ಮೂಡಲಗಿ ಹಸಿರುಕ್ರಾಂತಿ ತಾಲೂಕಾ ಕಛೇರಿಯಲ್ಲಿ ದಿ.ಕಲ್ಯಾಣರಾವ ಮುಚಳಂಬಿಯವರ ಶ್ರದ್ಧಾಂಜಲಿ ಸಭೆ

Must Read

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...

“ಕಲಾಸೃಷ್ಟಿ” ಆರ್ಟ್ ವರ್ಕ್ ಗೆ ಚಾಲನೆ ನೀಡಿದ ಲೋಕಲ್ ಲೀಡರ್ ನಟ ಕಲ್ಮೇಶ್

ಬಾಗಲಕೋಟೆ: ಇದೆ ಅಕ್ಟೋಬರ್ ೧೫ ರಂದು, ಗದ್ದನಕೇರಿಯಲ್ಲಿ "ಕಲಾಸೃಷ್ಟಿ" ಆರ್ಟ್ ವರ್ಕ್ ಪ್ರಾರಂಭವಾಯಿತು. ಇದನ್ನು ನಟ ಕಲ್ಮೇಶ್, ಬಾಗಲಕೋಟೆಯ ನಟಿ ಅಂಕಿತಾ ನಾಯ್ಡು ಹಾಗೂ ಸಹ...

ಗೋವಿಂದಹಳ್ಳಿಯ ಪಂಚಲಿಂಗೇಶ್ವರ ; ಐದು ಶಿಖರಗಳ ಅಪರೂಪದ ಗುಡಿ

ಸ್ಥಳದ ಬಗ್ಗೆ ಕಿರು ಪರಿಚಯ: ಪ್ರಖ್ಯಾತ ಪ್ರವಾಸಿ ತಾಣವಾದ ಗೋವಿಂದನಹಳ್ಳಿಯ ಬ್ರಹ್ಮಲಿಂಗೇಶ್ವರ ಗುಡಿಯಿರುವುದು ಮಂಡ್ಯದಿಂದ 52 ಕಿ.ಮೀ ಹಾಗೂ ಕೃಷ್ಣರಾಜಪೇಟೆಯಿಂದ 20 ಕಿ.ಮೀ ಹಾಗು ಕಿಕ್ಕೇರಿಯಿಂದ...

ಮೂಡಲಗಿ: 1980 ರ ದಶಕದಿಂದ  ರೈತ ಹೋರಾಟಗಾರರಾಗಿ,90 ರ ದಶಕದಲ್ಲಿ ಪತ್ರಿಕಾರಂಗದಲ್ಲಿ ಗುರುತಿಸಿಕೊಂಡ ದಿ. ಕಲ್ಯಾಣರಾವ ಮುಚಳಂಬಿಯವರು ಇತ್ತೀಚೆಗಷ್ಟೇ ನಮ್ಮನ್ನೆಲ್ಲ ಅಗಲಿದ್ದು ರೈತ ಹೋರಾಟಕ್ಕೆ ಮತ್ತು ಪತ್ರಿಕಾರಂಗಕ್ಕೆ ತುಂಬಲಾಗದ ನಷ್ಟವಾಗಿದೆ ಎಂದು ಮೂಡಲಗಿ ಪತ್ರಕರ್ತ ಸಂಘದ ಅಧ್ಯಕ್ಷ ಉಮೇಶ ಬೆಳಕೂಡ ಹೇಳಿದರು.

ಅವರು ಪಟ್ಟಣದ ಹಸಿರುಕ್ರಾಂತಿ ದಿನಪತ್ರಿಕೆಯ ತಾಲೂಕಾ ಕಛೇರಿಯಲ್ಲಿ,ದಿ.ಕಲ್ಯಾಣರಾವ ಮುಚಳಂಬಿಯವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡುತ್ತ, 90ರ ದಶಕದಲ್ಲಿ ಕೇಂದ್ರ ಸರಕಾರದಿಂದ ರೈತರಿಗಾಗಿ ಜಾರಿಯಾದ ಹಸಿರು ಕ್ರಾಂತಿ ( Green Revolution ) ಯೋಜನೆಯಿಂದ ಸ್ಫೂರ್ತಿ ಪಡೆದು ಹಸಿರುಕ್ರಾಂತಿ ಎಂಬ ಪತ್ರಿಕೆಯನ್ನು ಹುಟ್ಟು ಹಾಕಿದರು ಜೊತೆಗೆ ಡಿ.ನಂಜುಂಡಸ್ವಾಮಿ,ಬಾಬಾಗೌಡ ಪಾಟೀಲ್ ರಂತಹ ರೈತ ಹೋರಾಟಗಾರರ ಜೊತೆಗೂಡಿ ಹೋರಾಟ ಮಾಡಿದಂಥ ಕೀರ್ತಿ ಮುಚಳಂಬಿಯವರಿಗೆ ಸಲ್ಲುತ್ತದೆ ಎಂದರು.

ಹಸಿರು ಕ್ರಾಂತಿ ಮೂಡಲಗಿ ತಾಲೂಕಾ ವರದಿಗಾರರಾದ ಚಂದ್ರಶೇಖರ ಪತ್ತಾರವರು ಮಾತನಾಡುತ್ತ, ಕಲ್ಯಾಣರಾವ ಮುಚಳಂಬಿಯವರು  ಪತ್ರಿಕಾರಂಗದಲ್ಲೇ ಒಬ್ಬ ಧೀಮಂತ ವ್ಯಕ್ತಿ.ಹಸಿರುಕ್ರಾಂತಿ ಸಂಪಾದಕರಾಗಿ ಅನೇಕ ಪತ್ರಕರ್ತರನ್ನು ಬೆಳೆಸುವುದಲ್ಲದೆ ಹಸಿರುಕ್ರಾಂತಿ ಪತ್ರಿಕೆಯಿಂದಲೇ ಅನೇಕ ರೈತ ಹೋರಾಟಗಳ ಬಗ್ಗೆ ಬರೆದು ಸರಕಾರಕ್ಕೆ ಮನವರಿಕೆ ಮಾಡಿಕೊಡುತ್ತ ರೈತರಿಗೆ ಮತ್ತು ಸಮಾಜಕ್ಕೆ ನ್ಯಾಯ ಸಲ್ಲಿದ್ದಾರೆ,ಈಗಿನ ಪತ್ರಿಕಾಕರ್ತರಿಗೆ ಅವರೊಂದು ಮಾದರಿ ಎಂದರು.

- Advertisement -

ಈ ಶ್ರದ್ಧಾಂಜಲಿ ಸಭೆಯಲ್ಲಿ ಪಟ್ಟಣದ ವಿವಿಧ ಪತ್ರಿಕೆಗಳ ವರದಿಗಾರರಾದ ಎಮ್.ಎಸ್.ನಂದಗಾ೦ವಮಠ,ಸುಭಾಸ ಕಡಾಡಿ,ಸಚಿನ ಪತ್ತಾರ,ಮಲ್ಲು ಬೋಳನವರ,ಸುರೇಶ ಪಾಟೀಲ್,ಭೀಮಶಿ ತಳವಾರ,ಸಂಜೀವ ಪತ್ತಾರ,ರಾಚಣ್ಣ ಉಳ್ಳಾಗಡ್ಡಿ ಸೇರಿ ಅನೇಕರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

25 ಸಾವಿರ ಮತಗಳಿಂದ ಬಿಜೆಪಿ ಗೆಲ್ಲುತ್ತದೆ – ಜೊಲ್ಲೆ ವಿಶ್ವಾಸ

ಸಿಂದಗಿ: ಎರಡು ಬಾರಿ ಚುನಾಯಿತರಾದ ರಮೇಶ ಭೂಸನೂರ ಅವರು ಅನೇಕ ಕೆಲಸಗಳನ್ನು ಮಾಡಿದ್ದಾರೆ ಅಲ್ಲದೆ ಕೇಂದ್ರ ಹಾಗೂ ರಾಜ್ಯದಲ್ಲಿ ಭಾಜಪ ಅಧಿಕಾರದಲ್ಲಿದೆ ಕ್ಷೇತ್ರದ ಅಭಿವೃದ್ಧಿ ದಿಸೆಯಲ್ಲಿ...
- Advertisement -

More Articles Like This

- Advertisement -
close
error: Content is protected !!