spot_img
spot_img

ಗರಿಷ್ಠ ಅಂಕ ಪಡೆದ ಶಾಲಾ ಮುಖ್ಯಸ್ಥರಿಗೆ ಸನ್ಮಾನ

Must Read

spot_img
- Advertisement -

ಮೂಡಲಗಿ: ಮಕ್ಕಳ ಕಲಿಕೆ ಫಲಪ್ರದವಾಗುವ ನಿಟ್ಟಿನಲ್ಲಿ ಶಿಕ್ಷಕರ, ವಿದ್ಯಾರ್ಥಿಯ ಹಾಗೂ ಪಾಲಕರ ಪಾತ್ರ ಬಹುಮುಖ್ಯವಾಗಿದೆ. ಮಗುವಿನ ಸರ್ವಾಂಗೀನ ಅಭಿವೃದ್ಧಿ ಹೊಂದಿದಾಗ ಮಾತ್ರ ಶೈಕ್ಷಣಿಕ ಕಾಳಜಿಯ ಬಗ್ಗೆ ಗುರ್ತಿಸಲು ಸಾಧ್ಯವಾಗುವದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮನ್ನಿಕೇರಿ ಹೇಳಿದರು.

ಅವರು ಶನಿವಾರ ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ‘ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಪಡೆದುಕೊಂಡಿರುವ ಶಾಲಾ ಮುಖ್ಯಸ್ಥರ ಸನ್ಮಾನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶೈಕ್ಷಣಿಕ ವಲಯವು ಪ್ರತಿ ವರ್ಷವು ಪ್ರತಿಯೊಂದು ಶೈಕ್ಷಣಿಕ ಕಾರ್ಯಚಟುವಟಿಕೆಯಲ್ಲಿ ಅಗ್ರಸ್ಥಾನದಲ್ಲಿರಲು ಶಿಕ್ಷಕ ಸಮೂಹ, ಸಂಪನ್ಮೂಲ ವ್ಯಕ್ತಿಗಳ ಹಾಗೂ ಮೇಲಾಧಿಕಾರಿಗಳ ಮಾರ್ಗದರ್ಶನ ಕಾರಣವಾಗಿದೆ.

ಕೋವಿಡ್-19 ಕಾರಣದಿಂದಾಗಿ ಭೌತಿಕವಾಗಿ ಶಾಲೆಗಳನ್ನು ನಡೆಸಲು ಆಗಲಿಲ್ಲ ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಯಿತು. ಇಲಾಖೆ ಮಾರ್ಗಸೂಚಿಯನುಸಾರ ಸಾಮಾಜಿಕ ಜಾಲತಾಣಗಳ ಮೂಲಕ ಕಲಿಕೆಗೆ ಹೆಚ್ಚಿನ ಒತ್ತನ್ನು ನೀಡಿ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿಗೊಳಿಸಿದ್ದಾರೆಂದರು.

- Advertisement -

ವಲಯ ವ್ಯಾಪ್ತಿಯ 13 ಪ್ರೌಢ ಶಾಲೆಗಳಲ್ಲಿ ಅತೀ ಹೆಚ್ಚಿನ ಗರಿಷ್ಠ ಅಂಕ ಪಡೆಯುವಲ್ಲಿ ಯಶಸ್ವಿಯಾಗಿವೆ. ಸದ್ಯ 9 ಮತ್ತು 10 ನೇ ತರಗತಿಗಳು ಪ್ರಾರಂಭಗೊಂಡಿವೆ, ವಲಯ ವ್ಯಾಪ್ತಿಯಲ್ಲಿ ಅತೀಶೀಘ್ರ ಗತಿಯಲ್ಲಿ ವಿದ್ಯಾಭ್ಯಾಸ ನಡೆಸುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ನೀಲ ನಕ್ಷೆ ಸಿದ್ಧವಾಗಿದೆ ನುರಿತ ಸಂಪನ್ಮೂಲ ಶಿಕ್ಷಕರಿಂದ ಕಾರ್ಯಾಗಾರ ಏರ್ಪಡಿಸಿ ಶಾಲಾ ಹಂತದಲ್ಲಿ ಕಾರ್ಯಗತವಾಗಲು ಅನುಕೂಲ ಮಾಡಿಕೊಡುವದಾಗಿ ತಿಳಿಸಿದರು.

ಶಿಕ್ಷಣಪ್ರೇಮಿ ಹಾಗೂ ಮಾಜಿ ಪುರಸಭೆ ಅಧ್ಯಕ್ಷ ಎಸ್. ಆರ್ ಸೋನವಾಲಕರ ಮಾತನಾಡಿ, ಸ್ವಾತಂತ್ರ್ಯ ಪೂರ್ವದಿಂದಲು ಮೂಡಲಗಿ ಹಾಗೂ ಸುತ್ತಮುತ್ತಲಿ ಗ್ರಾಮಗಳಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಕಾಳಜಿ ನೀಡಲಾಗುತ್ತಿದೆ. ಶೈಕ್ಷಣಿಕವಾಗಿ ಮೂಡಲಗಿ ಇನ್ನಷ್ಟು ಸಾಧನೆ ಮಾಡಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ನಿರ್ಮಾಣವಾಗಬೇಕು. ಪ್ರತಿವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಲಯಕ್ಕೆ ಪ್ರಥಮ ಬರುವವರಿಗೆ ವ್ಯಯಕ್ತಿಕವಾಗಿ ಒಂದು ಲಕ್ಷ ರೂ ನೀಡುತ್ತಾ ಬಂದಿದ್ದು ಪ್ರಸಕ್ತ ವರ್ಷ ಎರಡು ಲಕ್ಷ ರೂ. ಗಳನ್ನು ನೀಡಿದ್ದೇವೆ. ಆರ್ಥಿಕ ಸಹಾಯದ ಜೊತೆಯಲ್ಲಿ ಶಿಕ್ಷಕರ ಹಾಗೂ ಅಧಿಕಾರಗಳ ಸಹಾಯದೊಂದಿಗೆ ತಮ್ಮ ಭವಿಷ್ಯ ನಿರ್ಮಿಸಿಕೊಳ್ಳಲು ಕರೆ ನೀಡಿದರು.

- Advertisement -

ಈ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪ್ರಥಮಿಗರಿಗೆ 2 ಲಕ್ಷ ರೂ. ನಗದು ಹಣ ನೀಡಿದ ಎಸ್.ಆರ್ ಸೋನವಾಲಕರ, ಗರಿಷ್ಠ ಅಂಕಗಳನ್ನು ಪಡೆದ 13 ಪ್ರೌಢ ಶಾಲೆಗಳ ಮುಖ್ಯೋಪಾಧ್ಯಾಯರನ್ನು ಸತ್ಕರಿಸಲಾಯಿತು.

ಸಮಾರಂಭದಲ್ಲಿ ಚಿಕ್ಕೋಡಿ ಡಿಡಿಪಿಐ ಕಛೇರಿಯ ವಿಷಯ ಪರಿವೀಕ್ಷಕ ವಿ.ಎಸ್ ಕಾಂಬಳೆ, ಪತ್ರಾಂಕಿತ ವ್ಯವಸ್ಥಾಪಕ ಪಿ.ಎಚ್ ಒಂಟಿ, ಶಿಕ್ಷಣ ಸಂಯೋಜಕರಾದ ಟಿ.ಕರಿಬಸವರಾಜು, ಸತೀಶ ಬಿ.ಎಸ್, ಜಿಲ್ಲಾ ಎಮ್.ಡಿ.ಆರ್‍ಎಸ್ ಸಮನ್ವಯಾಧಿಕಾರಿ ಆರ್.ವಾಯ್ ಗಂಗರಡ್ಡಿ, ಕೆ.ಎಸ್ ಮಾರಾಪೂರ, ಜಿ.ಎಮ್ ಸಕ್ರಿ ಹಾಗೂ ಮುಖ್ಯೋಪಾಧ್ಯಾಯರು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group