ಮುನವಳ್ಳಿ: ” ಗೋವನ್ಮು ತಾಯಿಯ ಸ್ವರೂಪವೆಂದು ಮಾನ್ಯ ಮಾಡಲಾಗಿದೆ. ಈ ಪರಂಪರೆಯನ್ನು ವೇದ, ಶಾಸ್ತ್ರ, ಪುರಾಣ ಹಾಗೂ ಇತಿಹಾಸದುದ್ದಕ್ಕೂ ಕಾಣಬಹುದಾಗಿದೆ.
ಗೋವು, ಬ್ರಾಹ್ಮಣ, ವೇದ, ಪರಿವ್ರತ ಸತ್ಯವಾದಿ ಪುರುಷ , ದಾನಶೀಲ ಧನಿ ಈ ಏಳು ಅಂಶಗಳಲ್ಲಿ ಗೋವಿಗೆ ಪ್ರಥಮ ಸ್ಥಾನವನ್ನು ನೀಡಿರುವರು. ” ಎಂದು ಮುನವಳ್ಳಿ ಸೋಮಶೇಖರ ಮಠದ ಪರಮಪೂಜ್ಯ ಮುರುಘೇಂದ್ರ ಮಹಾಸ್ವಾಮಿಗಳವರು ಹೇಳಿದರು.
ಅವರು ಮುನವಳ್ಳಿ ಯ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬಲಿಪಾಡ್ಯಮಿ ನಿಮಿತ್ತ ಗೋಪೂಜೆ ನೆರವೇರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಚಂದ್ರಯ್ಯ ವಿರಕ್ತ ಮಠ, ವೀರಯ್ಯಶಾಸ್ತ್ರೀ ಹೊರಕೇರಿಮಠ,ಪಂಚಪ್ಪ ಗೋಪಶೆಟ್ಟಿ, ಅಶೋಕ ಗೋಮಾಡಿ,ಮಲ್ಲಿಕಾರ್ಜುನ ರಡ್ಡರಟ್ಟಿ, ವಿನಾಯಕ ಪತ್ತಾರ, ಅಜ್ಜಪ್ಪ ಬಾಳಿ,ಮಲ್ಲೇಶ್ವರ ಸೂಳೇಬಾವಿ, ಬಾಪು ಕದಂ,ವೀರಯ್ಯ ವಿರಕ್ತ ಮಠ,ದುಂಡಪ್ಪ ಬುರ್ಜಿ,ರವಿ ಮುತ್ತೂರ, ಕಿರಣ ಹೊನ್ನಳ್ಳಿ,ಶಿವು ಮಠ ಪತಿ,ಕುಮಾರ ಹಂಪಣ್ಣವರ,ರಾಜಪ್ಪ ಚಂದರಗಿ,ಮಹಾಂತಯ್ಯ ಶಾಸ್ತ್ರೀ ಸಂಬಾಳಮಠ ಮೊದಲಾದವರು ಉಪಸ್ಥಿತರಿದ್ದರು.