ಬೀದರ – ಅಕ್ರಮವಾಗಿ 15 ಕೆ.ಜಿ ಗಾಂಜಾ ಗಿಡಗಳನ್ನು ಬೆಳೆದಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಶನಿವಾರ ಚಿಂತಾಕಿ ಪೊಲೀಸ್ ಠಾಣಾ ವ್ಯಾಪ್ತಿಯ ಕೀಶನ್ ತಾಂಡದಲ್ಲಿ ನಡೆದಿದೆ.
ಔರಾದ ಚಿಕ್ಲಿ (ಜೆ) ಗ್ರಾಪಂ ವ್ಯಾಪ್ತಿಯ ಕೀಶನ್ ತಾಂಡಾದ ಪುಂಡಲಿಕ್ ತಂದೆ ತುಳಸಿರಾಂ ಬಂಧಿತ ಆರೋಪಿ.
ಈತ ತನ್ನ ಸ್ವಂತ ಹೊಲದಲ್ಲಿ ಹತ್ತಿ ಬೆಳೆಗಳ ಮಧ್ಯೆ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವ ಖಚಿತ ಮಾಹಿತಿ ಮೇರೆಗೆ ಔರಾದ್ ವೃತ್ತ ನೀರಿಕ್ಷಕ ಮಲ್ಲಿಕಾರ್ಜುನ ಇಕ್ಕಳಕಿ ಅವರ ಮಾರ್ಗದರ್ಶನದಲ್ಲಿ ಚಿಂತಾಕಿ ಪೊಲೀಸ್ ಠಾಣಾ ಪಿಎಸ್ಐ ಸಿದ್ದಲಿಂಗ ಹಾಗೂ ಅವರ ತಂಡ ದಾಳಿ ನಡೆಸಿ ಆರೋಪಿ ಪುಂಡಲಿಕ್ ನನ್ನು ಬಂಧಿಸಿದರು.
ಔರಾದ ಪಟ್ಟಣದಲ್ಲಿ ಪೊಲೀಸ್ ಇಲಾಖೆ ಮತ್ತು ಅಬಕಾರಿ ಇಲಾಖೆ ಭಯವನ್ನು ಮರೆತು ತನ್ನ ಹೊಲದಲ್ಲಿ ಗಾಂಜಾ ಬೆಳುಸುತ್ತಾರೆ ಅಂದರೆ ಇದರ ಹಿಂದೆ ಯಾರು ಇರಬಹುದು ಎಂಬುದನ್ನು ತನಿಖೆ ಮಾಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಔರಾದ ಪಟ್ಟಣದಲ್ಲಿ ಅಕ್ರಮವಾಗಿ 15 ಕೆ.ಜಿ ಗಾಂಜಾ ಬೆಳೆದ ಆರೋಪಿ ಬಂಧಿಸಲಾಗಿದೆ. ಗಾಂಜಾ ಗಿಡಗಳನ್ನು ವಶಪಡಿಕೊಂಡು ನಂತರ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ