spot_img
spot_img

ಪೂಜ್ಯ ಡಾ.ಪಂಡಿತ್ ಪುಟ್ಟರಾಜ ಗವಾಯಿಗಳ ಆತ್ಮ ಪರಮಾತ್ಮ ಸ್ವರೂಪದಲ್ಲಿದೆ. – ಕಾರಂಜಿಮಠದ ಶ್ರೀಗಳು

Must Read

ಬೆಳಗಾವಿ: ಬೆಳಗಾವಿಯಲ್ಲಿ ಸಂಗೀತಕ್ಕೆ ದೊಡ್ಡ ಪರಂಪರೆಯಿದೆ ಅಂತಹ ಪರಂಪರೆಯೊಂದನ್ನು ಇಲ್ಲಿ ಬೆಳೆಸುತ್ತಿರುವುದು ಸಂತೋಷದ ಸಂಗತಿ. ಭಾರತದಲ್ಲಿ ಅನುಭಾವಿಗಳು ಕಟ್ಟಿಕೊಟ್ಟ ದೈವಿಕ ಸಂಗೀತವು ಮಾನವನ ಅಂತರಂಗವನ್ನು ಬದಲಿಸುತ್ತದೆ. ಅವನನ್ನು ದೈವತ್ವಕ್ಕೇರಿಸುವ ಶಕ್ತಿ ಸಂಗೀತಕ್ಕೆ ಮಾತ್ರವಿದೆ ಎಂದು ಸಂಸದರಾದ ಮಂಗಳಾ ಅಂಗಡಿ ಅವರು ಡಾ. ಪಂ.ಪುಟ್ಟರಾಜ ಸೇವಾ ಸಮಿತಿ ಮಹಾನಗರ ಪಾಲಿಕೆ ಘಟಕ ಬೆಳಗಾವಿ ಇವರು ಸೋಮವಾರವಾರ ೧೩ರಂದು ಬೆಳಗಾವಿಯ ಶಿವಬಸವ ನಗರದ ಭಾರತೀಯ ಗಾಯನ ಸಮಾಜದ ಸಭಾ ಭವನದಲ್ಲಿ ಆಯೋಜಿಸಿದ್ದ ‘ಸಂಗೀತ ಶಿವಾನುಭವ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಪಂ. ಪುಟ್ಟರಾಜ ಗವಾಯಿಗಳವರ ಸ್ಮರಣೆಯೊಂದು ಸಂಗೀತಗಾರರಿಗೆ ದಿವ್ಯಮಂತ್ರ. ಸಂಗೀತವಿದ್ದಲ್ಲಿ ಪೂಜ್ಯ ಪುಟ್ಟರಾಜ ಗವಾಯಿಗಳ ಆತ್ಮ ಪರಮಾತ್ಮ ಸ್ವರೂಪದಲ್ಲಿರುತ್ತದೆ. ಪುಟ್ಟರಾಜ ಗವಾಯಿಗಳು ಹಾನಗಲ್ಲ ಕುಮಾರಸ್ವಾಮಿಗಳವರ ಮಾನಸ ಪುತ್ರರು. ಸಾವಿರಾರು ಸಂಗೀತಗಾರರನ್ನು ತಯಾರು ಮಾಡಿದ ಅವರು ಪರಂಪರೆ ನಾಡಿನಾದ್ಯಂತ ಬೆಳೆದು ನಿಂತಿದೆ. ಅವರ ವೀರೇಶ್ವರ ಪುಣ್ಯಾಶ್ರಮವು ಸಾವಿರಾರು ಅಂಧಕಲಾವಿದರಿಗೆ ಬದುಕುಕೊಟ್ಟ ನೆಲೆಯಾಗಿದೆ. ಅಂತಹ ಮಹಾತ್ಮರ ಸ್ಮರಣೆಯಿಂದ ಬೆಳಗಾವಿ ನಗರವು ಪಾವನವಾಗಿದೆ ಎಂದು ಪರಮ ಪೂಜ್ಯ ಕಾರಂಜಿಮಠದ ಗುರುಸಿದ್ಧ ಸ್ವಾಮಿಜಿಗಳು ದಿವ್ಯ ಸಾನ್ನಿಧ್ಯವನ್ನು ವಹಿಸಿ ಆರ್ಶೀವಚನ ನೀಡಿದರು.

ಸಂಗೀತ ಎನ್ನುವುದು ನಿಸರ್ಗದ ಭಾಷೆಯಾಗಿದೆ. ಜಗದ ಸಕಲ ಜೀವಿಗಳಿಗೆ ಸಂಗೀತದೊಂದಿಗೆ ಒಂದಿಲ್ಲೊಂದು ರೀತಿಯಲ್ಲಿ ನಂಟಿದೆ. ಸಂಗೀತ ಮತ್ತು ಅನುಭಾವ ಈ ಎರಡು ಸಂಗತಿಗಳು ಆಧ್ಯಾತ್ಮವನ್ನು ಎತ್ತರಕ್ಕೊಯ್ಯುತ್ತವೆ ಎಂದು ಗಂದಿಗವಾಡದ ಮೃತ್ಯುಂಜಯ ಸ್ವಾಮಿಗಳು ಹಿರೇಮಠ ಅವರು ತಮ್ಮ ಉಪನ್ಯಾಸದಲ್ಲಿ ಅಭಿಪ್ರಾಯಪಟ್ಟರು.

ಸಂಗೀತ ಶಿವಾನುಭವದಲ್ಲಿ ಡಾ. ರೋಹಿಣಿ ಗಂಗಾಧರ ಹಾಗೂ ಭಾರತೀಯ ಗಾಯನ ಸಮಾಜದ ಮಕ್ಕಳು ವಚನ ಗಾಯನವನ್ನು ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಬೆಳಗಾವಿ ನಗರದ ಸಂಚಾಲಕರಾದ ಗಿರಿಜಾ ವಿ. ಮುಳಗುಂದ ಅವರು ವಹಿಸಿದ್ದರು.

ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ರಾಜ್ಯಕಾರ್ಯದರ್ಶಿಗಳಾದ ಪ್ರೊ. ಮಂಜುಶ್ರೀ ಬ ಹಾವಣ್ಣನವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಆಶಾ ಯಮಕನಮರಡಿ ನಿರೂಪಿಸಿದರು, ಡಾ. ಹೇಮಾವತಿ ಸೋನಳ್ಳಿ ವಂದಿಸಿದರು. ಇದೇ ಸಂದರ್ಭದಲ್ಲಿ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.

ಉಪಸ್ಥಿತರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಮೌಲ್ಯಮಾಪನ ಕುಲಸಚಿವರಾದ ಪ್ರೊ. ಶಿವಾನಂದ ಗೊರನಾಳೆ, ಪ್ರೊ. ಎಸ್. ಎಂ. ಗಂಗಾಧರಯ್ಯ, ಎಂ. ವೈ. ಮೆಣಸಿನಕಾಯಿ, ಕ.ಸಾ.ಪ, ತಾಲೂಕಾ ಅಧ್ಯಕ್ಷರು, ಸುರೇಶ ಹಂಜಿ, ಮಹಾನಗರ ಪಾಲಿಕೆಯ ಸದಸ್ಯರಾದ ರೇಖಾ ಹೂಗಾರ, ಅಖಿಲ ಭಾರತ ವೀರಶೈವ ಮಹಾಸಭಾದ ಬೆಳಗಾವಿಯ ಅಧ್ಯಕ್ಷರಾದ ರತ್ನಪ್ರಭಾ ಬೆಲ್ಲದ, ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕರಾದ ಶೈಲಜಾ ಭಿಂಗೆ ಅವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!