spot_img
spot_img

ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಹೋಮಿಯೋಪತಿ ಪಾತ್ರ ಅತಿ ಮುಖ್ಯ- ಡಾ. ಮನೋಜ ಪೂಜಾರ ಅಭಿಮತ

Must Read

- Advertisement -

ದಿ.26 ರಂದು ಬೆಳಗಾವಿಯ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ನಡೆದ ವಾರದ ಪ್ರಾರ್ಥನೆ ಮತ್ತು ಉಪನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ಬೆಳಗಾವಿಯ ತಿಳಕವಾಡಿಯ ಅಡ್ವಾನ್ಸ್ಡ್ ಜರ್ಮನ್ ಹೋಮಿಯೋಪತಿ ಕ್ಲಿನಿಕ್ಕಿನ ಖ್ಯಾತ ವೈದ್ಯರಾದ ಡಾ. ಮನೋಜ ಎಸ್ ಪೂಜಾರ ಅವರು ಮಾತನಾಡಿ, ಆಧುನಿಕ ಜೀವನಶೈಲಿ ಮತ್ತು ಆಹಾರ ಪದ್ದತಿಗಳು  ಅನಾರೋಗ್ಯಕ್ಕೆ  ಹಾಗೂ  ಭಯಾನಕ ಕಾಯಿಲೆಗಳಿಗೆ ಕಾರಣವಾಗಿವೆ. ಹೋಮಿಯೋಪತಿ ಚಿಕಿತ್ಸಾ ವಿಧಾನವು  ವ್ಯಕ್ತಿಯ ರೋಗದ ಮೂಲವನ್ನು ಸಮಗ್ರವಾಗಿ ಅಧ್ಯಯನ ಮಾಡುವ ವಿಧಾನವಾಗಿದ್ದು. ಆತನ ಕುಟುಂಬದ  ಆನುವಂಶೀಯತೆ, ಮನೋಬಲ, ಆಸಕ್ತಿ , ಜೀವನ ವಿಧಾನ ಎಲ್ಲವನ್ನೂ  ಒಳಗೊಂಡಂತೆ ಚಿಕಿತ್ಸೆಯ ಮಾದರಿಯನ್ನು ಹೊಂದಿದೆ ಎಂದರು.

ನಗರಗಳಲ್ಲಿ ಹೆಚ್ಚಾಗಿ ಕಂಡುಬರುವ ಸಕ್ಕರೆ ಕಾಯಿಲೆ, ರಕ್ತದೊತ್ತಡ, ಅಲ್ಸರ್ನಂತಹ ರೋಗಗಳಿಂದ ಉಂಟಾಗುವ ಹಲವಾರು ಗಂಭೀರ ಸಮಸ್ಯೆಗಳನ್ನು ಹೋಮಿಯೋಪತಿಯಿಂದ ಸುಲಭವಾಗಿ ಗುಣಪಡಿಸಬಹುದು.

ಶಸ್ತ್ರಚಿಕಿತ್ಸೆ ತಪ್ಪಿಸಲು ಹಾಗೂ ರೋಗ ನಿರೋಧಕ ಶಕ್ತಿ  ಹೆಚ್ಚಿಸಲು ಈ ಮಾದರಿಯ ಚಿಕಿತ್ಸೆ ಅತಿ ಮುಖ್ಯವಾಗಿದೆ  ಎಂಬುದನ್ನು ಹಲವಾರು ಉದಾಹರಣೆ ಮೂಲಕ  ಸವಿಸ್ತಾರವಾಗಿ ವಿವರಿಸಿದರು.

- Advertisement -

     

ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯನ್ನವರ ಮಾತನಾಡಿ ಇತ್ತೀಚೆಗೆ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಬೇರೆ ಬೇರೆ  ಚಿಕಿತ್ಸಾ ವಿಧಾನಗಳು ಜನಪ್ರಿಯತೆಯನ್ನು ಪಡೆಯುತ್ತಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. 

ಶರಣರಾದ ಸದಾಶಿವ ದೇವರಮನಿ ಮಾತನಾಡುತ್ತಾ ವಚನ ಸಾಹಿತ್ಯವು ಹಲವಾರು ವಚನಗಳ ಮೂಲಕ  ನಮಗೆ ಆತ್ಮ ಸ್ಥೈರ್ಯ ಮೂಡಿಸುತ್ತಿರುವದನ್ನು ನೆನಪಿಸಿಕೊಂಡರು.

- Advertisement -

ಸಂಘಟನೆಯ ಕಾರ್ಯದರ್ಶಿಗಳಾದ  ಶರಣರಾದ ಸುರೇಶ ನರಗುಂದ ಕಾರ್ಯಕ್ರಮದ ನಿರೂಪಣೆ ಮಾಡಿದರು. ಉಪಾಧ್ಯಕ್ಷ ರಾದ  ಸಂಗಮೇಶ ಅರಳಿ, ವಿ.ಕೆ ಪಾಟೀಲ, ಎ.ಬಿ. ಜೇವನಿ, ಕನ್ನಡ ಸಾಹಿತ್ಯಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಗಳಾದ ಮಹಾಂತೇಶ ಮೆನಸಿನಕಾಯಿ, ಬಸವರಾಜ ಬಿಜ್ಜರಗಿ ಹಾಗೂ ಶರಣೆಯರಾದ  ಜ್ಯೋತಿ ಬಾದಾಮಿ, ಶ್ರೀದೇವಿ ನರಗುಂದ, ಸುಜಾತಾ ಮತ್ತಿಕಟ್ಟಿ ಕಮಲಾ ಗಣಾಚಾರಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರಸಾದ ದಾಸೋಹಿಗಳಾದ  ಪ್ರಸಾದ ಹಿರೇಮಠ ಅವರನ್ನೊಳಗೊಂಡು ಇದೇ ತಿಂಗಳಲ್ಲಿ ತಮ್ಮ ಜನನ ಜಾಗೃತಿ ಮತ್ತು ವಿವಾಹ ವಾರ್ಷಿಕೋತ್ಸವವನ್ನು ಹೊಂದಿದ್ದ ಎಲ್ಲಾ ಶರಣ ಬಳಗದವರನ್ನು ಅಭಿನಂದಿಸಲಾಯಿತು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group