spot_img
spot_img

“ಜನಪದ ಕಲೆಯ ಉಳಿವು ಇಂದಿನ ಯುವ ಪೀಳಿಗೆಯ ಕೈಯಲ್ಲಿದೆ”- ಶಬ್ಬೀರ ಡಾಂಗೆ

Must Read

- Advertisement -

“ಜನವಾಣಿ ಬೇರು ಕವಿವಾಣಿ ಹೂವು ಎನ್ನುವಂತೆ ನಮ್ಮ ಶಿಷ್ಠ ಸಾಹಿತ್ಯಕ್ಕೆ ಜಾನಪದ ಸಾಹಿತ್ಯವೇ ಮೂಲವಾಗಿದ್ದು ಕನ್ನಡ ಜನಪದ ಸಾಹಿತ್ಯ ಸಂಸ್ಕೃತಿಯು ಹಳ್ಳಿಗರ ಮನೆ ಮನಗಳಿಂದ ತಲೆಯೆತ್ತಿ ತಲ-ತಲಾಂತರಗಳಿಂದ ಜನಸಮುದಾಯದಲ್ಲಿ ಆಸಕ್ತಿ ಮತ್ತು ಆಶೋತ್ತರಗಳಲ್ಲಿ ಭಾಗಿಯಾಗಿ ಇವತ್ತಿನ ದಿನಗಳಲ್ಲಿಯೂ ತನ್ನದೇ ಆದ ಛಾಪು ಮೂಡಿಸುತ್ತಿದ್ದು ಜನರು ಮೆಚ್ಚುವ ಹಾಡುಗಳ ಸಾಹಿತ್ಯ ರಚಿಸಿ ಹಾಡಿದಾಗ ಖಂಡಿತಾ ಆತ್ಮಸಾಕ್ಷಿ ಒಪ್ಪುತ್ತದೆ. ಈ ಜನಪದ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆ ನಿಮ್ಮಂತಹ ಜಾನಪದ ಆಸಕ್ತಿಯುಳ್ಳ ವಿದ್ಯಾರ್ಥಿಗಳ ಮೇಲಿದೆ ಅದನ್ನು ಸ್ವತಃ ವಿದ್ಯಾರ್ಥಿಗಳೇ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಜಾನಪದವನ್ನು ಉಳಿಸಿ-ಬೆಳಸಿ” ಎಂದು ಸ್ಥಳೀಯ ಜಾನಪದ ಕಲಾವಿದರಾದ ಶಬ್ಬೀರ ಡಾಂಗೆ ತಿಳಿಸಿದರು.

ಅವರು ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪದವಿ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಹಮ್ಮಿಕೊಂಡ ‘ಸ್ಥಳೀಯ ಜಾನಪದ ಕಲಾವಿದರ ಸಂದರ್ಶನ ಮಾಲಿಕೆ’ ಅಡಿಯಲ್ಲಿ ಬಿ.ಎ.ತೃತೀಯ ವರ್ಷದ ಐಚ್ಛಿಕ ಕನ್ನಡ ವಿದ್ಯಾರ್ಥಿಗಳಿಗೆ ಕನ್ನಡ ಜಾನಪದ ಸಾಹಿತ್ಯ ಎಂಬ ಪಠ್ಯಕ್ಕೆ ಪೂರಕವಾಗಿ ಎಲ್ಲಾ ಕನ್ನಡ ಪ್ರಾಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ತಮ್ಮ ಜೀವನ ಹಾಗೂ ಜನಪದ ಸಾಹಿತ್ಯದ ಬಗ್ಗೆ ಮಾತನಾಡುತ್ತಾ, ಉರ್ದು ಭಾಷೆಯಲ್ಲಿ ಶಿಕ್ಷಣ ಪಡೆದರೂ ಕನ್ನಡ ಕೈ ಹಿಡಿದು ನಡೆಸಿದ ಭಾಷೆಯಾಗಿದೆ. ರಂಗಭೂಮಿಗೆ ಆಕಸ್ಮಿಕವಾಗಿ ಪ್ರವೇಶ ಪಡೆದ ಅವರು ಮೊದಮೊದಲು ತಮ್ಮಷ್ಟಕ್ಕೆ ತಾವೇ ಸಾಹಿತ್ಯ ಬರೆದು ಗೆಳೆಯರ ಪ್ರೋತ್ಸಾಹದಿಂದ ಹಾಡುಗಾರರಾದ ವಿಷಯವನ್ನು ತಿಳಿಸಿದರು.

ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಆಧುನಿಕ ಕಾಲದಲ್ಲಿ ಜಾನಪದ ಸಾಹಿತ್ಯವನ್ನು ಕೊಲ್ಲುತ್ತಿರುವ ಇತ್ತೀಚಿನ ಜಾನಪದದ ಹೆಸರಿನಲ್ಲಿ ಅಶ್ಲೀಲ ಸಾಹಿತ್ಯ ಬರೆಯುತ್ತಿರವವರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ತಾವು ಬರೆದ ಹಾಡುಗಳಿಗೆ ಎಷ್ಟೋ ಸಲ ವಾಗ್ವಾದಗಳು ಕೂಡಾ ನಡೆದಿದ್ದು ಅವುಗಳನ್ನು ಸಮರ್ಥವಾಗಿ ಎದುರಿಸಿದ ಕ್ಷಣಗಳನ್ನು ಹಂಚಿಕೊಂಡರು. ಗುರುರಾಜ ಹೊಸಕೋಟಿ, ಬಸವರಾಜ ಕೆಂಧೂಳಿ ಹಾಗೂ ನಿಜಾಂ ಅಲ್ಲಾಖಾನ್ ರವರನ್ನು ಮಾನಸ ಗುರುಗಳಾಗಿ ಸ್ವೀಕರಿಸಿ ಇಷ್ಟೊಂದು ಸಾಧನೆ ಮಾಡಲು ಅವರ ಸ್ಪೂರ್ತಿಯೇ ಕಾರಣವೆಂದರು.

- Advertisement -

ಸಿನಿಮಾ ಹಾಡುಗಳ ಅವಕಾಶದ ಬಗ್ಗೆ ಕೇಳಿದಾಗ ಅವಕಾಶಗಳು ನಮ್ಮನ್ನು ಹುಡುಕಿ ಬಂದಿವೆಯೇ ಹೊರತು ನಾನೇ ಸಿನಿಮಾ ಹಾಡುಗಳ ಕಡೆ ಒಲವು ತೋರಿಸಿಲ್ಲ ಎಂದರು. ಎಸ್.ಪಿ.ಬಾಲಸುಬ್ರಮಣ್ಯಂ ರಂತಹ ಶ್ರೇಷ್ಠಗಾಯಕರ ಜೊತೆ ಎದೆ ತುಂಬಿ ಹಾಡಿದೆನು ಕಾರ್ಯಕ್ರಮಕ್ಕೆ ಅತಿಥಿಗಳಾದ ಸಂತಸವನ್ನು ಹಂಚಿಕೊಂಡರು. ಸುಮಾರು 8000 ಕ್ಕೂ ಹೆಚ್ಚು ಜಾನಪದ ಶೈಲಿಯ ಹಾಡುಗಳನ್ನು ನೀಡಿದ ಅವರು ಜಾನಪದ ಜಾಣ ಎಂದು ಪ್ರಖ್ಯಾತಿಗೊಂಡಿದ್ದಾರೆ.

ಜನಪದ ಎಂಬುದು ಸಂಪ್ರದಾಯಬದ್ಧವಾಗಿದ್ದು ಸುಗ್ಗಿ ಹಾಡು, ಸೋಬಾನೆ ಹಾಡು, ಲಾವಣಿ ಹಾಡು, ಹರದೇಶಿ-ನಾಗೇಶಿಗಳಂತಹ ಅನೇಕ ಪ್ರಕಾರದ ಹಾಡುಗಳಿವೆ ನಾವು ಹಾಡುವ ಹಾಡುಗಳು ಜನಪದ ಶೈಲಿಯ ಹಾಡುಗಳೇ ಹೊರತು ನಿಜವಾದ ಜಾನಪದ ಹಳ್ಳಿಯಲ್ಲಿವೆ ಅವುಗಳನ್ನು ಬಳಸಿಕೊಳ್ಳಿ ಎಂದರು. ಜಾನಪದ ಕಲೆಯ ಉಳಿವಿಗೆ ಆಸಕ್ತಿಯನ್ನು ವ್ಯಕ್ತಪಡಿಸಿದ ಅವರು ತಮ್ಮ ಸ್ಟುಡಿಯೋವನ್ನು ಪರಿಚಯಿಸಿ ರಿಕಾರ್ಡಿಂಗ್ ವಿಭಾಗವನ್ನು ತೋರಿಸಿ ತಾವು ಬರೆದು ಜನಪ್ರಿಯವಾದ ಬಿಟ್ಟು ಹೊಂಟೆಲ್ಲಾ ನನ್ನ ಹಳ್ಳಿ, ಹಾಗೂ ಆ ಕಲ್ಲ ಈ ಕಲ್ಲ ಸೊಗಸಾದ ಕಲ್ಲ ಇಲಕಲ್ಲ ಮುಂತಾದ ಹಾಡುಗಳನ್ನು ಹಾಡಿ ರಂಜಿಸಿದರು.

ವಿದ್ಯಾರ್ಥಿಗಳಿಂದ ಉಪನ್ಯಾಸಕರಿಂದ ಒಂದೊಂದು ಹಾಡು ಹಾಡಿಸಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಅವಕಾಶ ನೀಡುವ ಬಗ್ಗೆ ತಿಳಿಸಿದರು. ಬದುಕಿನಲ್ಲಿ ನೂರಾರು ಸಮಸ್ಯೆ ಸವಾಲುಗಳಿಗೆ ದಿಟ್ಟವಾಗಿ ಉತ್ತರಿಸಬೇಕು ಕೈ ಕಾಲುಗಳಿಲ್ಲದವರು ಗಿನ್ನೆಸ್ ದಾಖಲೆ ಮಾಡಿದ್ದು ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಸಮಸ್ಯೆಗಳಿಗೆ ಎದೆಗುಂದದೇ ಧೈರ್ಯವಾಗಿ ಜೀವನ ಎದುರಿಸಿ ಎಂದು ಸಲಹೆ ನೀಡಿದರು.

- Advertisement -

ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದ ಬಿ.ಸಿ. ಹೆಬ್ಬಾಳರವರು ಮಾತನಾಡಿ ಕನ್ನಡ ಜನಪದ ಸಂಸ್ಕೃತಿಯ ಹರಿಕಾರರಲ್ಲಿ ಒಬ್ಬರಾದ ನಮ್ಮ ಮೂಡಲಗಿಯ ಜಾನಪದ ಜಾಣರಾದ ಶಬ್ಬೀರ ಡಾಂಗೆಯವರ ಜೊತೆ ನಾವೆಲ್ಲಾ ಸೇರಿ ಇವತ್ತು ಸಂದರ್ಶನ ನಡೆಸಿರುವದು ನಮ್ಮ ಸೌಭಾಗ್ಯ. ಜನಪದ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅವರು ನೀಡಿದ ಸಲಹೆಗಳು ನಮ್ಮ ವಿದ್ಯಾರ್ಥಿಗಳಿಗೆ ಮತ್ತು ನಮಗೆ ತುಂಬಾ ಉಪಯುಕ್ತವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಪ್ರಾಧ್ಯಾಪಕರುಗಳಾದ ಶಿವಕುಮಾರ, ಶಿವಾನಂದ ಚಂಡಕೆ, ಮಹಾದೇವ ಪೋತರಾಜ ಹಾಗೂ ಬಿ.ಎ.ಅಂತಿಮ ವರ್ಷದ ಐಚ್ಛಿಕ ಕನ್ನಡ ವಿದ್ಯಾರ್ಥಿ/ನಿಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಮಂಜುಳಾ ನಿಂಗನೂರ ನಡೆಸಿಕೊಟ್ಟರು. ಶ್ರೀದೇವಿ ತುಕ್ಕನ್ನವರ ವಂದಿಸಿದರು.

ಪೋಟೋ:- ಜಾನಪದ ಜಾಣ ಶ್ರೀ ಶಬ್ಬೀರ್ ಡಾಂಗೆಯವರ ಜೊತೆ ವಿದ್ಯಾರ್ಥಿಗಳು ಹಾಗೂ ಕನ್ನಡ ಉಪನ್ಯಾಸಕರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group