“ಸಿಲಿಕಾನ್ ಸಿಟಿಯ ಜಲಮಂಡಳಿ ಹಾಗೂ ಬಿ.ಬಿ.ಎಂ.ಪಿ ಅಧಿಕಾರಿಗಳೇ ಟಿ.ಜಿ.ಲೇಔಟ್ ನಲ್ಲಿ ಅವವ್ಯಸ್ಥೆಯ ಆಗರಕ್ಕೆ – ಪರಿಹಾರ ಯಾವಾಗ ? ಎಂದು Times of ಕರ್ನಾಟಕ ಪತ್ರಿಕೆ ಇತ್ತೀಚೆಗೆ ಸುದ್ದಿ ಪ್ರಕಟಣೆ ಮಾಡಿತ್ತು.
ವರದಿ ನೋಡಿದ ಜಲಮಂಡಳಿ ಹಾಗೂ ಬಿ.ಬಿ.ಎಂ.ಪಿ ಮತ್ತು ಒಳಚರಂಡಿ ವ್ಯವಸ್ಥೆಯ ಅಧಿಕಾರಿಗಳು ಸಮಸ್ಯೆ ಬಗೆಹರಿಸಿದ್ದಕ್ಕೆ ಸ್ಥಳೀಯ ನಾಗರೀಕರಾದ ಅಶೋಕ್ ರೆಡ್ಡಿ , ಅನಿಲ್ ಕುಮಾರ್, ರಾಜೇಶ್,ವಿಜಯಕುಮಾರ್,ಗಿರೀಶ್ ಮತ್ತು ,ನರಸಿಂಹಯ್ಯ , ಶ್ರೀಮತಿ ಶ್ಯಾಮಲಾ , ಕಲ್ಪನಾ ಇನ್ನೂ ಅನೇಕ ಸ್ಥಳೀಯರು ಸಂತಸ ವ್ಯಕ್ತಪಡಿಸಿ , ಜಲಮಂಡಳಿ ಹಾಗೂ ಬಿ.ಬಿ.ಎಂ.ಪಿ ಮತ್ತು ಒಳಚರಂಡಿ ವ್ಯವಸ್ಥೆಯ ಅಧಿಕಾರಿಗಳು ಹಾಗೂ ಕೆಲಸಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ ಅಲ್ಲದೆ ಸಾಮಾಜಿಕ ಕಳಕಳಿಯ ಕೆಲಸ ಮಾಡಿದ Times of ಕರ್ನಾಟಕ ಪತ್ರಿಕೆಗೆ ಧನ್ಯವಾದ ತಿಳಿಸಿದ್ದಾರೆ.
ಆಗಸ್ಟ್ 2022 ರಂದು ಸುದ್ದಿಯನ್ನು ಪತ್ರಿಕೆ ಪ್ರಕಟಣೆ ಮಾಡಿತ್ತು , ಒಂದು ತಿಂಗಳ ನಂತರ ಕಾಮಗಾರಿ ನಡೆಸಿ ಸಮಸ್ಯೆ ಗೆ ಪರಿಹಾರ ಸಿಕ್ಕಿದೆ ಎನ್ನುತ್ತಾರೆ ಸ್ಥಳೀಯರು.
ಕಳೆದ ಆ.2 ರಂದು ಮಳೆಬಂದ ಪರಿಣಾಮ ಬನಶಂಕರಿ 3 ನೇ ಹಂತದ ಟಿ.ಜಿ ಲೇಔಟ್ ನಲ್ಲಿ ಬೆಂಗಳೂರು ಜಲಮಂಡಳಿ ಅವರು ಕಾಮಗಾರಿ ನಡೆಸಲು ಚರಂಡಿಯ ಪೈಪ್ ಲೈನ್ ರಿಪೇರಿ ಮಾಡಲು ತೆಗೆದ ಪರಿಣಾಮ ರಸ್ತೆಯ ತುಂಬಾ ಮೋರಿ ನೀರು ಉಕ್ಕಿ ಹರಿದ ಪರಿಣಾಮ ಮನೆಯ ಒಳಗೆ ನೀರು ಹರಿದು ನಾಗರೀಕರು ಪರದಾಟ ಮಾಡುವಂತೆ ಆಗಿದ್ದರ ಬಗ್ಗೆ ವರದಿ ಪ್ರಕಟವಾಗಿತ್ತು.
ಜೋರಾಗಿ ಮಳೆ ಬಂದ ಪರಿಣಾಮವಾಗಿ ರಸ್ತೆಯ ಮೇಲೆ ಚರಂಡಿ ನೀರು ಉಕ್ಕಿ ಹರಿದು ಜನ ಜೀವನ ಅಸ್ತವ್ಯಸ್ತ ವಾಯಿತ್ತು , ಹಾಗೂ ಜಲಮಂಡಳಿ ಅವರು ಚರಂಡಿ ಅಗೆದು ಪೈಪ್ ಲೈನ್ ನ ಪೈಪು ಅನ್ನು ಹಾಗೆಯೇ ರಸ್ತೆಯ ಮೇಲೆ ಹಾಗೂ ರಸ್ತೆಯ ಬದಿಯಲ್ಲಿ ಬಿಟ್ಟ ಪರಿಣಾಮ ಕಳೆದ 10 ದಿನಗಳಿಂದ ಪ್ರತಿನಿತ್ಯ ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು.
ಸಮಸ್ಯೆಯ ಬಗ್ಗೆ ಸ್ಥಳೀಯ ನಾಗರಿಕರು Times of ಕರ್ನಾಟಕದೆದುರು ಹೇಳಿಕೊಂಡಿದ್ದರು. ಅಲ್ಲದೆ ತಮ್ಮ ಸಮಸ್ಯೆ ಆಲಿಸಲು ಸಚಿವರಾದ ಆರ್. ಅಶೋಕ ಆಗಲಿ, ಮುನಿರತ್ನ ಅವರಾಗಲಿ ಬಂದಿರಲಿಲ್ಲ ಎಂದೂ ಕೂಡ ಹೇಳಿದ್ದರು. ಪತ್ರಿಕೆಯಲ್ಲಿ ವರದಿಯಾಗಿರುವುದನ್ನು ಗಮನಕ್ಕೆ ತಂದುಕೊಂಡ ಜಲಮಂಡಳಿ ಹಾಗೂ ಬಿಬಿಎಂಪಿಯವರು ಒಳಚರಂಡಿ ದುರಸ್ತಿ ಕಾರ್ಯ ಕೈಗೊಂಡಿದ್ದು ನಾಗರಿಕರಲ್ಲಿ ಸಂತಸ ಮೂಡಿಸಿದೆ.
ಚಿತ್ರ: ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ