ನಮ್ಮನ್ನು ಕೆರಳಿಸುವುದಕ್ಕೆ ಜಗತ್ತಿನಲ್ಲಿ ಜಾತಿ ಮತ ಪಂಥ ಪಂಗಡ ಪಕ್ಷ; ಗಂಡು ಹೆಣ್ಣು; ಶೋಷಣೆ ಪೋಷಣೆ; ಎಡ ಬಲ ನಡು ಹೀಗೆ ಹಲವು ಸಂಗತಿಗಳಿವೆ.
ನಮ್ಮನ್ನು ಭಯದಲ್ಲಿ ಮುಳುಗಿಸುವುದಕ್ಕೂ ಸಾಕಷ್ಟು ವಿಷಯಗಳಿವೆ; ಅವನ್ನು ರಣರೋಚಕವೆಂಬಂತೆ ನಮ್ಮೆದುರು ಪ್ರಸ್ತುತಪಡಿಸುವ ಮಾಧ್ಯಮಗಳಿವೆ.
ಗಮನಾರ್ಹ ಸಂಗತಿಯೆಂದರೆ, ಈ ಸಂಗತಿಗಳೆಲ್ಲ ಮೊದಲೂ ಇದ್ದವು; ಇಂದೂ ಇವೆ; ಮುಂದೂ ಇರುತ್ತವೆ. ಇವುಗಳಿಗೆಲ್ಲ ಪ್ರತಿಕ್ರಿಯಿಸುತ್ತ ಕುಳಿತುಕೊಂಡರೆ ನಮ್ಮ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ, ಅಷ್ಟೆ.
ಇಂದು ನಮಗೆ ಬೇಕಿರುವುದು ಕೆರಳಿಸುವ, ಕ್ಷಣಕ್ಕೊಮ್ಮೆ ಅತ್ತಿತ್ತ ಮನಸ್ಸನ್ನು ಹೊರಳಿಸುವ ಸಂಗತಿಗಳಲ್ಲ; ನಮ್ಮ ಮನಸ್ಸು ಬುದ್ಧಿಗಳನ್ನು ಅರಳಿಸುವ ವಿಷಯಗಳು!
ಶ್ರೀರಾಮಕಥೆಯ ಓದು ನಮ್ಮ ಮನಸ್ಸು ಬುದ್ಧಿಗಳನ್ನು ಅರಳಿಸುವುದಷ್ಟೇ ಅಲ್ಲ, ಮನಸ್ಸು ಬುದ್ಧಿಗಳು ಕಳೆದುಕೊಂಡಿರುವ ಚೈತನ್ಯವನ್ನೂ ಮರಳಿಸುತ್ತದೆ!
ಸರಳ ಕನ್ನಡದಲ್ಲಿ, ಸುಲಲಿತ ಶೈಲಿಯಲ್ಲಿ, ಪ್ರೌಢಶಾಲೆಯ ಮಕ್ಕಳಿಂದ ಹಿಡಿದು ಎಲ್ಲರೂ ಓದಬಹುದಾದ ರೀತಿಯಲ್ಲಿ ಇರುವ ಸಮಗ್ರ ರಾಮಾಯಣ ಶ್ರೀಚಾಮರಾಜೋಕ್ತಿವಿಲಾಸವೆಂಬ ಕನ್ನಡ ರಾಮಾಯಣ.
೧/೪ ಕ್ರೌನ್ ಅಳತೆಯ, ೧೧೫೦+ ಪುಟಗಳ, ರೂ.೮೦೦.೦೦ ಮುಖಬೆಲೆಯ #ಕನ್ನಡ_ರಾಮಾಯಣ ವನ್ನು ಖರೀದಿಸಲು, ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯಾಗಿ ಕೊಡಲು
WhatsApp ಮಾಡಿ: 7483681708