ವಿಜಯಪುರ – ನಾಲ್ಕು ವರ್ಷದ ಗಂಡು ಮಗು ಕಳ್ಳತನಕ್ಕೆ ಯತ್ನಿಸಿದ ಕಳ್ಳನ ಬೆನ್ನಟ್ಟಿ ಕಳ್ಳನಿಂದ ಮಗುವನ್ನು ತಾಯಿ ರಕ್ಷಿಸಿದ್ದಲ್ಲದೆ ಬಳಿಕ ಸ್ಥಳೀಯರು ಕಳ್ಳನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ವಿಜಯಪುರದಲ್ಲಿ ನಡೆದಿದೆ.
ಜನ ಜಮಾಯಿಸಿದ್ದನ್ನು ನೋಡಿದ ಕಳ್ಳ ಮಾನಸಿಕ ಅಸ್ವಸ್ಥನಂತೆ ಡ್ರಾಮಾ ಮಾಡತೊಡಗಿದ್ದು ಹೆಸರು ಕೇಳಿದರೆ ಹಲವು ಹೆಸರು ಹೇಳುತ್ತಿದ್ದನೆಂದು ವರದಿಯಾಗಿದೆ.
ವಿಜಯಪುರ ನಗರದ ಬಸವನ ನಗರದಲ್ಲಿ ನಿನ್ನೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಂತೋಷ್ -ರೇಣುಕಾ ದಂಪತಿಯ ಗಂಡು ಮಗು ನಾಲ್ಕು ವರ್ಷದ ಮಗು ಅಂಗಡಿಗೆ ಬಂದಾಗ ಮಗುವನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿದ್ದ. ಮಗು ಅಳುವ ಧ್ವನಿ ಕೇಳಿ ತಾಯಿ ರೇಣುಕಾ ಕಳ್ಳನ ಬೆನ್ನಟ್ಟಿ ಹಿಡಿದು ಮಗುವಿನ ರಕ್ಷಣೆ ಮಾಡಿ ಬಳಿಕ ಕಳ್ಳನನ್ನು ಹಿಡಿದು ಕಂಬಕ್ಕೆ ಕಟ್ಟಿ ಥಳಿಸಲಾಗಿದೆ. ಈ ಸಮಯದಲ್ಲಿ ಆತ ತನ್ನ ಹೆಸರು ದಾದಾಪೀರ, ಕಾಸೀಮ್, ಸಲೀಮ್, ಮೈಬೂಬ್ ಎಂದೆಲ್ಲ ಹೆಸರು ಹೇಳಿದ್ದಾನೆ ಅಲ್ಲದೆ ಮಾನಸಿಕ ಅಸ್ವಸ್ಥನಂತೆ ನಾಟಕವಾಡಿದ್ದಾನೆ. ಕೊನೆಗೆ ಆತನನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದಾರೆ. ವಿಜಯಪುರ ಗ್ರಾಮೀಣ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ