spot_img
spot_img

ರಂಗಭೂಮಿ ಕಲಾವಿದರ ಪರಿಸ್ಥಿತಿ ಕಳವಳಕಾರಿ – ಅಶೋಕ ಮನಗೂಳಿ

Must Read

- Advertisement -

ಸಿಂದಗಿ: ರಂಗಭೂಮಿಯನ್ನು ಉಳಿಸಿ ಬೆಳೆಸುತ್ತಿರುವ ಗ್ರಾಮೀಣ ಜನತೆಯ ಕಾರ್ಯ ಅಭಿನಂದಾರ್ಹ ಆದರೆ ಗ್ರಾಮೀಣ ಸೊಗಡು ಹಾಗೂ ಧರ್ಮ, ಸಂಸ್ಕೃತಿಯನ್ನು ಬೆಳೆಸುತ್ತಿರುವ ರಂಗಭೂಮಿ ನಾಟಕಗಳ ಕಲಾವಿದರು ಇಂದಿನ ದೃಶ್ಯ ಮಾದ್ಯಮಕ್ಕೆ ಸಿಲುಕಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದೊದಗಿದೆ ಎಂದು ಕಾಂಗ್ರೆಸ್ ಮುಖಂಡ ಅಶೋಕ ಮನಗೂಳಿ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಸುಕ್ಷೇತ್ರ ಹಿಕ್ಕನಗುತ್ತಿ ಗ್ರಾಮದ ಶ್ರೀ ಸದ್ಗುರು ಪುಂಡಲಿಂಗ ಮಹಾಶಿವಯೋಗಿಗಳ 115ನೇ ಜನನೋತ್ಸವದ ನಿಮಿತ್ತ ಶ್ರೀ ಪುಂಡಲಿಂಗೇಶ್ವರ ನವತರುಣ ನಾಟ್ಯ ಸಂಘ ಹಿಕ್ಕನಗುತ್ತಿ ಇವರು ಗೊಲ್ಲಾಳೇಶ್ವರ ನಾಟ್ಯ ವಸ್ತು ಭಂಡಾರ ಹಿಕ್ಕನಗುತ್ತಿ ಇವರ ಭವ್ಯ ರಂಗ ಸಜ್ಜಿಕೆಯಲ್ಲಿ ಶ್ರೀ ಪ್ರಭು ಡಾಕ್ಟರ ಬಿರಾದಾರ ನಿರ್ದೇಶನದಲ್ಲಿ ಡಿ.ಆರ್ ಪೂಜಾರಿ ವಿರಚಿತ ಸಿಡಿದೆದ್ದ ಶಿವಶಕ್ತಿ ಅರ್ಥಾತ್ ರೈತನ ಬಾಳು ಕಣ್ಣೀರಿನ ಗೋಳು ಎಂಬ ಕ್ರಾಂತಿಕಾರಿ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿ, ಗ್ರಾಮಿಣ ಭಾಗದಲ್ಲಿ ಜಾತ್ರೆಗಳಲ್ಲಿ ಪುರಾಣ-ಪ್ರವಚನಗಳ ಮೂಲಕ  ಶರಣರ ಸಾಧನೆಗಳನ್ನು ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯುತ್ತಿರುವ ಸಮಾಜದ ಎಡರು ತೊಡರುಗಳನ್ನು ತಿದ್ದಿಕೊಳ್ಳುವ ಹಾಗೂ ಜೀವನ ಶೈಲಿಯನ್ನು ಬದಲಿಸಿಕೊಳ್ಳುವ ಕಾರ್ಯ ಆಗಾಗ್ಗೆ ನಡೆಯುತ್ತಿರಬೇಕು. ಅಲ್ಲದೆ ಹಬ್ಬ ಹರಿದಿನ, ಜಾತ್ರೆಗಳಲ್ಲಿ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹಿಸುವ ಕಾರ್ಯಕ್ಕೆ ಸದಾ ಬೆನ್ನೆಲುಬಾಗಿ ನಿಲ್ಲುವೆ ಎಂದು ಅಭಿಮತ ವ್ಯಕ್ತಪಡಿಸಿದರು.

ಸದ್ಗುರು ಭಾವಚಿತ್ರ ಪೂಜೆಯನ್ನು ನೆರವೇರಿಸಿದ ಮಾಜಿ ತಾಪಂ ಸದಸ್ಯ ಸುರೇಶ ಪೂಜಾರಿ ಮಾತನಾಡಿ, ನಾಟಕದ ದೃಶ್ಯಾವಳಿಯಲ್ಲಿ ಕೆಟ್ಟದ್ದು, ಒಳ್ಳೆಯ ವಿಚಾರಗಳು ಬಿಂಬಿತವಾಗುತ್ತವೆ ಅವುಗಳಲ್ಲಿ ಕೆಟ್ಟದ್ದನ್ನು ತೆಗೆದುಹಾಕಿ ಒಳ್ಳೆಯ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶ್ರೀ ಪುಂಡಲಿಂಗೇಶ್ವರರ ಕೃಪಾಶಿರ್ವಾದಗಳಿಗೆ ಪಾತ್ರರಾಗಿ ಎಂದರು.

- Advertisement -

ರಂಗಭೂಮಿ ಪೂಜೆಯನ್ನು ನೆರವೇರಿಸಿದ ಜೆ.ಡಿ.ಎಸ್. ಮುಖಂಡ ಶಿವಾನಂದ ಪಾಟೀಲ ಸೋಮಜ್ಯಾಳ ಮಾತನಾಡಿ, ರಂಗಭೂಮಿ ಕಲಾವಿದರ ಜೀವನ ದುಸ್ಥಿತಿಯಲ್ಲಿದೆ ಅವರ ಬೆಳವಣಿಗೆ ಗ್ರಾಮೀಣ ಜನರ ಕೈಯಲ್ಲಿದೆ ಸರಕಾರ ಅವರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸಬೇಕು ಎಂದು ಆಗ್ರಹಿಸಿದರು.

ಪ್ರಥಮ ಪ್ರಯೋಗದ ಸಾನ್ನಿಧ್ಯವನ್ನು ವೇ. ಭೀಮಾಶಂಕರ ಈರಯ್ಯ ಹಿರೇಮಠ ವಹಿಸಿದ್ದರು. ತಾಲೂಕಾ ಪಂಚಮಸಾಲಿ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಎಂ. ಹಂಗರಗಿ ಅವರು ಜ್ಯೋತಿ ಬೆಳಗಿಸಿದರು.

ಹಿಕ್ಕನಗುತ್ತಿ ಪಿಕೆಪಿಎಸ್ ಅಧ್ಯಕ್ಷ ಶರಣಪ್ಪ ಗು. ಬಾದನ ಅಧ್ಯಕ್ಷತೆ ವಹಿಸಿದ್ದರು.

- Advertisement -

ಕಾಂಗ್ರೆಸ್ ಮುಖಂಡ ಕುಮಾರ ದೇಸಾಯಿ, ಬಳಗಾನೂರ ಗ್ರಾ.ಪಂ. ಅಧ್ಯಕ್ಷ ನಿಂಗಣ್ಣ ಜೇರಟಗಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಕಲಬುರಗಿಯ ಪ್ರ.ಧ.ಗುತ್ತಿಗೆದಾರ ಅಂಬರೀಶ ಮ. ಪಾಟೀಲ, ಪಿ.ಕೆ.ಪಿ.ಎಸ್ ಸಿಇಓ ವಿ.ಎ. ಪಾಟೀಲ  ಸಂಗನಗೌಡ ಬಿರಾದಾರ, ಮಲ್ಲನಗೌಡ ಪಾಟೀಲ ಗುಂದಗಿ, ಪರಮೇಶ್ವರ ದೇಸಾಯಿ (ಹಂಚಿನಾಳ), ಕುಮಾರ ವರ್ಕನಹಳ್ಳಿ, ನೂರಅಹ್ಮದ ಅತ್ತಾರ ಚಾಂದಕವಠೆ, ಸಿದು.ಶಿ. ಸಾತಲಗಾಂವ, ಶ್ರೀಶೈಲ ಪೂಜಾರಿ ನಾಗರಹಳ್ಳಿ, ಪತ್ರಕರ್ತರಾದ ಆನಂದ ಶಾಬಾದಿ, ಪಂಡಿತ ಯಂಪೂರೆ, ಗ್ರಾ.ಪಂ. ಸದಸ್ಯರಾದ ಶಿವಾನಂದ ಮರಬದ, ಕರೆಪ್ಪ ಮಾಕೊಂಡ, ಶ್ರೀಶೈಲ ರೋಡಗಿ, ಎಸ್. ಜಿ. ಬಿರಾದಾರ,  ಅರ್ಜುನ ದೊಡಮನಿ, ರಮೇಶ ತಳವಾರ, ಸಿದ್ದು ರಾಂಪೂರ, ಸಾಹೇಬಗೌಡ ಬ. ಪ್ಯಾರಸಾಬಾದಿ ಕಲಹಳ್ಳಿ ಸೇರಿದಂತೆ ಹಲವರು ವೇದಿಕೆ ಮೇಲಿದ್ದರು.

       ಡಾ. ಪ್ರಭು ಬಿರಾದಾರ ಸ್ವಾಗತಿಸಿದರು. ಗೋಶಯ್ಯ ಹಿರೇಮಠ ನಿರೂಪಿಸಿದರು. ದತ್ತು ಮರಬದ ವಂದಿಸಿದರು.

- Advertisement -
- Advertisement -

Latest News

ವಿದ್ಯಾರ್ಜನೆ ಯಾತಕ್ಕಾಗಿ?

ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ...ಈಗಿನ ದಿನಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group