spot_img
spot_img

ಪಾಠ ಕಲಿಸಿದ ಶಿಕ್ಷಕನಷ್ಟೇ ಕಾಯಕ ಕಲಿಸಿದ ಗುರು ಕೂಡ ಮುಖ್ಯ – ರಮೇಶ ಭೂಸನೂರ

Must Read

ಸಿಂದಗಿ: ನಮ್ಮ ಜೀವನವೆಂಬ ರಥವನ್ನು ಮುನ್ನಡೆಸಲು ಪಾಠ ಕಲಿಸಿದ ಶಿಕ್ಷಕರಷ್ಟೇ ಮಹತ್ತರವಾದ ಸ್ಥಾನವನ್ನು ಕಾಯಕ ಕಲಿಸಿದ ಗುರು ಕೂಡ ಹೊಂದಿದ್ದಾರೆ. ಅಂತಹ ಗುರುಗಳ ಪ್ರಾಥಮಿಕ ಶಾಲೆಯಲ್ಲಿ ಬೋಧಿಸಿದ ಉಪಾಧ್ಯಾಯರ ಹೆಸರು, ಬೋಧನಾಕ್ರಮ ಅಚ್ಚಳಿಯದೆ ನೆನಪಿದೆ. ಅವರು ಕಲಿಸುತ್ತಿದ್ದ ರೀತಿಹಾಗಿತ್ತು. ಅವರು ಪಾಠವನ್ನಷ್ಟೇ ಮಾಡದೆ ಸಾಮಾಜಿಕ ಜವಾಬ್ದಾರಿ ಕಲಿಸುತ್ತಿದ್ದರು. ಮಕ್ಕಳ ಮನೆಗಳಿಗೆ ಭೇಟಿ ನೀಡಿ ಪ್ರೋತ್ಸಾಹಿಸುತ್ತಿದ್ದರು ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ಗುದಂಗಿ ಪಕ್ಷನ್‍ಹಾಲ್ ನಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತಾಲೂಕ ಘಟಕ ಸಿಂದಗಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಗುರುಸ್ಪಂದನ ಕಾರ್ಯಕ್ರಮನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗುರು ಹಿರಿಯರಿಗೆ ಗೌರವ ನೀಡಲು, ಜೀವನದಲ್ಲಿ ಶಿಸ್ತು ಅಳವಡಿಸಿ ಕೊಳ್ಳಲು, ಈ ನೆಲದ ಸಂಸ್ಕೃತಿ ತಿಳಿದುಕೊಳ್ಳಲು ನೆರ ವಾಗುತ್ತಿದ್ದರು. ವಿದ್ಯಾರ್ಥಿಯ ಸರ್ವತೋಮುಖ ಏಳಿಗೆಯೇ ಅವರ ಗುರಿಯಾಗಿತ್ತು. ತನ್ನ ವಿದ್ಯಾರ್ಥಿಗಳು ನನಗಿಂತ ಉತ್ತಮ ಸ್ಥಾನ ಪಡೆಯಬೇಕೆಂದು ಅವರ ಕಾಳಜಿಯಾಗಿತ್ತು. ಹೀಗೆ ಸಣ್ಣ ತರಗತಿಗಳ ಅಧ್ಯಾಪಕರ ಹೆಸರು ಇಂದಿಗೂ ನೆನಪಿದೆ. ಗುರುಭವನ ಕಟ್ಟಡಕ್ಕೆ 50 ಲಕ್ಷ ಅನುದಾನ ಮಂಜೂರಾಗಿದೆ. ನಿವೇಶನ ಗುರುತಿಸಿ ಕಟ್ಟಡ ನಿರ್ಮಾಣ ಕಾರ್ಯ ಏಳೆಂಟು ತಿಂಗಳಲ್ಲಿ ಮುಗಿಯಲಿದೆ, ಶಿಕ್ಷಕರ ಸದನಕ್ಕೆ ಚುನಾವಣೆಯ ಮುಂಚೆ ಅಡಿಗಲ್ಲು ಸಂಕಲ್ಪವಿದೆ ಎಂದರು.

ಈ ಸಂದರ್ಭದಲ್ಲಿ ಸುರೇಶ ಶೇಡಶ್ಯಾಳ, ಚಂದ್ರಶೇಖರ ನುಗ್ಗಲಿ, ಜೆ ಎಸ್ ಬೋಳಸೂರ, ಯು ಆಯ್ ಶೇಖ ಮಾತನಾಡಿದರು,

ಆನಂದ ಭೂಸನೂರ ಆಶಯ ನುಡಿಗಳು, ಆಯ್,ಎಸ್,ಟಕ್ಕೆ ಪ್ರಾಸ್ತಾವಿಕರಿಸಿದರು, ಪ್ರಧಾನ ಕಾರ್ಯದರ್ಶಿ ಆರ್.ಬಿ.ಇವಣಗಿ ನಿರೂಪಿಸಿದರು.

ಈ ಸಂದರ್ಭದಲ್ಲಿ ಉಮೇಶ ಶಿರಹಟ್ಟಿಮಠ, ಎಚ್ ಎಮ್ ಹರನಾಳ, ಸುರೇಶ ಶೆಡಶ್ಯಾಳ, ಎಸ್ ಎಸ್ ಕತ್ನಳ್ಳಿ, ಎಂ ಎಸ್ ಚೌಧರಿ, ಎ ಎಚ್ ವಾಲೀಕಾರ, ಎ ಎಂ ಗಜಾಕೋಶ, ಶ್ರೀಮತಿ ಎಸ್ ಎಂ ಚಿಗರಿ, ರಾಯಪ್ಪ ಇವಣಗಿ, ಸಿ ಬಿ ಗಡಗಿ, ಸೇರಿದ್ದಂತೆ ಅನೇಕರು ಇದ್ದರು.

- Advertisement -
- Advertisement -

Latest News

ಕೆನಡಾ ಮೇಯರ್ ಗೆ  ಭಾರತದ ಸಂವಿಧಾನದ ಪ್ರತಿ

ಸದ್ಯ ಕೆನಡಾ ಪ್ರವಾಸದಲ್ಲಿರುವ ಹಿರಿಯ ಸಾಹಿತಿ , ಸಂಶೋಧಕ ಬೆಂಗಳೂರಿನ ಡಾ.ಕೆ.ಜಿ.ಲಕ್ಷ್ಮೀನಾರಾಯಣಪ್ಪರವರು ಇತ್ತೀಚೆಗೆ ಕೆನಡಾದ ಎಡ್ಮಾಟನ್ ನಗರದ ಮೇಯರ್ ಕಚೇರಿಯ ಸಭಾಂಗಣದಲ್ಲಿ ಅಲ್ಲಿನ ಪ್ರಥಮ ಪ್ರಜೆ ಚೆರಿಯಲ್...
- Advertisement -

More Articles Like This

- Advertisement -
close
error: Content is protected !!