ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಮನ್ವಯ ಶಿಕ್ಷಣದಲ್ಲಿ ಸಮಾನ ಅವಕಾಶ ಕೊಡುವುದು ಆದ್ಯತೆ – ಅರ್ಜುನ ಕಂಬೋಗಿ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಸವದತ್ತಿ – ಸರ್ವರಿಗೂ ಶಿಕ್ಷಣ ಎಂಬುದು ಮಕ್ಕಳ ಸಂವಿಧಾನ ಬದ್ಧ ಹಕ್ಕು.ಅದರಲ್ಲಿ ಸಮನ್ವಯ ಶಿಕ್ಷಣ ಕೂಡ. ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಇಲಾಖೆಯ ನಿಯಮಾನುಸಾರ ಮುಖ್ಯವಾಹಿನಿಯಲ್ಲಿ ಸೇರ್ಪಡೆಗೊಳಿಸುವ ಜೊತೆಗೆ ಅವರ ಕಲಿಕೆಗೆ ಸಮಾನ ಅವಕಾಶ ನೀಡುವ ಮೂಲಕ ಸಮನ್ವಯಗೊಳಿಸುವುದು.ಅವರಿಗೂ ಸಮಾನ ಅವಕಾಶ ನೀಡುವ ಮೂಲಕ ಕಲಿಕಾ ಚಟುವಟಿಕೆಗಳಲ್ಲಿ ಅವಕಾಶ ನೀಡುವುದು ಶಿಕ್ಷಕರು ಮುಖ್ಯೋಪಾಧ್ಯಾಯರು.ಪಾಲಕರು ಎಲ್ಲರ ಕರ್ತವ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅರ್ಜುನ ಕಂಬೋಗಿ ತಿಳಿಸಿದರು.

ಅವರು 2021-22 ನೇ ಸಾಲಿನಲ್ಲಿ ಸಮನ್ವಯ ಶಿಕ್ಷಣ ಕಾರ್ಯ ಚಟುವಟಿಕೆಗಳ ಕುರಿತಂತೆ ಗೂಗಲ್ ಮೀಟ್ ಮೂಲಕ ಮುನವಳ್ಳಿ ವಲಯದ ಸರಕಾರಿ ಅನುದಾನಿತ ಅನುದಾನ ರಹಿತ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಉದ್ದೇಶಿಸಿ ಮಾತನಾಡಿದರು.

ಸಮಾನ ಶಿಕ್ಷಣ ವ್ಯವಸ್ಥೆಯಲ್ಲಿ ಸಾಗುತ್ತಿರುವ ನಾವುಗಳು ಪ್ರತಿಯೊಂದು ಮಗುವಿಗೂ ಸಮಾನ ಅವಕಾಶಗಳನ್ನು ಕಲ್ಪಿಸುವುದು ಎಲ್ಲರ ಕರ್ತವ್ಯ.ವಿಕಲಚೇತನ ಮಕ್ಕಳ ಮಾಹಿತಿಯನ್ನು ಎಸ್.ಎ.ಟಿ.ಎಸ್.ನಲ್ಲಿ ಸರಿಯಾಗಿ ನಮೂದಿಸುವ ಜೊತೆಗೆ ಮಕ್ಕಳಿಗೆ ಸಿಗಬೇಕಾದ ಸೌಲಭ್ಯಗಳು. ವೈದ್ಯಕೀಯ ಪ್ರಮಾಣಪತ್ರ. ಯು.ಡಿ.ಐ.ಡಿ ಕಾರ್ಡ ಅರ್ಜಿ.ಸಲ್ಲಿಸುವ ಕುರಿತು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ ಈ ಸಂದರ್ಭದಲ್ಲಿ ತಿಳಿಸಿದರು.

- Advertisement -

ಈ ಕಾರ್ಯಕ್ರಮದಲ್ಲಿ ಮುನವಳ್ಳಿ ಸಿಂದೋಗಿ ಅರ್ಟಗಲ್ ಹೂಲಿ ಹೂಲಿಕಟ್ಟಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಎಫ್.ಜಿ.ನವಲಗುಂದ, ತಿಮ್ಮಯ್ಯ.ಶಿವಲಿಂಗ ಕುರಿ.ಎಸ್.ವೈ.ನಿಪ್ಪಾಣಿ. ಮಹಾದೇವಿ ಕುಂಬಾರ. ಮುನವಳ್ಳಿ ವಲಯದ ಮುಖ್ಯೋಪಾಧ್ಯಾಯರುಗಳು ಉಪಸ್ಥಿತರಿದ್ದರು.ಸಮನ್ವಯ ಶಿಕ್ಷಣ ಕುರಿತು ಪ್ರಾಸ್ತಾವಿಕವಾಗಿ ಎಸ್.ಬಿ.ಬೆಟ್ಟದ ಪ್ರಾರಂಭದಲ್ಲಿ ಮಾತನಾಡಿದರು. ನಂತರ ಎಂ.ಎಂ.ಸಂಗಮ 21 ವಿಕಲತೆಗಳ ಪರಿಚಯ.ಎಸ್.ಎ.ಟಿ.ಎಸ್.ನಲ್ಲಿ ದಾಖಲಿಸುವುದು ಕುರಿತು ಮಾಹಿತಿಯನ್ನು ತಿಳಿಸಿದರು.

ಮಕ್ಕಳ ದಾಖಲಾದ ನಂತರ ಅವರ ಮಾಹಿತಿಯನ್ನು ಯಾವ ರೀತಿ ಇಡಬೇಕು. ಮಗುವಿನ ಪೂರ್ಣ ವಿವರ. ಬ್ಯಾಂಕ್ ಖಾತೆ ಸಂಖ್ಯೆ. ಆಧಾರ ಮಾಹಿತಿ. ವೈದ್ಯಕೀಯ ಪ್ರಮಾಣಪತ್ರ. ಯು.ಡಿ.ಐ.ಡಿ ಕಾರ್ಡಗೆ ಸಂಬಂಧಿಸಿದಂತೆ ಮಾಹಿತಿಯನ್ನು ಯಾವ ರೀತಿಯಲ್ಲಿ ಇಟ್ಟುಕೊಂಡು ಅದರ ಜೊತೆಗೆ ಗೃಹ ಆಧಾರಿತ ಮಕ್ಕಳಿಗೆ ಸಂಬಂಧಿಸಿದ ನಮೂನೆಯ ಭರ್ತಿ ಮಾಡುವ ಕುರಿತು ಮಾಹಿತಿ ನೀಡುತ್ತ ಸದರಿ ವಿವರದ ನಮೂನೆಗಳನ್ನು ಸಂಬಂಧಿಸಿದ ಬಿ.ಐ.ಇ.ಆರ್.ಟಿ ಯವರಿಗೆ ಒದಗಿಸುವ ಕುರಿತು ವೈ.ಬಿ.ಕಡಕೋಳ ತಿಳಿಸಿದರು.

ಸಿ.ವ್ಹಿ.ಬಾರ್ಕಿ ಮಾತನಾಡುತ್ತ ಶಾಲೆಯಲ್ಲಿ ಇಡಬೇಕಾದ ದಾಖಲಾತಿಗಳು ಮತ್ತು ವಿಕಲಚೇತನ ಮಕ್ಕಳಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಕುರಿತು” ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ನಿರ್ವಹಣೆಯನ್ನು sಸಿ.ಆರ್.ಪಿ ಎಸ್.ಸಿ.ಕುರಿ ಹೋಸ್ಟ ಆಗುವ ಜೊತೆಗೆ ಸ್ವಾಗತ ಮತ್ತು ವಂದನಾರ್ಪಣೆಯನ್ನು ನಿರ್ವಹಿಸಿದರು.

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!