spot_img
spot_img

ದೇಶ ಕಟ್ಟಲು ಶಿಕ್ಷಣದ ಪಾತ್ರ ಮಹತ್ವದ್ದು -ಸರ್ವೋತ್ತಮ ಜಾರಕಿಹೊಳಿ

Must Read

- Advertisement -

ಮೂಡಲಗಿ: ಸುಸಂಸ್ಕೃತವಾದ ಮತ್ತು ಸದೃಢವಾದ ದೇಶವನ್ನು ಕಟ್ಟಲು ಶಿಕ್ಷಣದ ಪಾತ್ರ ಮಹತ್ವದಾಗಿದೆ, ಪಾಲಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಮ್.ಎಮ್. ಪಾಟೀಲ ಅವರು ಪುಟ್ಟ ಗ್ರಾಮದಲ್ಲಿ ಉತ್ತಮವಾದ ಶಿಕ್ಷಣ ಸಂಸ್ಥೆಯ ಕಟ್ಟಿರುವದನ್ನು ಉಳಿಸಿ ಬೆಳೆಸಿ ಕೊಂಡು ಹೋಗುವುದು ಪಾಲಕರ ಮೇಲಿದೆ ಎಂದು ಶಿಕ್ಷಣ ಸಂಸ್ಥೆಯ ನಿರ್ದೇಶಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ತಾಲ್ಲೂಕಿನ ಅವರಾದಿಯ ಶ್ರೀ ಮಹಾಲಕ್ಷ್ಮೀ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಾಂಸ್ಕೃತಿಕ ಹಬ್ಬ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ಪರ್ಧಾತ್ಮಕ ಜಗತ್ತನ್ನು ಎದುರಿಸಲು  ಜ್ಞಾನವಂತ ಸಮಾಜವನ್ನು ನಿರ್ಮಿಸುವುದು ಇಂದಿನ ಅವಶ್ಯಕತೆ ಇದೆ,  ದೇಶದ ಅನೇಕ ಮಹಾತ್ಮರು ಆದರ್ಶಗಳ ಸಂದೇಶಗಳನ್ನು ಸಾರಿದ್ದಾರೆ.

ಅಂಥ ಮಹಾತ್ಮರ ದಾರಿಯಲ್ಲಿ ಯುವ ಪೀಳಿಗೆ ನಡೆಯುವುದು ಅವಶ್ಯವಿದೆ, ಶಿವಾಜಿ ಮಹಾರಾಜರಿಗೆ ತಾಯಿ ಜೀಜಾಬಾಯಿ ನೀಡಿದ ಸಂಸ್ಕಾರ, ಶೌರ್ಯ ಮತ್ತು ದೇಶಾಭಿಮಾನದ ಆದರ್ಶಗಳ ಫಲವಾಗಿ ದೇಶಾಭಿಮಾನದ ಪ್ರತೀಕವಾಗಿ ಶಿವಾಜಿ ಬೆಳೆದರು. ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಂದಿರ ಪಾತ್ರ ಮಹತ್ವದಾಗಿದ್ದು ತಾಯಂದಿರು ಮಕ್ಕಳ ಶಿಕ್ಷಣ ಮತ್ತು ಸಂಸ್ಕಾರದ ದಾರಿಯನ್ನು ತೋರಿಸಿ ಸ್ವಾಸ್ಥ್ಯ ಸಮಾಜವನ್ನು ನಿರ್ಮಿಸಬೇಕು ಎಂದರು. 

- Advertisement -

ಸಮಾರಂಭದ ಸಾನ್ನಿಧ್ಯವನ್ನು ಮರೆಗುದ್ದಿಯ ಶ್ರೀ ನಿರುಪಾದೇಶ್ವರ ಮಹಾಸ್ವಾಮೀಜಿಗಳು ಮಾತನಾಡಿ, ಮೃದುವಾದ  ಮನಸ್ಸು ಹೊಂದಿರುವ ವಿದ್ಯಾರ್ಥಿಗಳು ಪಾಲಕರನ್ನು ಮತ್ತು ಶಿಕ್ಷಕರನ್ನು ಅನುಕರಣೆ ಮಾಡುತ್ತವೆ, ಪಾಲಕರು ಮತ್ತು ಶಿಕ್ಷಕರು ಮಾಡುವ ಕೆಲಸ ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು ಎಂದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ ಮಹಾಲಕ್ಷ್ಮೀ ಸಂಸ್ಥೆಯ ಅಧ್ಯಕ್ಷ ಎಮ್.ಎಮ್.ಪಾಟೀಲ ಮತ್ತು ಬಹನಟ್ಟಿಯ ಡಾ.ಪ್ರೇಮಾ ತುಂಗಳ, ಮೃತ್ಯುಂಜಯ ರಾಮದುರ್ಗ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಮತ್ತು ಅತಿಥಿಗಳನ್ನು ಸತ್ಕರಿಸಿ ಗೌರವಿಸಿದರು. 

- Advertisement -

ಸಮಾರಂಭದ ವೇದಿಕೆಯಲ್ಲಿ ಕಪರಟ್ಟಿಯ ಬಸವರಾಜ ಹಿರೇಮಠ, ತಿಮ್ಮಾಪೂರದ ಪಂಚಾಕ್ಷರಿ ಸ್ವಾಮಿಜಿ, ಜಿ.ಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ಅವರಾದಿ ಗ್ರಾ.ಪಂ ಅಧ್ಯಕ್ಷೆ ಸವಿತಾ ನಾಯಕ, ಸಿ.ಆರ್.ಪಿ ವಿ.ಆರ್.ಬರಗಿ, ಗಣ್ಯರಾದ ಗಿರೀಶ ಹಳ್ಳೂರ, ಕಲ್ಲಪ್ಪಗೌಡ ಲಕ್ಕಾರ, ಮಹಾದೇವ ವಟವಟಿ, ಅರ್ಜುನ ಬಿ. ಪಾಟೀಲ, ದೇವನಗೌಡ ಪಾಟೀಲ, ಶಂಕರಗೌಡ ಪಾಟೀಲ, ಸಿ.ಎಲ್.ನಾಯಿಕ, ಸುನೀಲ ಪಾಟೀಲ, ಎನ್.ಆರ್.ನಾಡಗೌಡ, ಶಿವನಗೌಡ ನಾಡಗೌಡ, ವೆಂಕನಗೌಡ ನಾಡಗೌಡ, ಕೃಷ್ಟಪ್ಪಗೌಡ ನಾಡಗೌಡ, ರಾವಸಾಬ ನಾಯಕ್, ಶಾಸಪ್ಪಗೌಡ ಪಾಟೀಲ, ಬಾಳಪ್ಪ ಕವಟಗೊಪ್ಪ ವಿವಿಧ ಗ್ರಾಮಗಳ ಮುಖಂಡರು ಮತ್ತಿತರರು ಉಪಸ್ಥಿತರಿದ್ದರು. 

ಶಾಲೆಯ ಮುಖ್ಯ ಶಿಕ್ಷಕ ಎ.ಪಿ.ಬಿ ಪಾಟೀಲ ಸ್ವಾಗತಿಸಿದರು, ಎಮ್.ಬಿ.ಪಾಟೀಲ ನಿರೂಪಿಸಿದರು, ಎ.ಪಿ.ಜಕ್ಕನ್ನವರ ವರದಿ ವಾಚಿಸಿದರು. ದೊಡಮನ್ನಿ ವಂದಿಸಿದರು,

- Advertisement -
- Advertisement -

Latest News

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

  ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮ ಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವ ತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು...
- Advertisement -

More Articles Like This

- Advertisement -
close
error: Content is protected !!
Join WhatsApp Group