ಬೀದರ – ಗೋ ಮಾಂಸವನ್ನು ಇನ್ನೂವರೆಗೂ ತಿಂದಿಲ್ಲ ತಿನ್ನಬೇಕು ಅನಿಸಿದರೆ ತಿನ್ನುತ್ತೇನೆ ಎಂದು ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಬೀದರ ಜಿಲ್ಲೆಯ ಭಾಲ್ಕಿ ಕುರುಬ ಸಮಾಜ ಆಕ್ರೋಶ ವ್ಯಕ್ತಪಡಿಸಿದೆ.
ಗೋ ಮಾಂಸವನ್ನು ತಿನ್ನುವವರ ಪರವಾಗಿ ಮಾತನಾಡುವ ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯ ನವರಿಗೆ ಅವರ ಸಮಾಜದ ಭಾಲ್ಕಿಯ ನಾಗರಿಕನಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಸಿದ್ದು ಹೇಳಿಕೆ ಖಂಡಿಸುವ ವೀಡಿಯೋ ಇಂದು ವೈರಲ್ ಆಗಿದೆ.
ಸಿದ್ರಾಮಯ್ಯ ನೀನು ಕುರುಬ ನಾನು ಕುರುಬ. ಕುರುಬರು ಎಂದು ಗೋ ಮಾಂಸ ತಿನ್ನುವದಿಲ್ಲ. ಆದ್ದರಿಂದ ನೀನು ಕುರುಬನಾಗಿದ್ದು ರಾಜಕೀಯಕ್ಕೋಸ್ಕರ ಗೋ ಮಾಂಸ ತಿನ್ನುವವರ ಪರವಾಗಿ ಮಾತನಾಡುವದು, ಗೋ ಮಾಂಸ ತಿನ್ನುವದು ನಮ್ಮ ಸಮಾಜದ ಒಪ್ಪುವದಿಲ್ಲ ಎಂದು ಆ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದರು.
ಒಂದು ವೇಳೆ ಅಂತಹ ಕಾರ್ಯಕ್ಕೆ ಏನಾದರು ಇಳಿದರು ನಾನು ನಿನಗೆ ಸುಮ್ಮನೆ ಬಿಡುವದಿಲ್ಲ ಅಲ್ಲದೆ ಕುರುಬರು ಎಂದು ನಿನ್ನನ್ನು ಕ್ಷಮಿಸುವುದಿಲ್ಲ.ಕುರುಬನಾಗಿ ಹುಟ್ಟಿ ಕುರುಬರಂತೆ ನಡೆದು ಕೊಂಡರೆ ಸರಿ ಇಲ್ಲಾ ಅಂದರೆ ನಮ್ಮ ಕುರುಬ ಸಮಾಜ ನಿಮ್ಮ ವಿರುದ್ದ ಆಗುವುದು ಎಂದು ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಗೋ ಮಾಂಸದ ಬಗೆಗಿನ ನಡವಳಿಕೆಯ ಬಗ್ಗೆ ತನ್ನ ಅಸಮಾದಾನ ಹೊರ ಹಾಕಿದ ಭಾಲ್ಕಿಯ ನಾಗರಿಕ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಬಿಡುಗೆಯಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ