spot_img
spot_img

ಗ್ರಾಮಾಭಿವ್ರದ್ದಿ ಯೋಜನೆಯು ಗ್ರಾಮೀಣ ಪರಿವರ್ತನೆಗೆ ಹೊಸ ಭಾಷ್ಯ ಬರೆದಿದೆ- ಕೇಶವ ದೇವಾಂಗ

Must Read

- Advertisement -

ಮುನವಳ್ಳಿ: “ಗ್ರಾಮಾಭಿವ್ರದ್ದಿ ಯೋಜನೆಯು ಗ್ರಾಮೀಣ ಪರಿವರ್ತನೆಗೆ ಹೊಸ ಭಾಷ್ಯ ಬರೆದಿದೆ.ಗಾಂದೀಜಿಯವರ ಗ್ರಾಮ ರಾಜ್ಯದ ಪರಿಕಲ್ಪನೆ ಈ ಯೋಜನೆಯಿಂದ ಸಾಕಾರಗೊಳ್ಳುತ್ತಿದೆ. ಕೃಷಿ ಮೇಳ,ತರಬೇತಿ,ಮಾನವ ಸಂಪನ್ಮೂಲ ಬಳಕೆ ಮುಂತಾದ ವಿಷಯಗಳು ಯೋಜನೆಯ ಚಿಂತನೆಯ ವಿಷಯ. ಮಾನವ ಸಂಪನ್ಮೂಲ ಅಭಿವೃದ್ದಿಗಾಗಿ ಗ್ರಾಮಾಭಿವೃದ್ದಿ ಯೋಜನೆ ದೊಡ್ಡ ಕಾರ್ಯಕರ್ತರ ಪಡೆಯನ್ನೇ ಹೊಂದಿದೆ. ಸದರಿ ಶಾಲೆಗೆ ಸಂಸ್ಥೆಯಿಂದ ೭೯೦೦೦ ರೂ.ಗಳ ಡೆಸ್ಕಗಳನ್ನು ಇಂದು ಹಸ್ತಾಂತರ ಮಾಡುತ್ತಿದ್ದು ಅಷ್ಟೇ ಅಲ್ಲದೇ ಸಂಘದ ವತಿಯಿಂದ ವಿದ್ಯಾರ್ಥಿವೇತನ, ಶಾಲಾ ರಿಪೇರಿ, ಕಂಪೌಂಡ, ಶೌಚಾಲಯ, ಕುಡಿಯುವ ನೀರು ಮುಂತಾದ ಸೌಲಭ್ಯಗಳನ್ನು ಹೇಗೆ ಪಡೆಯಬಹುದು ಎಂಬ ಮಾಹಿತಿಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿಯ ಜಿಲ್ಲಾ ನಿರ್ದೇಶಕರಾದ ಕೇಶವ ದೇವಾಂಗ ತಿಳಿಸಿದರು.

ಅವರು ಪಟ್ಟಣದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ೩ನೇ ಹಂತದ ಎಸ್.ಡಿ.ಎಂ.ಸಿ ತರಬೇತಿಯ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸವದತ್ತಿ ಯೋಜನಾಧಿಕಾರಿಗಳಾದ ಶ್ರೀಮತಿ ಆಶಾ ಮಹೇಶ ,ನೋಡಲ್ ಶಿಕ್ಷಕಿಯರಾದ ಶ್ರೀಮತಿ ಎನ್.ಎಸ್.ಖೊಂದುನಾಯ್ಕ, ಉಪಸ್ಥಿತರಿದ್ದರು. ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ಲಕ್ಷ್ಮೀ ಕದಂ,ಸದಸ್ಯರಾದ ಮಹಮ್ಮದರಸೂಲ ಇಂಚಲ,ಫಕೀರಪ್ಪ ಕೋನೇರಿ,ಇಸ್ಮಾಯಿಲ್ ವಟ್ನಾಲ,ಮಂಜುಳಾ ಕುಂಬಾರ,ಹುಸೇನಬಿ ದಂಡಿನ, ಕೃಷಿ ಅಧಿಕಾರಿ ದೇವೇಂದ್ರ ಹಾಗೂ ಪಾಲಕರು ಉಪಸ್ಥಿತರಿದ್ದರು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಪಿ.ಎಂ.ಬಾರಕೇರ ವಹಿಸಿದ್ದರು.

ಎಸ್.ಡಿ.ಎಂ.ಸಿಯ ಮಹತ್ವ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯ ಮಹತ್ವವನ್ನು ಕುರಿತು ಸಂಪನ್ಮೂಲ ಶಿಕ್ಷಕ ಗುರುನಾಥ ಪತ್ತಾರ ಈ ಸಂದರ್ಭದಲ್ಲಿ ತಿಳಿಸಿದರು. ನೋಡಲ್ ಶಿಕ್ಷಕಿಯರಾದ ಶ್ರೀಮತಿ ಎನ್.ಎಸ್.ಖೊಂದುನಾಯ್ಕ ಮಾತನಾಡಿ, “ ಮಕ್ಕಳ ಶಿಕ್ಷಣದ ಪ್ರಗತಿಯಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರವೂ ಮಹತ್ವದ್ದು. ಮಕ್ಕಳ ಪ್ರತಿನಿತ್ಯದ ಓದು ಬರಹ ಕುರಿತಂತೆ ಶಾಲೆಯ ಚಟುವಟಿಕೆಗಳ ಕುರಿತು ಪಾಲಕರೂ ಕೂಡ ಗಮನ ಹರಿಸುವ ಮೂಲಕ ಸಹಕರಿಸಿದರೆ ಮಕ್ಕಳ ಓದು ಬರಹದಲ್ಲಿ ಪ್ರಗತಿ ಸಾಧಿಸಲು ಸಾಧ್ಯ”ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕೇಶವ ದೇವಾಂಗ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

- Advertisement -

ಕಾರ್ಯಕ್ರಮದ ಪ್ರಾರಂಭದಲ್ಲಿ ಗುರುಮಾತೆ ಸಿ.ಎಸ್.ಅಂಗಡಿ ಪ್ರಾರ್ಥನಾ ಗೀತೆ ಹಾಡಿದರು.ಪ್ರಧಾನ ಗುರುಗಳಾದ ಗುರುನಾಥ ಪತ್ತಾರ ಪ್ರಾಸ್ತಾವಿಕವಾಗಿ ಮಾತನಾಡಿದರು.ಬಿ.ಬಿ.ಜಾಲಿಕಟ್ಟಿ ನಿರೂಪಿಸಿದರು.ಗುರುಮಾತೆ ಬಿ.ಎಚ್.ಹೊಸಮನಿ ವಂದಿಸಿದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group