spot_img
spot_img

ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಮುಖ್ಯವಾಗಿದೆ – ಈರಣ್ಣ ಕಡಾಡಿ

Must Read

spot_img
- Advertisement -

ಮೂಡಲಗಿ: ‘ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರ ಕ್ಷೇತ್ರದ ಪಾತ್ರ ಮಹತ್ವದ್ದಾಗಿದ್ದು, ಕರ್ನಾಟಕ ರಾಜ್ಯದ ಸಹಕಾರಿ ಸಂಘಗಳ ಬೆಳವಣಿಗೆಯು ದೇಶಕ್ಕೆ ಮಾದರಿಯಾಗಿವೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ತಾಲ್ಲೂಕಿನ ಯಾದವಾಡದಲ್ಲಿ ಬುಧವಾರ ಮೂಡಲಗಿಯ ಜ್ಯೋತಿ ಅರ್ಬನ್ ಕೋ.ಆಪ್ ಕ್ರೆಡಿಟ್ ಸೊಸೈಟಿ ಶಾಖೆಯ ದಶಮಾನೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಜನರ ಆರ್ಥಿಕ ಸದೃಢತೆಯಲ್ಲಿ ಸಹಕಾರಿ ಸಂಘ, ಸಂಸ್ಥೆಗಳು ಬಹಳಷ್ಟು ಉಪಯುಕ್ತವಾಗಿವೆ ಎಂದರು. 

ಸಮಾಜದಲ್ಲಿ ಮನುಷ್ಯನಿಗೆ ಅನ್ನ, ಆರೋಗ್ಯ, ಶಿಕ್ಷಣ, ಆಶ್ರಯದೊಂದಿಗೆ ಹಣದ ಅವಶ್ಯಕತೆ ಇದ್ದು, ಇವು ಇದ್ದರೆ ಆತನ ಜೀವನ ಯಶಸ್ಸಿಯೆನಿಸುತ್ತದೆ. ಗ್ರಾಮೀಣ ಭಾಗದ ಅದರಲ್ಲೂ ರೈತಾಪಿ ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಸಹಕಾರ ಚಳುವಳಿಯು ಬಹಳಷ್ಟು ಉಪಯುಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು. 

- Advertisement -

ಮೂಡಲಗಿಯ ಜ್ಯೋತಿ ಅರ್ಬನ್ ಕೋ.ಆಪ್ ಸೊಸೈಟಿಯು ಕೇವಲ 18 ವರ್ಷಗಳಲ್ಲಿ ನಾಲ್ಕು ಶಾಖೆಗಳೊಂದಿಗೆ ರೂ. 99.84 ಕೋಟಿ ವ್ಯವಹಾರದೊಂದಿಗೆ ರೂ. 41.95 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿರುವುದು ಶ್ಲಾಘನೀಯವಾಗಿದೆ. ಸೊಸೈಟಿಯಲ್ಲಿಯ ಒಗ್ಗಟ್ಟು, ಇಚ್ಛಾಶಕ್ತಿ ಮುಖ್ಯ ಕಾರಣವಾಗಿದೆ ಎಂದರು. 

ಸೊಸೈಟಿ ಅಧ್ಯಕ್ಷ ಮಲ್ಲಪ್ಪ ಮದಗುಣಕಿ ಮಾತನಾಡಿ, 2005ರಲ್ಲಿ ಸ್ಥಾಪನೆಯಾಗಿರುವ ಜ್ಯೋತಿ ಸೊಸೈಟಿಯು ಪ್ರಸಕ್ತ ಆರ್ಥಿಕ ವರ್ಷದಲ್ಲಿ 83 ಲಕ್ಷ ಲಾಭವನ್ನು ಗಳಿಸಿದೆ. ಯಾದವಾಡ ಶಾಖೆ ಸಹ ರೂ. 60 ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿದ್ದು ಸದ್ಯ ದಶಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ಯಾದವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಭೂತಾಳಿ ಮಾತನಾಡಿ ಯಾದವಾಡದಲ್ಲಿಯ ಜ್ಯೋತಿ ಅರ್ಬನ್ ಸೊಸೈಟಿಯು ಜನರ ವಿಶ್ವಾಸ, ನಂಬಿಕೆಯೊಂದಿಗೆ ಅತ್ಯುತ್ತಮ ಸೊಸೈಟಿ ಎನ್ನುವ ಹೆಗ್ಗಳಿಕೆ ಹೊಂದಿದೆ ಎಂದರು. 

- Advertisement -

ಸಾನ್ನಿಧ್ಯವಹಿಸಿದ್ದ ಚೌಕಿಮಠ ಶಿವಯೋಗಿ ದೇವರು ಮಾತನಾಡಿ ದಶಮಾನೋತ್ಸವ ಆಚರಿಸುತ್ತಿರುವ  ಯಾದವಾಡ ಶಾಖೆಯು ಶತಮಾನೋತ್ಸವ ಆಚರಿಸಲಿ. ಅಂಥ ಎಲ್ಲ ಗುಣಲಕ್ಷಣಗಳನ್ನು ಶಾಖೆಯ ಆಡಳಿತ ಮಂಡಳಿಯವರು ಹೊಂದಿದ್ದಾರೆ ಎಂದರು.  

ಸಹಕಾರ ಚಳುವಳಿಯ ಕುರಿತು ಸಾಹಿತಿ ಬಾಲಶೇಖರ ಬಂದಿ ಉಪನ್ಯಾಸ ನೀಡಿದರು. 

ಶರಣ ಚನ್ನಬಸಪ್ಪಮುತ್ಯಾ ಹುಬ್ಬಳ್ಳಿ, ಸೊಸೈಟಿ ಉಪಾಧ್ಯಕ್ಷ ಶ್ರೀಶೈಲ ಗಾಣಿಗೇರ, ಯಾದವಾಡ ಶಾಖಾ ಅಧ್ಯಕ್ಷ ಅಶೋಕ ರೂಡಗಿ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಕಲ್ಮೇಶ ಗಾಣಗಿ, ವಿಎಸ್‍ಎಸ್ ಸಂಘದ ಅಧ್ಯಕ್ಷ ಶಿವಪ್ಪ ನೇಮಗೌಡರ, ಕಿರಣ ಶೆರೆಗಾರ, ಶಿವಲಿಂಗಪ್ಪ ನಾವಲಗಿ, ಮಹಾಬೇಳೇಶ್ವರ ಕತ್ತಿ, ಮಲ್ಲಪ್ಪ ಚೆಕ್ಕನ್ನವರ, ರಾಜಶೇಖರ ಕಲ್ಯಾಣಿ, ಎಸ್.ವೈ. ಹೊಸಟ್ಟಿ, ಬಸವರಾಜ ಕಲ್ಯಾಣಿ, ಪ್ರಹ್ಲಾದ ದೇಶಪಾಂಡೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಯಾದವಾಡ ಶಾಖಾ ಸಲಹಾ ಸಮಿತಿ ಸದಸ್ಯರು ಇದ್ದರು.

ಪ್ರಧಾನ ವ್ಯವಸ್ಥಾಪಕ ಪ್ರಕಾಶ ರಡರಟ್ಟಿ ಮತ್ತು ಶಿಕ್ಷಕ ಗೌತಮ ಕಾಂಬಳಿ ಕಾರ್ಯಕ್ರಮ ನಿರೂಪಿಸಿದರು, ಶಾಖಾ ಕಾರ್ಯದರ್ಶಿ ಮಂಜುನಾಥ ಹಡಪದ ವಂದಿಸಿದರು.

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group