spot_img
spot_img

ಕಂಚಿಯ ಬಂಗಾರದ ಹಲ್ಲಿಯ ರಹಸ್ಯ

Must Read

- Advertisement -

ಈ ಬಂಗಾರದ ಹಲ್ಲಿಯನ್ನು ಮುಟ್ಟಿ ನಮಸ್ಕರಿಸಿದರೆ ಸಾಕು ಮೈಮೇಲೆ ಹಲ್ಲಿ ಬಿದ್ದ ದೋಷಗಳು ನಿವಾರಣೆಯಾಗುತ್ತವೆ‌

ಪುಣ್ಯಕ್ಷೇತ್ರಗಳಲ್ಲಿ ಒಂದು ಕಾಂಚಿಪುರಂ. ಕಂಚಿಯ ಬಗ್ಗೆ ಕಥೆಯನ್ನು ಪುಂಖಾನುಪುಂಖವಾಗಿ ನಾವೆಲ್ಲರೂ ಕೇಳಿದ್ದೇವೆ.ಹಾಗೂ ಎಲ್ಲರೂ ಕೇಳಿರುತ್ತಾರೆ.ಅವು ಎಲ್ಲವು ತಿಳಿದಿರುವಂತಹವು.ಇನ್ನು ಈ ಕಥೆಗಳನ್ನು ಪಕ್ಕಕ್ಕಿಟ್ಟರೆ , ಮನೆಗಳಲ್ಲಿ ಓಡಾಡುವ ಹಲ್ಲಿಗಳು ಯಾವಾಗ್ಲಾದ್ರೂ ಮೈಮೇಲೆ ಬಿದ್ದಾಗ ಯಾವುದೇ ಭಾಗದಲ್ಲಿ ಬಿದ್ದರೂ ನಾವು ತಕ್ಷಣ ಹೋಗಿ ಬಂಗಾರದ ಹಲ್ಲಿಯನ್ನು ಮುಟ್ಟಿ ನಮಸ್ಕಾರ ಮಾಡಿ ಬಂದವರ ಕಾಲಿಗೆ ಬಿದ್ದು ನಮಸ್ಕರಿಸುವುದು ರೂಢಿಯಾದ ಒಂದು ಕೆಲಸವಾಗಿದೆ.

ಅದು ಯಾಕೆ ? ಮೈಮೇಲೆ ಹಲ್ಲಿ ಬಿದ್ದರೆ ನಾವು ಅವರಿಗೆ ನಮಸ್ಕಾರ ಮಾಡಬೇಕು ? ಇನ್ನು ಬಂಗಾರದ ಹಲ್ಲಿಯ ಗುಡಿಯಲ್ಲಿ ನೂರಾರು ಹಲ್ಲಿಗಳು ಯಾಕೆ ಓಡಾಡುತ್ತವೆ? ಎಂದು ಹಲವಾರು ಪ್ರಶ್ನೆಗಳು ಹಲವಾರು ಜನರಿಗೆ ಕಾಡೋದು ಸಹಜವೇ. ಇನ್ನು ಆ ರಹಸ್ಯಗಳ ಹಿಂದಿನ ಸತ್ಯಾಂಶವನ್ನು ತಿಳಿಯೋಣ.

- Advertisement -

ಚರಿತ್ರೆಗಳ ಕಥೆ:

ಒಬ್ಬ ಋಷಿಕುಮಾರನು ದೇವತಾರ್ಚನೆಗಾಗಿ ಗಂಗಾಜಲ ತರಲು ಹೇಳಿದ್ದನಂತೆ.ಮಗನು ತಂದ ಗಂಗಾಜಲದಲ್ಲಿ ಹಲ್ಲಿ ಇರುವುದನ್ನು ನೋಡಿದ ಋಷಿಯು ಹಾಗೆಯೆ ತಂದಿದ್ದನ್ನು ಕಂಡು ಕೋಪಿಷ್ಟನಾದ ಮುನಿಯು ಅವನಿಗೆ ಹಲ್ಲಿಯಾಗುವಂತೆ ಶಾಪವನ್ನು ನೀಡುತ್ತಾನೆ.ಮೊದಲಿಗೆ ಕೋಪಾದ್ರಿಕ್ತನಾದ ಮುನಿಯ ಶಾಪದಿಂದ ಮಗನು ಹಲ್ಲಿಯ ರೂಪವನ್ನು ತಾಳುತ್ತಾನೆ.

ತದನಂತರ ಮಗನಲ್ಲಿ ದೋಷವೇನು ಇಲ್ಲವೆಂದು ತಿಳಿದ ಋಷಿಯು ಕಂಚಿಯಲ್ಲಿಯೇ ಬಂಗಾರದ ಹಲ್ಲಿಯಾಗಿ ಸರ್ವರಿಂದಲೂ ಪೂಜಿಸುವಂತವನಾಗು ಎಂದು ವರವನ್ನು ನೀಡುತ್ತಾನೆ. ಹೀಗೆ ಆ ಮಗನು ಅಂದಿನಿಂದ ಅಲ್ಲಿ ಬಂಗಾರದ ಹಲ್ಲಿಯಾದನೆಂದು ಹೇಳುತ್ತವೆ ಪುರಾಣಗಳು.ಅದನ್ನು ಮುಟ್ಟಿದರೆ ಸಾಕು ಮನೆಯಲ್ಲಿ ಮೈಮೇಲೆ ಎಲ್ಲೇ ಹಲ್ಲಿ ಬಿದ್ದರೂ ಆ ದೋಷ ತೊಲಗಿ ಹೋಗುತ್ತವೆ ಎಂದು ಅಲ್ಲಿನ ಪುರಾಣಕಥೆಗಳ ಪ್ರಕಾರ ಹೇಳಿರುವಂತಹ ಸುದ್ದಿಯಾಗಿದೆ.

ಆ ಋಷಿ ತನ್ನ ಮಗನಿಗೆ ವರವನ್ನು ನೀಡಿದ್ದಾನೆ ಇದನ್ನು ಸಾಕಷ್ಟು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ ಎಂದು ಭಾರತ ದೇಶದ ನಾಲ್ಕು ಮೂಲೆಗಳಿಂದ ಕಂಚಿಯಲ್ಲಿರುವ ಬೆಳ್ಳಿ ಹಾಗೂ ಬಂಗಾರದ ಹಲ್ಲಿಗಳನ್ನು ಮುಟ್ಟಿ ನಮಸ್ಕರಿಸುವುದು , ಹಲ್ಲಿ ಬಿದ್ದ ದೋಷ ಪರಿಹರಿಸಿಕೊಳ್ಳುವುದಕ್ಕಾಗಿ ಭಕ್ತಾದಿಗಳು ಬಂದು ದರ್ಶನ ಮಾಡಿಕೊಂಡು ಹೋಗುತ್ತಾರೆ.

- Advertisement -

ಹಾಗೆಯೇ ಈ ದೇವಾಲಯದ ಹೊರಾಂಗಣದಲ್ಲಿ ಆನಂದ ಸರೋವರ ಹಾಗೂ ಬಂಗಾರ ತಾವರ್ ತಟಾಕ್ ಎಂಬ ಪ್ರದೇಶಗಳು ಇವೆ.ಅಂದರೆ ಒಂದು ಚಿಕ್ಕ ಪುಷ್ಕರಣಿ.ಆನಂದ ಸರೋವರದ ಮಧ್ಯದಲ್ಲಿ ಇರುವ ಮಂಟಪದಲ್ಲಿ ಜಲಾಂತರ ಭಾಗದಲ್ಲಿ ಅತ್ತಿ ದೇವತಾಮೂರ್ತಿಗಳು ಇವೆಯಂತೆ. ಅವು ಪ್ರತಿ ನಲವತ್ತು ವರ್ಷಗಳಿಗೊಮ್ಮೆ ಪೂಜಾಕಾರ್ಯಾದಿಗಳನ್ನು ಮುಗಿಸಿ ದರ್ಶನಾರ್ಥವಾಗಿ ಪ್ರತಿಷ್ಠಾಪಿಸಲಾಗುತ್ತದೆ.

ದೇವಾಲಯ ಇತಿಹಾಸ:

ಹೀಗೆ ಅದು 1979 ರಲ್ಲಿ ಶ್ರೀವರದರಾಜ ಪೆರುಮಾಳ್ ಸ್ವಾಮಿಯನ್ನು ಪುಷ್ಕರಿಣಿಯಿಂದ ಹೊರತೆಗೆದು ಪೂಜಾಕೈಂಕರ್ಯಗಳನ್ನು ಮಾಡಿ ನಂತರ ಭಕ್ತಾಧಿಗಳಿಗೆ ದರ್ಶನ ಭಾಗ್ಯ ಲಭಿಸಿತ್ತಂತೆ. ಮತ್ತೆ ಈಗ 2019 ರಲ್ಲಿ ಜೂನ್ ತಿಂಗಳಲ್ಲಿ ಅತ್ತಿ ಶ್ರೀವರದರಾಜ ಪೆರುಮಾಳ್ ಅವರ ದರ್ಶನ ಭಾಗ್ಯ ಲಭಿಸಿದೆ. ನನಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇನ್ನು ಒಂದು ತಿಂಗಳ ಕಾಲ ದರ್ಶನ ಭಾಗ್ಯ ಭಕ್ತಾಧಿಗಳಿಗೆ ಲಭಿಸಲಿದೆಯಂತೆ.

ಇನ್ನು ಈ ದೇವಾಲಯ ಪ್ರಾಕಾರವನ್ನು ನೋಡಿದ್ರೆ 11ನೇ ಶತಮಾನದಲ್ಲಿ ಉತ್ತುಂಗಚೋಳ, ವಿಕ್ರಮಚೋಳ ಮುಂದೆ ವಿಜಯನಗರದ ರಾಜರುಗಳಿಂದ ನಿರ್ಮಿಸಲ್ಟಟ್ಟವು ಎಂದು ಇತಿಹಾಸ ಸಾರುತ್ತಿದೆ.ಅಷ್ಟೆ ಅಲ್ಲ ಈ ದೇವಾಲಯ ಪುನರುತ್ಥಾನ ಸಾಕಷ್ಟು ಬಾರಿ ಮಾಡಲಾಗಿದೆ ಎಂದೂ ಸಹ ದಾಖಲಿಸಲಾಗಿದೆ.ಇನ್ನು ಈ ದೇವಾಲಯದಲ್ಲಿ ಸಾವಿರ ಕಂಬಗಳ ಮಂಟಪವೊಂದಿದೆ.

ಇತಿಹಾಸದ ಪ್ರಕಾರ ಇಲ್ಲಿ ವರದರಾಜ ಸ್ವಾಮಿ ಕೃತಯುಗದಲ್ಲಿ ಬ್ರಹ್ಮನಾಗಿ , ತ್ರೇತಾಯುಗದಲ್ಲಿ ಗಜೇಂದ್ರನಾಗಿ ಮತ್ತು ದ್ವಾಪರಯುಗದಲ್ಲಿ ಬೃಹಸ್ಪತಿಯಾಗಿ , ಕಲಿಯುಗದಲ್ಲಿ ಅನಂತಶೇಷನಾಗಿ ಪೂಜೆಯನ್ನು ಮಾಡಿದ್ದನೆಂದು ಹೇಳಲಾಗುತ್ತದೆ. ಹೀಗೆ ಕಾಂಚಿಪುರಂ ಪುಣ್ಯಕ್ಷೇತ್ರದಲ್ಲಿನ ಬಂಗಾರದ ಹಲ್ಲಿಯ ಮಹಾತ್ಮೆ ತಿಳಿದರೆ ಸಾಕು ನಮಗೆ ಹಲ್ಲಿ ಬಿದ್ದ ದೋಷ ತೊಲಗಿ ಹೋಗುತ್ತವೆ ಎಂದು ಪುರಾಣಗಳು ಸಾರುತ್ತವೆ.


🚩ಶ್ರೀ ಭಗವಂತ ಪರಶುರಾಮ🚩
ಇಂತಿ ಜ್ಯೋತಿಷ್ಯ ಸೇವೆಯಲ್ಲಿ ತಮ್ಮವ ಪ್ರಾಚೀನಶಾಸ್ತ್ರಾಸಕ್ತ

L ವಿವೇಕಾನಂದ ಆಚಾರ್ಯ🇮🇳 (Army Rtd) Gubbi.
ph no :9480916387

- Advertisement -
- Advertisement -

Latest News

ಹುಬ್ಬಳ್ಳಿ ಕೊಲೆ ಪ್ರಕರಣ ತನಿಖೆ ಸಿಬಿಐಗೆ ಕೊಡಬೇಕು

ಬೆಂಗಳೂರಿನ ತನ್ನದೆ ಪಕ್ಷದ ಶಾಸಕನ ಮನೆ ಬೆಂಕಿಗೆ ಆಹುತಿಯಾಗುವುದನ್ನು ತಡೆಯದ ಕಾಂಗ್ರೆಸ್, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ತನ್ನದೆ ಪಕ್ಷದ ನಗರ ಸೇವಕನ ಮಗಳ ಹತ್ಯೆಯನ್ನ...
- Advertisement -

More Articles Like This

- Advertisement -
close
error: Content is protected !!
Join WhatsApp Group