spot_img
spot_img

ವಿದ್ಯಾರ್ಥಿ ಜೀವನದಲ್ಲಿ ಮೌಲ್ಯಾಧಾರಿತ ಕೃತಿಗಳ ಅಧ್ಯಯನ ಅಗತ್ಯ – ಡಾ.ಶಾಂತವೀರ

Must Read

- Advertisement -

ಸಿಂದಗಿ: ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುವಲ್ಲಿ ಮಕ್ಕಳ ಸಾಹಿತ್ಯ ಪೂರಕವಾಗಿದೆ. ಆದ್ದರಿಂದ ವಿದ್ಯಾರ್ಥಿಜೀವನದಲ್ಲಿ ಮೌಲ್ಯಾಧಾರಿತ ಕೃತಿಗಳ ಅಧ್ಯಯನ ಅಗತ್ಯ ಎಂದು ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಹೇಳಿದರು.

ಸೋಮವಾರ ಸ್ಥಳೀಯ ವಿದ್ಯಾಚೇತನ ಪ್ರಕಾಶನದ ರಜತ ವರ್ಷ 2021-22ರ ನಿಮಿತ್ತ ಪಟ್ಟಣದ ಎಚ್.ಜಿ. ಪದವಿ ಪೂರ್ವ ಮಹಾವಿದ್ಯಾಲಯದ ಸಹಯೋಗದೊಂದಿಗೆ ಮಹಾವಿದ್ಯಾಲಯದ ಸಭಾಭವನದಲ್ಲಿ ಹಮ್ಮಿಕೊಂಡ ಪುಸ್ತಕ ಸಂಸ್ಕೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾಗುರುಗಳಾದ ಹ.ಮ. ಪೂಜಾರ ಅವರು ಶಿಕ್ಷಕ ವೃತ್ತಿ ಸೇರಿದಂತೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಸಾಹಿತ್ಯ ರಚಿಸುವ ಮೂಲಕ ಮಕ್ಕಳ ಸಾಹಿತ್ಯ ಲೋಕಕ್ಕೆ ತಮ್ಮದೆಯಾದೆ ಕೊಡುಗೆ ನೀಡಿದ್ದಾರೆ. ಅವರ ಆಶೆಯಂತೆ ಪಟ್ಟಣದಲ್ಲಿ ಮಕ್ಕಳ ವಾಚನಾಲಯ ಸ್ಥಾಪಿಸಲಾಗುವುದು ಎಂದು ಹೇಳಿದರು.

- Advertisement -

ಮಕ್ಕಳ ಸಾಹಿತಿ ಹ.ಮ. ಪೂಜಾರ ವಿರಚಿತ ಯಾರು ಜಾಣರು ಮಕ್ಕಳ ಕಥಾ ಸಂಕಲನ ಪುಸ್ತಕವನ್ನು ಹಿರಿಯ ಜಾನಪದ ಸಾಹಿತಿ ಡಾ.ಎಂ.ಎಂ. ಪಡಶೆಟ್ಟಿ ಅವರು ಬಿಡುಗಡೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು. ನಂತರ ಅವರು ಮಾತನಾಡಿ, ಮಕ್ಕಳ ಸಾಹಿತಿ ಹ.ಮ. ಪೂಜಾರ ಅವರು ತಮ್ಮ 80 ಇಳಿ ವಯಸ್ಸಿನಲ್ಲಿಯೂ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕ ಚಟುವಟಿಕೆಗಳನ್ನು ಹಾಗೂ ಸಾಹಿತ್ಯ ರಚಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ಹೇಳಿದರು.

ಕೃತಿ ಪರಿಚಯಿಸಿದ ತಿಳಗೂಳದ ಕೆಬಿಎಸ್ ಮುಖ್ಯಗುರು ಎಸ್.ಎಸ್. ಸಾತಿಹಾಳ ಮಾತನಾಡಿ, ಹ.ಮ. ಪೂಜಾರ ಅವರು ಮಕ್ಕಳಿಗಾಗಿ ಬರೆದ ಯಾರು ಜಾಣರು ಕಥಾ ಸಂಕಲನ ಮೌಲ್ಯಯುತ ಕೃತಿಯಾಗಿದೆ. ಈ ಕಥಾ ಸಂಕಲನದಲ್ಲಿ ಒಟ್ಟು ಹನ್ನೊಂದು ಮೌಲ್ಯಯುತ ಕಥೆಗಳಿವೆ. ಈ ಎಲ್ಲ ಕಥೆಗಳು ಒಂದೊಂದು ಮೌಲ್ಯಗಳನ್ನು ಮಕ್ಕಳಿಗೆ ತಿಳಿಸುತ್ತದೆ ಮತ್ತು ಮಾರ್ಗದರ್ಶನ ಮಾಡುತ್ತದೆ. ಮಾನವೀಯ ಮೌಲ್ಯಗಳು, ದೇಶ ಪ್ರೇಮ, ಸಹಕಾರ, ಪರೋಪಕಾರ, ಜಾತ್ಯತೀತತೆ ಮುಂತಾದ ಅಂಶಗಳನ್ನು ಒಳಗೊಂಡ ಕೃತಿಯಾಗಿದೆ. ಮಕ್ಕಳು ಈ ಕೃತಿಯನ್ನು ಓದುವ ಮೂಲಕ ಜೀವನದ ಮೌಲ್ಯಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಹೇಳಿದರು.

- Advertisement -

ಅಧ್ಯಕ್ಷತೆ ವಹಿಸಿದ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಆರ್. ಹೆಗ್ಗಣದೊಡ್ಡಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಪುಸ್ತಕ ಸಂಸ್ಕೃತಿ ಮರೆಯಾಗುತ್ತಿದೆ. ಇದು ಬೆಳವಣಿಗೆಯಲ್ಲ. ವಿದ್ಯಾರ್ಥಿಗಳು ಓದುವ ಹವ್ಯಾಸ ಬೆಳೆಸಿಕೊಳ್ಳ ಬೇಕು. ಓದಿನಿಂದ ಏನೆಲ್ಲ ಸಾಧನೆ, ಸಂಶೋಧನೆ ಮಾಡಲು ಸಾಧ್ಯ. ವಿಜಯಪುರ ಜಿಲ್ಲೆ ಮಕ್ಕಳ ಸಾಹಿತ್ಯ ತವರೂರಾಗಿದೆ. ನಮ್ಮ ವಿದ್ಯಾಗುರುಗಳಾದ ಹ.ಮ. ಪೂಜಾರ ಅವರು ಮಕ್ಕಳಿಗಾಗಿ ಕಥೆ, ಕವನ, ಕಾದಂಬರಿ ಬರೆಯುವ ಮೂಲಕ ಮಕ್ಕಳ ಸಾಹಿತ್ಯ ಲೋಕಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ. ಅವರು ಬರೆ ಯಾರು ಜಾಣರು ಕಥಾ ಸಂಕಲನ ಮಕ್ಕಳಿಗೆ ಒಳ್ಳೆ ಮಾರ್ಗದರ್ಶನ ನೀಡುವ ಕೃತಿಯಾಗಿದೆ ಎಂದು ಹೇಳಿದರು.

ಮಕ್ಕಳ ಸಾಹಿತಿ, ಪ್ರಕಾಶಕ ಹ.ಮ. ಪೂಜಾರ ಮಾತನಾಡಿ, ಶಿಕ್ಷಕನಾದ ನನಗೆ ಮಕ್ಕಳ ಒಡನಾಟ ಹೆಚ್ಚು. ಹೀಗಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಕಥೆ, ಕವನ, ಕಾದಂಬರೆ ಬರೆದು ಮಕ್ಕಳಿಗೆ ಕೈಗೆ ನೀಡಿದ ತೃಪ್ತಿ ನನಗಿದೆ. ಮಕ್ಕಳ ಬಳಗ ಕಟ್ಟುವ ಮೂಲಕ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗುವ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬರಲಾಗಿದೆ. ವಿದ್ಯಾಚೇತನ ಪ್ರಕಾಶನ ಪ್ರಾರಂಭಿಸುವ ಮೂಲಕ ಮಕ್ಕಳ ಸಾಹಿತ್ಯ ಪ್ರಕಟಣೆ, ಶೈಕ್ಷಣಿಕ ಕಾರ್ಯಕ್ರಮ, ಚಿಂತನ ಗೋಷ್ಠಿ, ವಿಚಾರಗೋಷ್ಠಿಗಳನನ್ನು ಹಮ್ಮಿಕೊಳ್ಳುತ್ತ ಬರಲಾಗಿದೆ ಎಂದು ಹೇಳಿದರು.

ಪಿಯುಸಿ ವಿದ್ಯಾರ್ಥಿಗಳಾದ ರವಿ ರೆಬಿನಾಳ, ಶಿವಲೀಲಾ ಬಿರಾದಾರ ಅವರು ಕಥಾಸಂಕಲನದಲ್ಲಿನ ಕಥೆಗಳ ಕುರಿತು ಮಾತನಾಡಿದರು.

ಹಿರಿಯ ಸಾಹಿತಿ ಡಾ.ಚನ್ನಪ್ಪ ಕಟ್ಟಿ, ಶಿವಕುಮಾರ ಶಿವಸಿಂಪಿಗೇರ, ಶರಣ ಸಾಹಿತ್ಯ ಪರಿಷತ್ ತಾಲೂಕಾ ಅಧ್ಯಕ್ಷ ಚನ್ನಪ್ಪ ಕತ್ತಿ, ಎಂ.ಎಸ್. ಧರೆಣ್ಣವರ, ಉಪನ್ಯಾಸಕಾರದ ಎಸ್.ಎ. ಪಾಟೀಲ, ಬಿ.ಎಸ್. ಬಿರಾದಾರ, ಆರ್.ಬಿ. ಹೊಸಮನಿ, ಆರ್.ಸಿ. ಕಕ್ಕಳಮೇಲಿ, ಎಂ.ಎನ್. ಅಜ್ಜಪ್ಪ, ಎಸ್.ಪಿ. ಬಿರಾದಾರ, ಎಫ್.ಎ. ಹಾಲಪ್ಪನವರ, ಎಸ್.ಎ. ಬಸರಕೋಡ, ಎ.ಬಿ. ಪಾಟೀಲ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪೂಜಾ ಗಾಯಕವಾಡ ಪ್ರಾರ್ಥನೆ ಹಾಡಿದರು. ಆರ್.ವಾಯ್. ಪರೀಟ್ ಸ್ವಾಗತಿಸಿದರು. ಮುಕ್ತಾಯಕ್ಕ ಕಟ್ಟಿ ನಿರೂಪಿಸಿದರು. ಡಾ.ಶಾಂತುಲಾಲ ಚವ್ಹಾಣ ವಂದಿಸಿದರು.

- Advertisement -
- Advertisement -

Latest News

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

  ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮ ಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವ ತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು...
- Advertisement -

More Articles Like This

- Advertisement -
close
error: Content is protected !!
Join WhatsApp Group