spot_img
spot_img

ಜಗತ್ತಿಗೆ ಸರ್ವ ಜ್ಞಾನವನ್ನು ಹೇಳಿಕೊಟ್ಟ ಪಾಠ ಶಾಲಾ ಇಂದು ಧರ್ಮದ ಜಾಲ

Must Read

ಸುಮಾರು ಆರು ತಿಂಗಳಿಂದ ಇರಬಹುದು ಇಲ್ಲ ಅದಕ್ಕಿಂತ ಮುಂಚಿತವಾಗಿಯು ಇರಬಹುದು ಕರ್ನಾಟಕದಲ್ಲಿ ಧರ್ಮಗಳ ನಡುವೆ ಆಗುತ್ತಿರುವ ಕಿತ್ತಾಟ ಇನ್ನು ನಿಲ್ಲಿಸಿಲ್ಲ , ಮುಂದೆ ಕೂಡ ನಿಲ್ಲೋದಿಲ್ಲ. ಹಿಂದೊಮ್ಮೆ ಹೇಗೋ ಶಾಂತವಾಗಿದ್ದ ನಾಡು ಯಾಕೆ ಹೀಗೆ‌ ಆಯಿತು ನನಗೆ ತಿಳಿಯದು , ಕರ್ನಾಟಕದಲ್ಲಿ ಜಾತಿ ಜಾತಿಗಳ ನಡುವೆ ಕಿತ್ತಾಟ , ಭೇದ ಭಾವ ಇತ್ತು ಅಂದುಕೊಂಡಿದ್ದೆ ಆದರೆ ಧರ್ಮ ಧರ್ಮಗಳ ನಡುವೆ ಈ ರೀತಿ ಬೆಂಕಿ ಕಿಚ್ಚು ಹೊತ್ತಿ ಉರಿಯುತ್ತದೆ ಎಂದು ತಿಳಿದಿರಲಿಲ್ಲ , ಚಾತುರ್ವರ್ಣ ಕಾಲದಲ್ಲಿ ಒಂದು ಸಮುದಾಯದ ಮತ್ತೊಂದು ಸಮುದಾಯದವನ್ನು ತುಳಿದು ಬಾಳುತ್ತಿತ್ತು ಅಂತ ಹಿರಿಯರು ಹೇಳುವರು ಅಂದು‌ ತುಳಿದವರು ಇಂದು ಮತ್ತೆ ತುಳಿಯಲು ಬಂದಿರುವುದು ಅಗತ್ಯವಿಲ್ಲದ ಮಾರ್ಮಿಕವಾದ ಗಂಭೀರದ ವಿಷಯ ಇರಬಹುದು.ಇಷ್ಟೆಲ್ಲಾ ಹೇಳುವುದು ಸಮಯ ವ್ಯರ್ಥ ನೇರವಾಗಿ ವಿಷಯಕ್ಕೆ ಬಂದು ಬಿಡುವೆ.

ಜಗತ್ತಿಗೆ ಸರ್ವ ಜ್ಞಾನವನ್ನು ಹೇಳಿಕೊಟ್ಟ ಪಾಠ ಶಾಲಾ ಇಂದು ಧರ್ಮದ ಜಾಲ ಎನ್ನುವ ಈ ಸಾಲುಗಳು ತುಂಬಾ ಮಹತ್ವವಾದ ಪದಗಳು ,ಭೂಮಿ ಎಷ್ಟು ಬಿಲಿಯನ್ ವರ್ಷಗಳ ಹಿಂದೆ ಜನ್ಮ ತಾಳಿದೆ ಈ ಬಿಲಿಯನ್ ವರ್ಷಗಳು‌ ಆದ ತದನಂತರ ಸಾವಿರಾರು ಕೋಟಿ ಜೀವ ರಾಶಿಗಳು ಕೂಡ ಜನ್ಮತಾಳಿದವು ಅವುಗಳಲ್ಲಿ ಮನುಷ್ಯ ಕೂಡ ಒಬ್ಬ ‘ಮಂಗನಾದ ಮನುಷ್ಯ ಸಂಪೂರ್ಣವಾಗಿ ಬುದ್ಧಿವಂತ ಮನುಷ್ಯನಾಗಲು ನೂರಾರು ವರ್ಷಗಳ ಕಾಲವೇ ಆಯಿತು ಅನಂತರ ವಿದ್ಯಾವಂತ ಮನುಷ್ಯ ಆಗಲು ಇನ್ನು ನೂರಾರು ವರ್ಷಗಳ ಕಾಲ ಆಯಿತು ,ಈ ಬುದ್ದಿವಂತ ಮನುಷ್ಯನು ವಿದ್ಯಾವಂತ ಮನುಷ್ಯನಾಗಲು ಮುಖ್ಯ ಕಾರಣ ಶಾಲೆಗಳು , ಈ ಶಾಲೆಗಳಲ್ಲಿ ವಿವಿಧ ರೀತಿಯ ಶಾಲೆಗಳು ಕೂಡ ಇವೆ‌ ಇಲ್ಲಿ ಹೇಳಿಕೊಳ್ಳುವುದು ಬೇಡ ಒಟ್ಟಿನಲ್ಲಿ ವಿದ್ಯೆಯನ್ನು ನೀಡುವ ಶಾಲೆಗಳು ಎಂದರೆ ಸಾಕು ,ನಾನು ಹುಟ್ಟುವ ಮುಂಚೆ ನೂರಾರು ಮಹಾನ್ ಸಾಧಕರು ಹುಟ್ಟಿದರೆ ಈ ಮಾತು ಏಕೆ ಹೇಳುವೆ ಎಂದರೆ ನಾನು ಏನು ಸಾಧಕನಲ್ಲ ,ಈ ವಿಷಯಕ್ಕೆ ಸಂಬಂಧಿಸಿದ ಮಾಹಿತಿಗೆ ನನ್ನ ಹುಟ್ಟಿನ ವರ್ಷವನ್ನು ತೆಗೆದುಕೊಳ್ಳುತ್ತಿರುವೆ ಅಷ್ಟೇ .೧೯೯೯ ಹಿಂದೆ ಹುಟ್ಟಿದ ಕೋಟ್ಯಂತರ ಜನರು ವಿದ್ಯೆಯನ್ನು ಕಲಿತಿದ್ದು , ಪಾಠಶಾಲೆಯಲ್ಲಿ ಇನ್ನು ಹಳೆಯ ಪದ್ದತಿಗೆ ಹೋದರೆ ಅಂದಿನ ಋಷಿಗಳು ,ಮರಗಳ ಕೆಳಗೆ ಇಲ್ಲ ತಮ್ಮ ವಾಸಿಸುವ ಸ್ಥಳಗಳಲ್ಲಿ ,ರಾಜ ಮಹಾರಾಜರ ಕುಟುಂಬದ ಮಕ್ಕಳಿಗೆ ಅವರ ಅರಮನೆಯಲ್ಲಿ ಶಿಕ್ಷಣವನ್ನು ಹೇಳಿಕೊಡುವ ಪದ್ದತಿ ಇತ್ತು ಇಂದಿನ ಟ್ಯೂಶನ್ ಎನ್ನುವ ಪರಿಸ್ಥಿತಿಯಂತೆ ಆದರೆ ಎರಡು ಒಂದೆ ಶಿಕ್ಷಕರು ಅಂದು ಅವರ ಮನೆಗೆ ಹೋಗುತ್ತಿದ್ರು ಇಂದು ಶಿಕ್ಷಕರ ಮನೆಗೆ ಮಕ್ಕಳು ಹೋಗುತ್ತಾರೆ ಅಷ್ಟೇ ಇದು ಬಿಡಿ ,ನನಗೆ ಆರು ವರ್ಷ ತುಂಬುವಷ್ಟರಲ್ಲಿ ಪೋಷಕರು ಶಾಲೆಗೆ ಸೇರಿಸಿಬಿಟ್ಟರು ಆಗ ಗೊತ್ತಾಯಿತು ಶಾಲೆಯಲ್ಲಿ ಬಿಸಿ ಊಟ,ಬಟ್ಟೆ , ಪುಸ್ತಕ ಕೊಡುತ್ತಾರೆ ಅಂತ ಇದು ಕೂಡ‌ತುಂಬಾ ಒಳ್ಳೆಯದು , ಇನ್ನು ಗೆಳೆಯರು ಶಾಲೆಗೆ ಬಂದಿಲ್ಲ ಅಂತ ಮನೆಗೆ ಕರೆದುಕೊಂಡು ಬರೋಣ ಅಂತ ಹೋದ್ರೆ , ಲಿಂಗಾಯತ ಜಾತಿಯವರು ನಮ್ಮನ್ನು ಹೊರಗೆ ನಿಲ್ಲಿಸಿ ಅವರ ಮಕ್ಕಳನ್ನು ಅವರ ಜೊತೆ ಹೋಗಬೇಡಿ ಎನ್ನುವ ಪಿಸು ಮಾತುಗಳು ಕೂಡ ಕಿವಿಗೆ ಬಿದ್ದಿದ್ದು ಕೂಡ ಉಂಟು ಹಳ್ಳಿಗಳಲ್ಲಿ ಜಾತಿಗಳಿಗೆ ಹೆಚ್ಚಿನ ಮಹತ್ವ ಕೊಡುತ್ತಾರೆ ಈಗಲೂ ಕೂಡ , ಈಗಲೂ ಕೂಡ ಅದೇ ಪದ್ದತಿ ಅವರ ಮನೆಯ ಹೆಣ್ಣುಮಕ್ಕಳನ್ನು ಕೆಳ ಜಾತಿಯವರಿಗೆ ಕೊಡಲ್ಲ ಇದು ತುಂಬಾ ಸಲ ಹೇಳಿರುವೆ ಬಿಡಿ ವಿಷಯಕ್ಕೆ ಬರುವೆ ಲಿಂಗಾಯತ ಮನೆಯ ಹುಡುಗ ಶಾಲೆಗೆ ಬಂದ ತಕ್ಷಣ ನಮ್ಮ ಜೊತೆಗೆ ಆಟ ಆಡುತ್ತಿದ್ದ ಒಂದೆ ತಟ್ಟೆಯಲ್ಲೇ ಊಟ ಮಾಡುತ್ತಿದ್ದ ಆಗ ಅವನಿಗೆ ಏನು ಆಗಲಿಲ್ಲ ಅಪ್ಪೋ ಇದೆ ನಮಗೆ ಅಚ್ಚರಿ ಮೂಡಿಸಿತು , “ಮನೆಯೊಳಗೆ ಇದ್ದ ಜಾತಿ ಬಿದ್ದಿಯಲ್ಲಿ ನೆಲವ ನೆಕ್ಕಿತು ” ಅಂತ ಈಗ ಅನಿಸುತ್ತಿದೆ ,ಅಂದು ಜಾತಿ ಆಯಿತು ಪ್ರಸ್ತುತ ಸಮಯದಲ್ಲಿ ನೋಡೋಣ ” ಶಾಲೆಯಲ್ಲಿ ಹುಟ್ಟಿದ ಹಿಜಾಬ್, ಕೇಸರಿ ರಂಪಾಟ ಕೋರ್ಟ್ನಲ್ಲಿ ಉರುಳಿ ಹೊದ್ದಾಡಿತು ” ಇನ್ನು ಬಾಯಿಯಲ್ಲಿ ಇದ್ದ ಹಲಾಲ್ ಮಾಂಸ ಬೀದಿಯ ಕಲ್ಲಂಗಡಿಯಾಗಿ ಪರಿವರ್ತನೆ ಆಯಿತು , ತದನಂತರ ಚಿನ್ನದ ಮಾಯಾ ಪೆಟ್ಟಿಗೆ ಧರ್ಮದ ಚೌಕಟ್ಟಿನಲ್ಲಿ ಸಿಲುಕಿತು , ಕೊನೆಗೆ ಪಠ್ಯದಲ್ಲಿ ಹೋಗಿ ವಿದ್ಯಾರ್ಥಿಗಳ ಒಳಗೆಲ್ಲಾ ನುಗ್ಗಿವಂತೆಯಾಗಿದೆ ಪ್ರಸ್ತುತ ಧರ್ಮದ ಆತಂಕ.

ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ , ಹಳಗನ್ನಡ ನಡುಗನ್ನಡ ಹೊಸಗನ್ನಡ ಮೂರು ಪ್ರಕಾರದ ಬರಹಗಳನ್ನು ಬರೆದಿರುವ ಕಾಲಕ್ಕೆ ತಕ್ಕಂತೆ ಕವಿಗಳು ಕೂಡ ಇರುವರು ಒಬ್ಬೊಬ್ಬರನ್ನೇ ಇಲ್ಲಿ ಹೇಳುತ್ತಾ ಹೋಗುವೆ , ಸಮಂತಾ ಭದ್ರ ,ಶಿವಕೋಟ್ಯಚಾರ್ಯ ,ಪಂಪ ,ರನ್ನ,ಜಿನ್ನಾ, ಪುಲಿಗೆರೆ ಸೋಮನಾಥ , ನಯಸೇನ,ಅಸಗ , ಹರಿಹರ, ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ,ಜೇಡರ ದಾಸಿಮಯ್ಯ , ಪುರಂದರ ದಾಸರು, ಕನಕದಾಸರು,ಸಂಚಿ ಹೊನ್ನಮ್ಮ, ಬಸವಣ್ಣನವರು , ಅಕ್ಕಮಹಾದೇವಿ, ಅಲ್ಲಮಪ್ರಭು ,ಮಧುರ ಚೆನ್ನ,ಶಾಂತಕವಿ , ಕುವೆಂಪು, ಶಿವರಾಮ್ ಕಾರಂತ ,ಯು,ಆರ್ ಅನಂತಮೂರ್ತಿ,ವಿ,ಕೃ ಗೋಕಾಕ್, ಗಿರೀಶ್ ಕಾರ್ನಾಡ್, ಕಂಬಾರ ಅವರು ,ಎನ್ , ಎಸ್ ಲಕ್ಷ್ಮೀನಾರಾಯಣ ಭಟ್ಟ , ರಾಮಸ್ವಾಮಿ ಅಯ್ಯಂಗಾರ್,ಚಾಂಪಾ ,ಡಿವಿಜಿ, ಶಿಶುನಾಳ ಶರೀಫರು ,ಆರ್ ,ಸಿ ಹಿರೇಮಠ್, ಪೂರ್ಣಚಂದ್ರ ತೇಜಸ್ವಿ, ಎಸ್,ಎಲ್ ಭೈರಪ್ಪ, ಲಂಕೇಶ್, ಸಿದ್ದಲಿಂಗಯ್ಯ, ಲಲಿತಾ ನಾಯಕ್ , ವೀರಭದ್ರಪ್ಪ, ದೇವನೂರು ಮಹಾದೇವ , ಬರಗೂರು ರಾಮಚಂದ್ರಪ್ಪ, ಇನ್ನು ಮಹಾನ್ ಕವಿ , ಸಾಹಿತಿ, ಲೇಖಕರ ಸಾಹಿತ್ಯ ಗ್ರಂಥಗಳು, ಕಾದಂಬರಿ , ಕವನಸಂಕಲನ, ಮತ್ತು ಬರಹಗಳು ಎಷ್ಟು ಲಕ್ಷಾಂತರ ಪುಟಗಳು ಇವೆ ಆದರೆ ಇಂದಿನ ಪಠ್ಯ ಪುಸ್ತಕ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಜಾತಿ, ಧರ್ಮದವರನ್ನು ಒಟ್ಟುಗೂಡಿಸಿ ಶಿಕ್ಷಣದ ಪ್ರಾಮುಖ್ಯತೆಯನ್ನು ಹಾಳು ಮಾಡಲು ನೋಡುತ್ತಿರುವುದು ನೋಡಿದ್ರೆ ಭಾರತ ಎಲ್ಲೋ ಕೊನೆಯ ಪಥದೆಡೆಗೆ ಸಾಗುತ್ತಿದೆ ಎಂದು ಅನಿಸುತ್ತದೆ.

ಅರವಿಂದ್ ಮಾಲಗತ್ತಿ ಅವರ ಬರಹ ತುಂಬಾ ಮಹತ್ವ ಪೂರ್ಣವಾದದ್ದು ಮತ್ತೆ ದೇವನೂರು ಮಹಾದೇವರ ಬರಹ ಎಂದರೆ ನೊಂದವರಿಗೆ , ಶೋಷಣೆಗೆ ಒಳಗಾದವರ ಬಗ್ಗೆ ಧ್ವನಿ ಎತ್ತುವಂತದ್ದು , ಇನ್ನು ಬರಗೂರು ರಾಮಚಂದ್ರಪ್ಪನವರ ಬರಹ ಅದ್ಭುತವಾದದ್ದು , ಭೈರಪ್ಪನವರು ಬಾಯಿಯಲ್ಲಿ ಮಾತ್ರ ರಾಜಕೀಯ ಸಂಪರ್ಕರು , ಬರಹದಲ್ಲಿ ಮಹತ್ವ ಪೂರ್ಣ ವ್ಯಕ್ತಿ ವ್ಯಕ್ತಿತ್ವದವರು , ಮೂರನೇ ತರಗತಿಯಿಂದ ಹಿಡಿದು ಪದವಿ ಶಿಕ್ಷಣದವರಿಗೂ ಕೂಡ ಮಹಾನ್ ಮೇಧಾವಿಗಳ ಕತೆ ,ಕವನ , ಕಾದಂಬರಿ ,ಗದ್ಯಭಾಗ ,ಲೇಖನದ ಬರಹಗಳನ್ನು ಓದಿಕೊಂಡು ಬಂದ ನಾನು ಇವತ್ತು ಎಂದರೆ ಪ್ರಸ್ತುತ ಸಮಯದಲ್ಲಿ ಈ ಲೇಖನ ಬರೆಯಲು ಕಾರಣವೆಂದರೆ ಶಿಕ್ಷಣದ ವ್ಯವಸ್ಥೆ ಧರ್ಮದಲ್ಲಿ ಮುಳುಗಿದ ಅವ್ಯವಸ್ಥೆ ಎಂದು ಹೇಳಬಹುದು , ಒಬ್ಬ ಶಿಕ್ಷಕ ತಜ್ಞ ,ಅತಿ ಹೆಚ್ಚು ಶಿಕ್ಷಣದ ಜ್ಞಾನವಿರುವ ವ್ಯಕ್ತಿ ಇಂದು ಧರ್ಮದಲ್ಲಿ ಮುಳುಗಿರುವನು ಎಂದರೆ ಇದು ಮಾಂಸ ಖಂಡದ ದೇಹವಲ್ಲಾ ಇದು ಹಣ ,ಬಂಗಾರ ದೇಹವೆಂದು ತಿಳಿಯುತ್ತದೆ.ಶಿಕ್ಷಣ ಕೂಡ ಇಂದು ಹಣಕ್ಕೆ ಮಾರಾಟವಾಗಿದೆ, ವಿದ್ಯೆ ಕಲಿಸುವ ಗುರುಗಳು ಕೂಡ ಮಾರಾಟವಾಗಿ ಹೇಳಿದಂತೆ ಕೇಳಿ ಶಿಕ್ಷಣ ಕಲಿಸುವ ಮಂದಿಯಾಗಿರುವರು ,”ಭಯದ ಶಿಕ್ಷಣದ ನಡುವೆ ಹಣದ ಶಿಕ್ಷಣ ಬಂದಿದೆ “ಭಯದ ಶಿಕ್ಷಣ ಸಾಧಕನಾಗಿ ಮಾಡಿದ್ರೆ ,ಹಣದ ಶಿಕ್ಷಣ ಹಣದ ಹುಚ್ಚನಾಗಿ ಮಾಡುತ್ತಿದೆ ,ಹಣವೆನ್ನೋ ಹೆಚ್ಚಾಯಿತು ಇದರ ನಡುವೆ ಧರ್ಮದ ಹುಚ್ಚು ಹೆಚ್ಚಾಗಿ ಕಾಣುತ್ತಿದೆ ಏಕತೆ ಸಮಾನತೆ ಜಾತ್ಯತೀತತೆಯ ಅರ್ಥವನ್ನು ಹೇಳಿಕೊಡುವ ಶಾಲೆಗಳು ಜಾತಿ ಮತ ಪಂಥ ಧರ್ಮಗಳ ಬಗ್ಗೆ ಹೇಳುತ್ತಿವೆ ,ಯಾವ ಸಾಹಿತಿಗಳು ಲಿಖಿತದ ಮೂಲಕ ಪತ್ರ ಬರೆದು ಪಠ್ಯದಲ್ಲಿ ತನ್ನ ಬರಹಗಳನ್ನು ಸೇರಿಸಲು ಬೇಡ ಎನ್ನುತ್ತಿರುವರು ಎಂದರೆ ಶಿಕ್ಷಣ ವ್ಯವಸ್ಥೆ ಏನಾಗಿದೆ ಮತ್ತೆ ವಿದ್ಯೆಯನ್ನು ಕಲಿಯುವ ವಿದ್ಯಾರ್ಥಿಗಳ ಮೌಲ್ಯ ಏನಾಗುತ್ತದೆ ಎಂದು ಯೋಚನೆ ಮಾಡಬೇಕು ನಾವು .

ಸಾವಿರಾರು ಸಾಹಿತ್ಯವನ್ನು ಬರೆದಿರುವ ಸಾಹಿತಿಗಳು ಇರುವರು ಅದು ಬಿಟ್ಟು ಧರ್ಮದ ಕಿಚ್ಚನ್ನು ಹುಟ್ಟಿಸುವ ವ್ಯಕ್ತಿಗಳ ಬರಹಗಳು ಭಾರತಕ್ಕೆ ಮತ್ತು ಕನ್ನಡದ ಪಠ್ಯದಲ್ಲಿ ಬೇಡ ಎಂದು ನನ್ನ ಅನಿಸಿಕೆ.

ಓದುವ ಮೌಲ್ಯ ಏಕತೆಯನ್ನು ತಂದು ಜೀವನದ ಆಧಾರವಾಗಬೇಕೇ ವಿನಃ ಧರ್ಮದ ಕಿಚ್ಚನ್ನು ಹುಟ್ಟಿಸಬಾರದು. ನೆಹರೂ ತನ್ನ ಮಗಳಿಗೆ ಬರೆದ ಬರಹದಲ್ಲಿ ಒಂದು ಮಹತ್ವಪೂರ್ಣ ಸಂದೇಶವಿತ್ತು , ತುಂಬಾ ಒಳ್ಳೆಯ ವ್ಯಕ್ತಿತ್ವದ ವ್ಯಕ್ತಿಯಾದ ಶಿಕ್ಷಣ ಸಚಿವರು ಕಮಲದ ಹೂವಿನ ಸುಗಂಧ ವಾಸನೆಯಲ್ಲಿ ಮುಳುಗಿ ಹೋಗಿರುವರು ಎಂದು ಇಂದು ತಿಳಿಯುತ್ತದೆ , “ಹತ್ತನೇ ತರಗತಿಯ ಮೆಟ್ಟಿಲು ಜೀವನಕ್ಕೆ ತೊಟ್ಟಿಲು “ಎಂದು ಹೇಳಬಹುದು ಇತಿಹಾಸದ ತಿರುವು ಜೀವನದ ವರವು ಎಂದು ತಿಳಿಸಬಹುದು ಆದರೆ ಇಂದಿನ ಕರ್ನಾಟಕ ಪಠ್ಯ ಪುಸ್ತಕದ ಅಧ್ಯಕ್ಷರು ಹುಚ್ಚಾರಂತೆ ಕನ್ನಡ ನಾಡಗೀತೆಯನ್ನು ತಮ್ಮ ಮುಖಪುಟದಲ್ಲಿ ಪ್ರಕಟಿಸಿರುವರು , ಪಠ್ಯ ಪುಸ್ತಕದ ವಿಷಯ ಬಂದರೆ ಈಗ ಜಾತಿ ಮತ ಪಂಥ ಧರ್ಮಗಳು ನೆನಪು ಆಗುತ್ತದೆ ಆದರೆ ಎರಡು ವರ್ಷಗಳ ಹಿಂದೆ ಮಹತ್ವಪೂರ್ಣ ಕತೆ,ಕವನ, ಕಾದಂಬರಿ ಗದ್ಯಭಾಗದ ಲೇಖನಗಳು ಪಠ್ಯದಲ್ಲಿ ಓದಿ ತಿಳಿದು ಅಳವಡಿಸಿಕೊಂಡು , ಪರೀಕ್ಷೆಯನ್ನು ಬರೆಯುತ್ತಿದ್ದೀವಿ ಆದರೆ ಇಂದು ಏನು ಬರೆಯಬೇಕೋ ಗೊತ್ತಿಲ್ಲ ಎಲ್ಲರಿಗೂ ಒಂದೇ ರೀತಿಯ ಅಂಕಗಳು ಬರುತ್ತಿವೆ ಎಲ್ಲರೂ ಬುದ್ದಿ, ವಿದ್ಯಾವಂತರು ಇರುವರು ಅದಕ್ಕೆ ಹಳೆಯ ಕಾಲದವರ ಬರವಣಿಗೆ ಯಾರಿಗೂ ಬೇಡವಾಗಿದೆ ಹೆಸರಿಗೆ ಮಾತ್ರ ಕವಿ ಸಾಹಿತಿಗಳು ಎಂದುಹೊಗಳುವ ಜನರು ಇರುವರು , ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಇನ್ನು ಏನೇನು ಆಗುತ್ತದೆ ಗೊತ್ತಿಲ್ಲ , ಮಕ್ಕಳಿಗೆ ಜೀವನದ ಆಧಾರದ ಸಂದೇಶ , ತತ್ವಗಳನ್ನು ತಿಳಿಸುವ ಪಠ್ಯ ಬಂದರೆ ತುಂಬಾ ಒಳ್ಳೆಯದು ಎಂದುಕೊಂಡಿರುವೆ ಅದು ಬಿಟ್ಟು ಧರ್ಮಗಳ ಬಗ್ಗೆ ,ಒಂದೇ ಧರ್ಮದ ವ್ಯಕ್ತಿಗಳನ್ನು ಸೇರಿಸಿಕೊಂಡು ಪಠ್ಯವನ್ನು ಮೂದ್ರಿಸಿದ್ರೆ ಮುಂದಿನ ದಿನಗಳಲ್ಲಿ ಭವಿಷ್ಯ , ನಕಾಶೆಯಲ್ಲಿ ಮೂಡಿ ಹೋಗುತ್ತದೆ. ಇನ್ನು ಕುವೆಂಪು ಅವರ ಬರವಣಿಗೆಯನ್ನು ಓದಿದ್ರೆ ಕುಳಿತಲ್ಲೇ ಕನ್ನಡ ರಾಜ್ಯವನ್ನು ನೋಡಬಹುದು ,ಅದ್ರೆ ಕುವೆಂಪು ಅವರ ಬಗ್ಗೆ ಕವಿ ಪರಿಚಯದಲ್ಲಿ ಚಿಕ್ಕ ಟಿಪ್ಪಣಿಯಂತೆ ಪರಿಚಯ ಮಾಡಿಸಿದ್ರೆ ಏನು ಒಳ್ಳೆಯದು ಹೇಳಿ , ನಾನು ಕೂಡ ಕೆಲವು ಕವನ ಲೇಖನಗಳನ್ನು ಬರೆದಿರುವೆ,ನನ್ನ ಬರಹಗಳನ್ನು ನೀವು ಓದಿದ್ರೆ ನಿಮಗೆಲ್ಲ ಉರಿಯುತ್ತದೆ ಬಿಡಿ , ಇನ್ನು ಎಲ್ಲಿಪಠ್ಯದಲ್ಲಿ ಹಾಕಲು ಸಾಧ್ಯವಾಗುತ್ತದೆ , ಶಿಕ್ಷಣದ ಸಚಿವರು ಕಮಲದಲ್ಲಿ ಮುಳಗಿಲ್ಲ ಅಂದುಕೊಂಡಿದ್ದೆ ಅವರು ಕೂಡ ಕಮಲದ ವಾಸನೆಯಲ್ಲಿ ಮುಳುಗಿ ಹೋಗಿರುವರು ಎಂದು ತಿಳಿದು ಹೋಗಿದೆ ಹೃದಯ ಪೂರ್ವಕ ಧನ್ಯವಾದಗಳು ನಿಮಗೂ ಮತ್ತೆ ಹೊಸದಾಗಿ ಪಠ್ಯದಲ್ಲಿ ಸೇರಿದ ಬರಹಗಾರರಿಗೆ.


ಭೋವಿ ರಾಮಚಂದ್ರ
ಹರಪನಹಳ್ಳಿ.

- Advertisement -
- Advertisement -

Latest News

ಶಿಕ್ಷಕರ ಸೇವಾ ಪುಸ್ತಕ ಸರಿಪಡಿಸಲು “ಗುರುಸ್ಪಂದನ” ಕಾರ್ಯಕ್ರಮ ಆಯೋಜಿಸಿ; ಭೂಸನೂರ

ಸಿಂದಗಿ: ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಪುಸ್ತಕಗಳು  ಅಪೂರ್ಣವಾಗಿರುವ ಸೇವಾ ವಿವರ ಹಾಗೂ ಮಾಹಿತಿಯನ್ನು ಪೂರ್ಣಗೊಳಿಸಲು "ಗುರುಸ್ಪಂದನ" ಕಾರ್ಯಕ್ರಮವನ್ನು  ಆಯೋಜಿಸುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ...
- Advertisement -

More Articles Like This

- Advertisement -
close
error: Content is protected !!