spot_img
spot_img

ಎರಡನೇ ಹಂತದ ಕೋವಿಡ್ ಲಸಿಕಾಕರಣ ಅಭಿಯಾನ ಯಶಸ್ವಿ

Must Read

- Advertisement -

ಸವದತ್ತಿ: ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದ ಎನ್.ಎಸ್.ಎಸ್.ಘಟಕ, ಎನ್.ಸಿ.ಸಿ., ಯುಥ್ ರೆಡ್ ಕ್ರಾಸ್ ಮತ್ತು ತಾಲೂಕ ಆಸ್ಪತ್ರೆ ಹಾಗೂ ತಾಲೂಕ ಆಡಳಿತವು ಎರಡನೇ ಹಂತದ ಕೋವಿಡ್ ಲಸಿಕಾಕರಣ ಅಭಿಯಾನ ಹಮ್ಮಿಕೊಳ್ಳಲಾಗಿತ್ತು. ಪ್ರಸ್ತುತ ಪದವಿ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಲು ಎರಡನೇ ಹಂತದ ಕೋವಿಡ್ ಲಸಿಕಾಕರಣ ಅವಶ್ಯಕತೆಯಿತ್ತು.

ಎರಡನೇ ಹಂತದ ಕೋವಿಡ್ ನಿರೋಧಕ ಲಸಿಕೆ ಹಾಕುವದರ ಜೊತೆಗೆ ಸವದತ್ತಿ ತಾಲೂಕ ಆಸ್ಪತ್ರೆಯ ಶ್ರೀ ಶಶಿಧರ ಎಲ್.ಟಿ.ಯವರು 27 ವಿದ್ಯಾರ್ಥಿಗಳ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳಿಸಿದರು.

- Advertisement -

ಈಗಾಗಲೇ ಜುಲೈ ಒಂದು ಮತ್ತು ಹನ್ನೆರಡನೇ ತಾರೀಖಿನಂದು ಮೊದಲ ಹಂತದ ಕೋವಿಡ್ ಲಸಿಕಾಕರಣ ಬೃಹತ್ ಅಭಿಯಾನವನ್ನು ಕೈಗೊಂಡ ನಂತರ ಇದು ಎರಡನೇ ಹಂತದ್ದು. ಮಹಾವಿದ್ಯಾಲಯದಲ್ಲಿ ಒಟ್ಟು 150 ವಿದ್ಯಾರ್ಥಿಗಳು ಎರಡನೇ ಹಂತದ ಲಸಿಕೆ ಹಾಕಿಸಿಕೊಂಡರು.

ಬೋಧಕ, ಬೋಧಕೇತರ ಸಿಬ್ಬಂದಿ, ಸವದತ್ತಿ ತಾಲೂಕ ಆಸ್ಪತ್ರೆಯ ಶ್ರೀ. ಮುಕ್ತುಂ ಮುಲ್ಲಣ್ಣವರ, ಶ್ರೀಮತಿ ಎಲ್ಲಮ್ಮ ಹುಣಸಿಕಟ್ಟಿ ಮತ್ತು ಶ್ರೀ ಶಂಕರ ಅವರು ವಿದ್ಯಾರ್ಥಿಗಳಿಗೆ ಲಸಿಕೆ ಹಾಕಿದರು.

- Advertisement -
- Advertisement -

Latest News

ಹುಬ್ಬಳ್ಳಿ ಕೊಲೆ ಪ್ರಕರಣ ತನಿಖೆ ಸಿಬಿಐಗೆ ಕೊಡಬೇಕು

ಬೆಂಗಳೂರಿನ ತನ್ನದೆ ಪಕ್ಷದ ಶಾಸಕನ ಮನೆ ಬೆಂಕಿಗೆ ಆಹುತಿಯಾಗುವುದನ್ನು ತಡೆಯದ ಕಾಂಗ್ರೆಸ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ತನ್ನದೆ ಪಕ್ಷದ ನಗರ ಸೇವಕನ ಮಗಳ ಹತ್ಯೆಯನ್ನ...
- Advertisement -

More Articles Like This

- Advertisement -
close
error: Content is protected !!
Join WhatsApp Group