spot_img
spot_img

ಶಾಲೆ ಎಂದರೆ ಶಿಕ್ಷಣ ಜೊತೆಗೆ ಬದುಕುವ ನೀತಿ ಪಾಠ ಕಲಿಸುವ ದೇಗುಲ- ಶಿಕ್ಷಕ ಕಬ್ಬೂರ ಅಭಿಮತ

Must Read

- Advertisement -

ಸವದತ್ತಿ– “ಶಾಲೆ ಎಂದರೆ ಶಿಕ್ಷಣ ಕಲಿಸುವುದರ ಜೊತೆಗೆ ಬದುಕುವ ನೀತಿ ಪಾಠವನ್ನೂ ಕಲಿಸುವ ದೇಗುಲ ಇದ್ದಹಾಗೆ ಆದ್ದರಿಂದ ನಾವು ಕಲಿತ ಶಾಲೆ ಮತ್ತು ನಮಗೆ ಅಕ್ಷರ ಕಲಿಸಿದ ಶಿಕ್ಷಕರನ್ನು ಎಂದೂ ಮರೆಯಬಾರದು” ಎಂದು ಶಿಕ್ಷಕ ಎನ್.ಎನ್.ಕಬ್ಬೂರ ತಮ್ಮ ಅಭಿಪ್ರಾಯ ಹಂಚಿಕೊಂಡರು.

ಸ್ಥಳೀಯ ಸ.ಕಿ.ಪ್ರಾ ಕನ್ನಡ ಶಾಲೆ ನಂ-6 ಸವದತ್ತಿಯಲ್ಲಿ 5 ನೇ ತರಗತಿ ಮಕ್ಕಳ ಬೀಳ್ಕೋಡುವ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಾಲೆಯಲ್ಲಿ ಕಲಿತ ಶಿಕ್ಷಣ ನಮ್ಮ ನಿತ್ಯ ಜೀವನದಲ್ಲಿ ಉಪಯೋಗಕ್ಕೆ ಬಂದಾಗ ಮಾತ್ರ ಶಿಕ್ಷಣದ ಸಾರ್ಥಕತೆ ಸಾಧ್ಯ ಎಂದು ಅವರು ಹೇಳಿದರು.

ವರ್ಷಪೂರ್ತಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಕ್ರೀಯಾಶೀಲತೆಯಿಂದ ಭಾಗವಹಿಸಿದ ಮಕ್ಕಳಿಗೆ ಶಿಕ್ಷಕಿ ಎಮ್.ಆರ್.ಫಂಡಿ ಪುಸ್ತಕಗಳನ್ನು ಬಹುಮಾನವಾಗಿ ನೀಡಿದರು. ನಂತರ ಮಕ್ಕಳಿಂದ ದೀಪದಾನ ಕಾರ್ಯಕ್ರಮ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

- Advertisement -

ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲಾ ವಿದ್ಯಾರ್ಥಿಗಳು, ಪಾಲಕರು ಪೋಷಕರು, ಅಡುಗೆ ಸಿಬ್ಬಂದಿಯವರು, ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

- Advertisement -
- Advertisement -

Latest News

ಜಲ ಜೀವನ ಮಿಷನ್ ಅಡಿಯಲ್ಲಿ ಕಲ್ಯಾಣಿ ಪುನಶ್ಚೇತನ

ಮೂಡಲಗಿ: ಜಿಲ್ಲಾ ಪಂಚಾಯತ್ ಬೆಳಗಾವಿ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ, ತಾಲೂಕು ಪಂಚಾಯತ್ ಮೂಡಲಗಿ, ಗ್ರಾಮ ಪಂಚಾಯತ್ ಯಾದವಾಡ ಹಾಗೂ ಅನುಷ್ಠಾನ ಬೆಂಬಲ...
- Advertisement -

More Articles Like This

- Advertisement -
close
error: Content is protected !!
Join WhatsApp Group