ವೈದ್ಯರು ರೋಗಿಗಳ ನಡುವಿನ ಸಂಬಂಧ ಉತ್ತಮವಾಗಿರಬೇಕು: ಡಾ. ವಗ್ಗರ ಕರೆ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಸಿಂದಗಿ; ಅಧ್ಯಾತ್ಮ ಹಾಗೂ ಮಾನವೀಯ ಗುಣಗಳನ್ನು ಯುವ ವೈದ್ಯರು ಮೈಗೂಡಿಸಿಕೊಂಡಾಗ ಅವರ ಹಾಗೂ ರೋಗಿಗಳ ನಡುವಿನ ಸಂಬಂಧ ಉತ್ತಮವಾಗಿರುತ್ತದೆ ಎಂದು ವಿಜಯಪುರದ ಆರೋಗ್ಯ ಧಾಮ ಹಾಗೂ ಹೃದಯ ರೋಗ ವೈದ್ಯ ಡಾ. ಗೌತಮ ವಗ್ಗರ ಹೇಳಿದರು.

ತಾಲೂಕಿನ ಚಿಕ್ಕಸಿಂದಗಿ ಗ್ರಾಮದ ಹಿರಿಯ ವೈದ್ಯ ಮಡಿವಾಳರ ಸದನದಲ್ಲಿ ಯುವ ವೈದ್ಯರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಕೊಂಡು ಮಾತನಾಡಿ, ವೈದ್ಯರಿಗೆ ನಮ್ಮ ಪರಂಪರೆಯ ಬಗ್ಗೆ ಅರಿವು ಇರಬೇಕು ವೈದ್ಯ ಮತ್ತು ರೋಗಿಗಳ ನಡುವಿನ ಸಂಬಂಧದ ಮಹತ್ವದ ಬಗ್ಗೆ ಅವರು ತಿಳಿದಿರಬೇಕು.

ರೋಗಿಗಳೊಂದಿಗೆ ತಾಳ್ಮೆಯಿಂದ ಮತ್ತು ಪ್ರೀತಿಯಿಂದ ವರ್ತಿಸಬೇಕು. ಒಳ್ಳೆಯ ಮಾತುಗಳನ್ನು ಆಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕು. ಒಂದು ಕಾಯಿಲೆಯ ಚಿಕಿತ್ಸೆಗೆಂದು ಬಂದ ರೋಗಿಯ ಮಾತುಗಳು ಆಲಿಸಿ ಕೊಂಡು ಸೂಕ್ತ ಸಲಹೆ ನೀಡಿ ರೋಗ ಗುಣಪಡಿಸಬೇಕು ಎಂದರು.

- Advertisement -

ನಾನು ಹುಟ್ಟಿ ಬೆಳೆದ ಚಿಕ್ಕಸಿಂದಗಿ ಗ್ರಾಮದಲ್ಲಿ ನನಗೆ ಸನ್ಮಾನಿಸಿ ಗೌರವಿಸಿದಿರಿ ನಾನು ಯಾವಾಗಲು ಗ್ರಾಮದ ಜನರಿಗೆ ಋಣಿಯಾಗಿರುತ್ತನೆ ಎಂದರು.

ಹಿರಿಯ ವೈದ್ಯ ಡಾ.ರಾಮಲಿಂಗಪ್ಪ ಭೀ. ಮಡಿವಾಳರ ಮಾತನಾಡಿ ಭಾರತೀಯ ವೈದ್ಯಕೀಯ ಪದ್ದತಿ ಶ್ರೇಷ್ಠವಾಗಿದೆ ಅದು ಶೋಷಣೆ ರಹಿತವಾಗಿರಬೇಕು.ರೋಗಿಯ ಪಾಲಿನ ದೇವರ ರೂಪದಲ್ಲಿ ರೋಗವನ್ನು ಗುಣ ಪಡಿಸಬೇಕು ಎಂದರು.

ಶಿಕ್ಷಕ ಸಾಹಿತಿ ಬಸವರಾಜ ರಾ. ಅಗಸರ ಮಾತನಾಡಿ,ವೈದ್ಯರು ನಿರ್ಮಲ ಮನಸ್ಸಿನಿಂದ ಸಮಾಜಕ್ಕೆ ಉತ್ತಮ ಸೇವೆ ನೀಡಬೇಕು. ವರ್ಷದಲ್ಲಿ ಒಂದು ವಾರ ಉಚಿತ ಆರೋಗ್ಯ ಶಿಬಿರ ಹಮ್ಮಿಕೊಂಡು ಬಡವರ ಸೇವೆ ಮಾಡಬೇಕು ಎಂದರು.

ಯುವ ವೈದ್ಯ ವಿದ್ಯಾರ್ಥಿಗಳಿಗೆ ಹೃದಯ ರೋಗದ ಲಕ್ಷಣಗಳು ಹಾಗೂ ಮುಂಜಾಗ್ರತಾ ಕ್ರಮಗಳನ್ನು ವಿವರವಾಗಿ ಡಾ.ಗೌತಮ ವಗ್ಗರ ತಿಳಿಸಿದರು.

ವೈದ್ಯ ಸಂಗಮೇಶ ಮಡಿವಾಳರ ಸ್ವಾಗತಿಸಿದರು.ವಿನಯಕುಮಾರ ಸಗರ ವಂದಿಸಿದರು.

ಆರೋಗ್ಯ ಧಾಮ ಕ್ಲಿನಿಕ್ ಪಿ ಆರ್ ಓ ಸಂಜೀವ ರಾಠೋಡ, ಯುವ ವೈದ್ಯ ವಿದ್ಯಾರ್ಥಿಗಳಾದ ಸತೀಶ,ಉಮಾ ಮಾರ್ಯೌರಿಕಾಶಿ,ಶೃುತಿ ಸುಕನಯ್ಯ ಗೋರಗಿ ಭಾಗವಹಿಸಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!