಧನಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿವರ್ಗದವರು ಹಾಜರಿದ್ದರು.

- Advertisement -
- Advertisement -

Latest News

ತೆರೆಮರೆಯ ಹೋರಾಟಗಾರರ ಕಥೆಗಳು ಬೆಳಕಿಗೆ ಬರಬೇಕು – ಕಿರಣ ಗಣಾಚಾರಿ

ಖಾನಾಪೂರ: ಬ್ರಿಟಿಷರ ದಾಸ್ಯತ್ವದಿಂದ ಮುಕ್ತರಾಗಬೇಕೆಂದು ಹೋರಾಟ ಮಾಡಿದವರಲ್ಲಿ ನಮ್ಮ ಸುತ್ತಮುತ್ತಲಿನ ಅದೆಷ್ಟೋ ಮಹನೀಯರ ಪಾತ್ರವೂ ದೊಡ್ಡದಿದೆ. ಅಂತಹ ತೆರೆಮರೆಯಲ್ಲುಳಿದು ತ್ಯಾಗ ಬಲಿದಾನದ ಮಾಡಿದವರ ಕಥೆಗಳನ್ನು ಇಂದಿನ...
- Advertisement -

More Articles Like This

- Advertisement -
close
error: Content is protected !!