spot_img
spot_img

ದೇವಿಯ ಪುರಾಣವು ಮನಸ್ಸಿನ ಪರಿಶುದ್ಧತೆಗೆ ಅನುಕೂಲಕರ ಅಂಶಗಳನ್ನು ಒಳಗೊಂಡಿದೆ – ನರಗುಂದ ಪತ್ರೀವನದ ಪೂಜ್ಯರು

Must Read

ಮುನವಳ್ಳಿ – “ದೇವಿಯ ಪುರಾಣವು ದೇವಿಯ ಪುರಾಣವಷ್ಟೇ ಇರದೇ ದೇಹ ಪುರಾಣವಾಗಿದೆ. ಮನಸ್ಸಿನ ಪರಿಶುದ್ಧತೆಗೆ ಸಾಂಕೇತಿಕ ಪ್ರತಿಮೆ ಬಳಸಿಕೊಂಡು ಚಿದಾನಂದ ಅವಧೂತರು ದೇವಿ ಪುರಾಣ ಬರೆದಿರುವರು.

ಈ ನವರಾತ್ರಿಯ ಸಂದರ್ಭ ದೇವಿ ಪುರಾಣ ಪಠಿಸುವುದರಿಂದ ದೇಹ ಶುದ್ದಿಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ.ದೇವಿ ಪುರಾಣವು ಭಾಮಿನಿ ಷಟ್ಪದಿಯಲ್ಲಿದೆ. ಚಿದಾನಂದ ಅವಧೂತರು ಈಗಿನ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಯೋಧ್ಯೆಯಲ್ಲಿದ್ದ ತಮ್ಮ ಗುರುಗಳ ಬಳಿ ಅಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ಇವರ ಗುರುಗಳು ಇವರಿಗೆ ಬೀಜಾಕ್ಷರ ಉಪದೇಶ ಮಾಡಿ. ನೀನು ಸಿದ್ದಾಪುರಕ್ಕೆ ಹೋಗಪ್ಪ ಅಲ್ಲಿ ದೇವಿಯ ಅನುಗ್ರಹವಾಗುತ್ತದೆ. ನಿನ್ನಿಂದ ದೊಡ್ಡ ಕಾರ್ಯ ಆಗುತ್ತದೆ ಎಂದು ಹೇಳಿ ಕಳಿಸಿದಾಗ ಸಿದ್ಧಪರ್ವತಕೆ ಬಂದು ತಪಸ್ಸನ್ನು ಮಾಡಿ ದೇವಿಯ ಅನುಗ್ರಹದ ಮೂಲಕ ಬಗಳಾ ಶತಕ ಗ್ರಂಥ ರಚಿಸುತ್ತಾರೆ. ನಮ್ಮ ದೈನಂದಿನ ಬದುಕಿನಲ್ಲಿ ದೇವಿ ಪುರಾಣದ ಅಂಶಗಳು ಮಹತ್ವ ಪಡೆದಿವೆ. ಒಳ್ಳೆಯದನ್ನು ಮಾಡಲು ಪ್ರತಿ ಶ್ಲೋಕವು ನಮಗೆ ಅನುಕೂಲ ಅಂಶಗಳನ್ನು ತಿಳಿಸಿದೆ.” ಎಂದು ನರಗುಂದ ಪತ್ರೀವನದ ಪರಮಪೂಜ್ಯ ಶ್ರೀ ಗುರುಸಿದ್ದವೀರ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ತಿಳಿಸಿದರು.

ಅವರು ಮುನವಳ್ಳಿ ಪಟ್ಟಣದ ಶ್ರೀ ಅಂಬಾ ಭವಾನಿ ದೇವಾಲಯದ ೧೪ ನೇ ವರ್ಷದ ನವರಾತ್ರಿ ಉತ್ಸವದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. “ದೇವಿ ಪುರಾಣದಲ್ಲಿ ಕೆಟ್ಟ ಗುಣಗಳೆಂಬ ರಾಕ್ಷಸರನ್ನು ಅನೇಕ ಅವತಾರಗಳ ಮೂಲಕ ದೇವಿಯು ಸಂಹರಿಸಿ ಭಕ್ತರನ್ನು ಕಾಪಾಡಿರುವಳು. ಇಂತಹ ಪುರಾಣ ಪ್ರವಚನಗಳನ್ನು ಕೇಳುವುದರಿಂದ ನಮ್ಮ ದೇಹದ ಆರೋಗ್ಯ ಮತ್ತು ಆಯುಷ್ಯ ವೃದ್ಧಿಗಾಗಿ ಪ್ರೀತಿ. ವಿಶ್ವಾಸ ಹಾಗೂ ಸಹಕಾರದೊಂದಿಗೆ ಸುಂದರ ಜೀವನ ನಡೆಸುವುದು ಸಾಧ್ಯ. ನಮ್ಮ ಜೀವನದಲ್ಲಿ ಹೆತ್ತತಾಯಿ,ಭೂಮಿತಾಯಿ ಹಾಗೂ ಗುರುವಿನ ಋಣ ಎಂದೂ ತೀರಿಸಲಾಗದು ಎಂಬುದನ್ನು ಹಲವು ದೃಷ್ಟಾಂತಗಳೊಂದಿಗೆ ಈ ಸಂದರ್ಭದಲ್ಲಿ ಪೂಜ್ಯರು ಗ್ರಾಮ್ಯ ಭಾಷೆಯ ಸೊಗಡಿನೊಂದಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮುನವಳ್ಳಿ ಶ್ರೀ ಸೋಮಶೇಖರ ಮಠದ ಪರಮಪೂಜ್ಯ ಮುರುಘೇಂದ್ರ ಮಹಾಸ್ವಾಮಿಗಳು ಶ್ರೀ ದೇವಿ ಪುರಾಣ ಪ್ರವಚನಕಾರರಾದ ಸಂಗಯ್ಯ ಹಿರೇಮಠ. ಅಧ್ಯಕ್ಷರಾದ ಸೋಮಶೇಖರ ಯಲಿಗಾರ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ನಡೆಸಲಾದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದ ಮಹಿಳೆಯರಾದ ಸಾವಿತ್ರಿ ಹುಲ್ಲೂರ (ಪ್ರಥಮ).ಹೇಮಾ ವಗ್ಗಯ್ಯಗೋಳ (ದ್ವಿತೀಯ) ಶ್ವೇತಾ ಕಳಸನ್ನವರ (ತೃತೀಯ) ಮಕ್ಕಳಿಗಾಗಿ ನಡೆಸಿದ ಸ್ಪರ್ಧೆಯಲ್ಲಿ ಅಂಕಿತಾ ಹುಲ್ಲೂರ (ಪ್ರಥಮ)ರಜಿನಿ ಕಳಸನ್ನವರ (ದ್ವಿತೀಯ)ವಿದ್ಯಾ ಸೂರನ್ನವರ (ತೃತೀಯ) ಬಹುಮಾನಗಳನ್ನು ವೇದಿಕೆಯ ಗಣ್ಯರು ವಿತರಿಸಿದರು. ಈ ಕಾರ್ಯಕ್ರಮದ ಸಂಘಟನೆಯಲ್ಲಿ ತಮ್ಮದೇ ಪಾತ್ರವಹಿಸುತ್ತಿದ್ದ ದಿವಂಗತ ಜಯಶ್ರೀ ಕುಲಕರ್ಣಿ ಗುರುಮಾತೆಯ ಸ್ಮರಣೆಗಾಗಿ ಒಂದು ನಿಮಿಷದ ಮೌನವನ್ನು ಆಚರಿಸುವ ಮೂಲಕ ಅವರನ್ನು ಸ್ಮರಿಸಲಾಯಿತು.

ಆಶೀರ್ವಚನ ನೀಡಿದ ಮುನವಳ್ಳಿಯ ಸೋಮಶೇಖರಮಠದ ಪರಮಪೂಜ್ಯ ಮುರುಘೇಂದ್ರ ಮಹಾಸ್ವಾಮಿಗಳವರು ಮಾತನಾಡುತ್ತ “ ನಮ್ಮಲ್ಲಿರುವ ಅಸತ್ಯ, ಅಸುರೀಗುಣ, ಅಹಂಕಾರವನ್ನು ತ್ಯಜಿಸಿ ಸನ್ಮಾರ್ಗದಲ್ಲಿ ನಡೆಯಲು ದೇವಿ ಪುರಾಣ ಮಹತ್ವದ್ದಾಗಿದೆ.

ಕಾಯಾ ವಾಚಾ ಮನಸಾ ಈ ಪುರಾಣ ಭಕ್ತಿಯಿಂದ ಪಠಿಸಬೇಕು. ನಮ್ಮ ಹತ್ತಿರದ ಶ್ರೀ ರೇಣುಕಮಾತೆ (ಯಲ್ಲಮ್ಮಾ) ಹಾಗೂ ಸಿರಸಂಗಿ ಕಾಳಿಕಾಮಾತೆ ಶಕ್ತಿಪೀಠಗಳಾಗಿವೆ.ಹಾಗೆಯೇ ಎಕ್ಕೇರಿ ಕರೆಮ್ಮದೇವಿ. ಹೀಗೆ ದೇವಿ ಆರಾಧನೆ ಮಹತ್ವವನ್ನು ಎಷ್ಟು ಹೇಳಿದರೂ ಕಡಿಮೆಯೇ. ಪತ್ರೀವನದ ಪೂಜ್ಯರು ಗ್ರಾಮೀಣ ಸೊಗಡಿನಲ್ಲಿ ದೇವಿಯ ಪುರಾಣದ ದೃಷ್ಟಾಂತಗಳನ್ನು ನೀಡುವ ಮೂಲಕ ಇಂದು ದೇವಿ ಪುರಾಣ ದೇಹದ ಪುರಾಣವಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

ಇಂದು ಜಯಶ್ರೀ ಕುಲಕರ್ಣಿ ಗುರುಮಾತೆ ನಿಧನರಾಗಿದ್ದರೂ ಕೂಡ ಅವರ ಮಗ ಶ್ರೀನಾಥ ಕುಲಕರ್ಣಿ ಹಾಗೂ ಕುಟುಂಬದವರು ತಾಯಿ ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿರುವರು. ಇಲ್ಲಿನ ಶಿವಾಜಿ ಯುವಕ ಮಂಡಳ, ದುರ್ಗಾಮಾತಾ ದೌಡ, ಅಂಭಾ ಭವಾನಿ ಸದಭಕ್ತ ಮಂಡಳಿ ಎಲ್ಲರೂ ತಮ್ಮ ಸಂಘಟನೆಯ ಮೂಲಕ ಅಂಬಾ ಭವಾನಿ ನವರಾತ್ರಿ ಉತ್ಸವವನ್ನು ಒಳ್ಳೆಯ ರೀತಿಯಲ್ಲಿ ಸಂಘಟಿಸಿಕೊಂಡು ಬಂದಿರುವಿರಿ. ಎಲ್ಲರಿಗೂ ದೇವಿಯ ಅನುಗ್ರಹ ಸದಾ ಇರಲಿ”ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ತಾನಾಜಿರಾವ ಮುರಂಕರ, ದೇವಿ ಅರ್ಚಕರಾದ ಶ್ರೀಶೈಲ ಪೂಜೇರ, ಯಲ್ಲಪ್ಪ ಪೂಜೇರ, ಶ್ರೀನಾಥ ಕುಲಕರ್ಣಿ, ಬಸವರಾಜ ಶಿವಪೇಟಿ, ವೈ.ಬಿ.ಕಡಕೋಳ, ಬಸವರಾಜ ಬಡೆಮ್ಮಿ, ಬಿ.ಬಿ.ಹುಲಿಗೊಪ್ಪ, ಪ್ರಶಾಂತ ತುಳಜನ್ನವರ, ಗುರುನಾಥ ಪತ್ತಾರ, ಬಸವರಾಜ ಪವಾರ, ಸೋಮು ಮುರಗೋಡ, ರಾಧಾ ಕುಲಕರ್ಣಿ, ಸವಿತಾ ಕೆಂದೂರ, ಜ್ಯೋತಿ ಯಲಿಗಾರ, ದೀಪಾ ಯಲಿಗಾರ, ಸುಮಾ ಯಲಿಗಾರ, ನಂದಿತಾ ವಗ್ಗಯ್ಯಗೋಳ, ಹೇಮಾ ವಗ್ಗಯ್ಯಗೋಳ, ಸುಮಾ ಮುರಂಕರ, ಅಂಬುಜಾ ಕುಲಕರ್ಣಿ ಸೇರಿದಂತೆ ಶಿವಾಜಿ ಯುವಕ ಮಂಡಳ, ದುರ್ಗಾಮಾತಾದೌಡ, ಶ್ರೀ ಅಂಬಾ ಭವಾನಿ ಸದಭಕ್ತ ಮಂಡಳಿಯ ಸರ್ವ ಸದಸ್ಯರೂ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಅಂಬುಜಾ ಕುಲಕರ್ಣಿ ಹಾಗೂ ಸವಿತಾ ಕೆಂದೂರ ಅವರಿಂದ ಪ್ರಾರ್ಥನೆ ಜರುಗಿತು. ಶಿಕ್ಷಕರಾದ ಬಿ.ಬಿ.ಹುಲಿಗೊಪ್ಪ ಸ್ವಾಗತಿಸಿದರು. ಗುರುನಾಥ ಪತ್ತಾರ ಕಾರ್ಯಕ್ರಮ ನಿರೂಪಿಸುವ ಜೊತೆಗೆ ವಂದನಾರ್ಪಣೆಗೈದರು. ಕಾರ್ಯಕ್ರಮದ ನಂತರ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!