spot_img
spot_img

ಅಲೌಕಿಕ ಛಾಯಾಗ್ರಾಹಕ ಕೆ ಜಿ ಸೋಮಶೇಖರ ; ಒಂದು ನೆನಪು

Must Read

ಕನ್ನಡ ಸಾಹಿತ್ಯ ಲೋಕದಲ್ಲಿ ಮೇರು ಪವ೯ತವೆನಿಸಿದ ಕುವೆಂಪುರವರ ಲೌಕಿಕ ಬದುಕಿನ ಸೂಕ್ಷ್ಮತೆ ಕುರಿತು ಕಂಡವರಿಂದ ಕೇಳಿ ತಿಳಿದು ಬರೆದ ಕಿರು ಟಿಪ್ಪಣಿ:

5-6ವಷ೯ದ ಹಿಂದಿನಮಾತು. ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ನಿತ್ಯ ಯಾವುದಾದರೂ ಒಂದು ಗ್ಯಾಲರಿಯಲ್ಲಿ ಕಲಾ ಪ್ರದರ್ಶನ ಇದ್ದೆಇರುತಿತ್ತು, ಹಾಗೇ ಸುಮ್ಮನೆ ಎಂದಿನಂತೆ ಪರಿಷತ್ತಿನ ಆವರಣಕ್ಕೆ ಕಾಲಿರಿಸಿದೆ.

ಪ್ರಜಾವಾಣಿ ಬಳಗದಲ್ಲಿ Photo journalist ಆಗಿದ್ದ ಹಿರಿಯ ಛಾಯಾಗ್ರಾಹಕ ಕೆ.ಜಿ. ಸೋಮಶೇಖರವರ ಛಾಯಾಚಿತ್ರ ಪ್ರದಶ೯ನವಿತ್ತು. ಇವರು ಮೂಲತಃ ಹುಬ್ಬಳಿ ಸೀಮೆಯವರು. 60 70 ರದಶಕದಲ್ಲಿ ಕನ್ನಡನಾಡಿನ ಖ್ಯಾತನಾಮರಾದ ಸಂಗೀತ ಕಲಾವಿದರ, ಕ್ರೀಡಾಪಟುಗಳ, ಸಾಹಿತಿಗಳ ಆಕಷ೯ಕ ಕಪ್ಪು ಬಿಳುಪಿನ ಭಾವಚಿತ್ರಗಳನ್ನು ತಮ್ಮಕ್ಯಾಮೆರಾ ಕಣ್ಣಿನಿಂದ ಹಾಗೂ ನೈಪುಣ್ಯತೆಯಿಂದ ತೆಗೆಯುತ್ತಿದ್ದರು.

ಅವುಗಳನ್ನು ಪ್ರಜಾವಾಣಿ /ಸುಧಾ ವಾರಪತ್ರಿಕೆಯಲ್ಲಿ ವಾರವಾರವೂ ನೋಡುತ್ತಿದ್ದೆನು. ಬಹಳ ದಿನಗಳ ನಂತರ ಮತ್ತೆ ಅವರೇ ಏಕವ್ಯಕ್ತಿ ಪ್ರದರ್ಶನ ಏಪ೯ಡಿಸಿದ್ದರಿಂದ ಮತ್ತೊಮ್ಮೆ ಕುವೆಂಪು, ಬೇಂದ್ರೆ, ಕಾರಂತ, ಬಾಲಮುರಳಿಕೃಷ್ಣ, ಗಂಗೂಬಾಯಿ, ಭೀಮಸೇನ ಜೋಷಿ,ಇತ್ಯಾದಿ ಪ್ರಖ್ಯಾತರ ಛಾಯಾಚಿತ್ರಗಳನ್ನು ನೋಡಿ ಕಣ್ಣು ತುಂಬಿಕೊಂಡೆನು. ಇವತ್ತು ಕನ್ನಡ ಸಾಂಸ್ಕೃತಿಕ ಲೋಕವು ಬಳಸಲಾಗುತ್ತಿರುವ ಕುವೆಂಪುರವರ ಆಕರ್ಷಣೀಯ ವಿವಿದ ಮುಖ ಭಾವಗಳ ಚಿತ್ರಗಳು ಇವರ ಕಲೆಗಾರಿಕೆಯ ಕೊಡುಗೆ ಎಂದು ಹೇಳಲು ಹೆಮ್ಮೆಯಾಗುವುದು.

ಅಂದಿನ ದಿನಗಳಲ್ಲಿ ಕುವೆಂಪುರವರು ಯಾರ ಕೈಅಳತೆಗೂ ಸುಲಭವಾಗಿ ಸಿಗುವರಲ್ಲ ಎಂಬುದು ಆಗಿನ ಪ್ರತೀತಿ. ಇದನ್ನು ಕೇಳಿ ತಿಳಿದುಕೊಳ್ಳಲು ಆಸಕ್ತನಾಗಿ ಕೇಳಿಯೆಬಿಟ್ಟೆನು. ಅವರೆಂದರು ಹೌದು, ಫೋಟೋ ಸೆಷನ್ ಗೆ ಅವರನ್ನು ಒಪ್ಪಿಸಲು ಶ್ರಮವಾದರೂ ಕೊನೆಗೂ ಒಪ್ಪಿಸಿದೆ. ಅವರು ಸಹ ನಾನಾ ಭಂಗಿಯಲ್ಲಿ ಭಾವಚಿತ್ರಗಳನ್ನು ತೆಗೆಯಲು ಸಹಕರಿಸಿದರು.

ಫೋಟೋ ಸೆಷನ್ ಮುಗಿದ ಮೇಲೆ ವಿನೀತ ಭಾವದಿಂದ ತೆಗೆಯಲಾದ ಚಿತ್ರಗಳ ಒಂದು ಸೆಟ್ ಫನ್ನುತಂದು ತೋರಿಸಿ ಎಂದು ತಿಳಿಸಿದಂತೆ, ಬೆಂಗಳೂರಿಗೆ ಹಿಂತಿರುಗಿದೆ.15 ದಿನಗಳ ಮತ್ತೆ ಕುವೆಂಪುರವರು ನೆಲೆಯಾಗಿದ್ದ ‘ಉದಯರವಿ’ಮನೆಗೆ ಹೋಗಿ ತೆಗೆಯಲಾದ ಚಿತ್ರಗಳ ಒಂದೊಂದು ಪ್ರತಿಯನ್ನು ಅವರಿಗೆ ಕೊಡಲಾಯಿತು. ಕುವೆಂಪುರವರೇ
“ಪೋಟೋಗಳನ್ನು ‌ಚೆನ್ನಾಗಿ ತೆಗೆದಿರುವೆ,ಆಯಿತಪ್ಪ ಇವುಗಳಿಗೆ ತಗುಲಿದ ಒಟ್ಟು ವೆಚ್ಚ ಎಷ್ಟು”ಎಂದು ಕೇಳಿದರು. ನಾನು ಸಂಕೋಚಕ್ಕೆ ಒಳಗಾಗಿ
“ಇಲ್ಲ ಸಾರ್ ಅವು ತಮಗೆ ನೀಡಲು ತಂದಿರುವ ಗೌರವದ ಪ್ರತಿಗಳು “ಎಂದು ಹೇಳಿದರೂ ಕೇಳದೆ, “ಹಾಗಾದರೇ ನೀನೇ ಇಟ್ಟುಕೋಪ್ಪಾ” ಎಂದರು.

ನಾನು ವಿಧಿಯಿಲ್ಲದೆ 60 ರೂಪಾಯಿ ವೆಚ್ಚ ತಗಲುವುದು ಎಂದು ಹೇಳಿದ ಕ್ಷಣವೇ ಅವರೇ ಅಷ್ಟು ಹಣವನ್ನು ತಂದು ಕೊಟ್ಟರು ಎಂದು ಕೆ.ಜಿ.ಸೋಮಶೇಖರವರೇ ನನಗೆ ಖುದ್ದಾಗಿ ಹೇಳಿದರು. ಇದು ಕುವೆಂಪುರವರ ವ್ಯವಹಾರ ಚತುರತೆಯನ್ನು ಬಿಂಬಿಸುವುದು.ಅಂದರೆ ಯಾರಿಗೂ ಯಾರು ಹೊರೆಯಾಗಬಾರದೆಂಬದನ್ನು ಸಂದೇಶ ರೂಪದಲ್ಲಿ ಸಂಕೇತಿಸುತ್ತದೆ.

ಕೆ. ಜಿ ಸೋಮಶೇಖರವರು ತಮ್ಮ ಜೀವಿತದ ಕೊನೆಯವರೆಗೂ ಮೈಸೂರಿನಲ್ಲಿ ಕಳೆದು ಸ್ವಲ್ಪ ವಷ೯ಗಳ ಹಿಂದೆ ಮೃತರಾದರೆಂಬ ಸುದ್ದಿತಿಳಿದು ಬಂತು. ಇವರ ಹೆಸರಿನಲ್ಲಿ ಪತ್ರಿಕಾ ಆಕಾಡೆಮಿ ಉತ್ತಮ ಯುವ ಫೋಟೋ ಜನ೯ಲಿಸ್ಟ್ ರೊಬ್ಬರಿಗೆ ಪ್ರಶಸ್ತಿ ನೀಡಲೆಂದು ಒತ್ತಾಯಿಸೋಣ.

ಕೆ.ಎನ್.ಶಿವಶಂಕರ್.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!