ಬೀದರ: ಗಡಿ ಜಿಲ್ಲೆ ಬೀದರ್ ನಲ್ಲಿ ಸತತವಾಗಿ ಎರಡು ದಿವಸ ದಿಂದ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಬೀದರ್ ನಲ್ಲಿ ಇರುವ ಹಲವು ಕೆರೆ ಮತ್ತು ನದಿಗಳು ತುಂಬಿ ಹರಿಯುತ್ತದೆ ಇಂತಹ ಸಂದರ್ಭದಲ್ಲಿ ರೈತನೊಬ್ಬ ನದಿ ದಾಟುವಾಗ ನದಿ ಪಾಲಾದ ಘಟನೆ ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗಿದೆ.
ಭಾಲ್ಕಿ ತಾಲೂಕಿನ ಲಖಣಗಾಂವ ಗ್ರಾಮದ ಹತ್ತಿರ ಇರುವ ಮಾಂಜರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ದಾಟಿಕೊಂಡು ಹೋಗುವಾಗ ವ್ಯಕ್ತಿಯೊಬ್ಬರು ನದಿಯಲ್ಲಿ ಹರಿದುಕೊಂಡು ಹೋದ ಘಟನೆ ಬುಧವಾರ ಬೆಳಿಗ್ಗೆ ಸಂಭವಿಸಿದೆ.
ಲಖಣಗಾಂವ ಗ್ರಾಮದ ಜ್ಞಾನೇಶ್ವರ ಸುರುಪರಾವ ಚಾಂದಿವಾಲೆ ನೀರಿನಲ್ಲಿ ಹರಿದುಹೋದ ರೈತ ವ್ಯಕ್ತಿ. ಇವರು ಬುಧವಾರ ಮುಂಜಾನೆ ನದಿಯ ಸೇತುವೆ ಮೇಲಿಂದ ನದಿ ದಾಟಿಕೊಂಡು ಹೋಗುವಾಗ ನೀರಿನ ಸೆಳೆತಕ್ಕೆ ಜಾರಿಕೊಂಡು ನದಿಯಲ್ಲಿ ಬಿದ್ದು ಹರಿದು ಹೋಗಿದ್ದಾರೆ.
ನದಿಯ ಸೇತುವೆ ಹತ್ತಿರದ ಅಕ್ಕ ಪಕ್ಕದ ಗ್ರಾಮದವರು ಹುಡುಕಾಟದಲ್ಲಿ ತೊಡಗಿದ್ದರು.ಇಂದು ರೈತ ವ್ಯಕ್ತಿಯ ಸಾವು ಸಂಭವಿಸಿರುವುದಾಗಿ ಸ್ಥಳೀಯ ಪೊಲೀಸ್ ಮೂಲಗಳು ತಿಳಿಸಿವೆ.