spot_img
spot_img

ಇಬ್ಬರು ಸಚಿವರು ಒಂದೇ ತವರೂರು; ಆದರೂ ಕ್ಷೇತ್ರದ ತುಂಬೆಲ್ಲ ಗುಂಡಿಗಳು

Must Read

ಬೀದರ – ಬೀದರ ಜಿಲ್ಲೆ  ಔರಾದ  ತಾಲೂಕಿನಲ್ಲಿ ಒಬ್ಬರಲ್ಲ ಇಬ್ಬರು ಸಚಿವರು ಇದ್ದರೂ ಕ್ಷೇತ್ರದ ರಸ್ತೆಗಳಲ್ಲಿ ಗುಂಡಿಗಳದ್ದೇ ಸಾಮ್ರಾಜ್ಯ ಇದೆ. ಜನರಿಗೆ ಎಷ್ಟೇ ತೊಂದರೆಯಾದರೂ ಗುಂಡಿ ಮುಚ್ಚುವ ಕೆಲಸ ಯಾರೂ ಮಾಡುತ್ತಿಲ್ಲ.

ಕೇಂದ್ರ ಸಚಿವ ಭಗವಂತ ಖೊಬಾ ಮತ್ತು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ ಇಬ್ಬರು ಔರಾದ ಕ್ಷೇತ್ರದ ಸಚಿವರು.

ಒಂದು ಗಾದೆ ಮಾತು ಇದೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇಬ್ಬರು ಸಚಿವರ ಗುದ್ದಾಟದಲ್ಲಿ ಕ್ಷೇತ್ರ ಬಡವಾಗುತ್ತಿದೆ ಎಂದು ಹೇಳಬಹುದು.

ಒಂದು ವಾರದ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಔರಾದ ಕ್ಷೇತ್ರದಲ್ಲಿ ಜನ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಸಂದರ್ಭದಲ್ಲಿ ಇಬ್ಬರು ಸಚಿವರಿಗೆ ಒಳ ಜಗಳ ಶಮನ ಮಾಡಲು ಪ್ರಯತ್ನ ಮಾಡಿದರು. ಈ ಇಬ್ಬರ ಸಚಿವರ ಜಗಳದಿಂದ ಔರಾದ ತಾಲೂಕಿನ ಹಲವು ಪ್ರಮುಖ ರಸ್ತೆ ಗುಂಡಿಗಳ ಹಣೆಬರಹ ಈ ರೀತಿ ಇದೆ ನೋಡಿ.

ಜಂಬಗಿ-ವಡಗಾಂವ ಪ್ರಮುಖ ಮುಖ್ಯ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ಜನಸಾಮಾನ್ಯರು ನಿತ್ಯ ತಗ್ಗು ಗುಂಡಿಗಳ ಮಧ್ಯೆ ಸಂಚರಿಸುವ ಪರಿಸ್ಥಿತಿ ಉಂಟಾಗಿದೆ. ಜಂಬಗಿಯಿಂದ ವಡಗಾಂವ ಮಾರ್ಗ ರಸ್ತೆಯಲ್ಲಿ ಮಳೆ ನೀರು ಸಂಗ್ರಹಗೊಂಡ ಪರಿಣಾಮ ವಾಹನ ಸವಾರರು ಪರದಾಡುತ್ತಿದ್ದಾರೆ.

ಕಳೆದ ಒಂದು ತಿಂಗಳಿಂದ ಮಳೆಯಿಂದಾಗಿ ರಸ್ತೆಗಳು ಹದಗೆಟ್ಟಿದ್ದರೂ, ರಸ್ತೆಗಳು ಕೆಸರುಮಯವಾಗಿದ್ದರೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.

ಪ್ರಮುಖ ರಸ್ತೆಗಳಲ್ಲಿ ಸ್ವಲ್ಪ ಮಳೆಯಾದರೆ ಸಾಕು ತಗ್ಗು ಗುಂಡಿಯಲ್ಲಿ ನೀರು ಜಮಾಯಿಸಿ ರಸ್ತೆಗಳು ಸಂಪೂರ್ಣ ಹಾಳಾಗಿ ತಿಂಗಳುಗಳೇ ಗತಿಸಿದರೂ ಅಧಿಕಾರಿಗಳು ಇತ್ತ ಕಡೆಗೆ ಗಮನ ಹರಿಸಿಲ್ಲ. ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿಲ್ಲ. ಮಳೆ ನೀರು ನಿಂತು ಜನರ ಸಂಚಾರಕ್ಕೆ ಮತ್ತಷ್ಟು ತೊಂದರೆ ಉಂಟಾಗುತ್ತಿದೆ. ಮಳೆ ನೀರು  ಹರಿದು ಹೋಗುವಂತೆ ಮಾಡಬೇಕಾದ ಅಗತ್ಯವಿದೆ.

ನಾನಾ  ಸಮಸ್ಯೆಗಳನ್ನು ಸಾರ್ವಜನಿಕರು ಅನುಭವಿಸುತ್ತಿದ್ದಾರೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು ಹಾಗೂ ಸಾರ್ವಜನಿಕರಿಗೆ ಸರಿಯಾದ ನೀಡಬೇಕೆಂದು ದಲಿತ ಸಂಘರ್ಷ ಸಮಿತಿ  ಔರಾದ ತಾಲೂಕು ಸಂಚಾಲಕ   ಜೈ ಪ್ರಕಾಶ ಅಷ್ಟೋರೆ ಮನವಿ ಮಾಡಿದ್ದಾರೆ.

ಇಬ್ಬರು ಸಚಿವರು ಒಳ ಜಗಳ ಬಿಟ್ಟು ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಹರಿಸುತ್ತಾರೆಯೋ ಅಥವಾ ಇದೆ ರೀತಿ ಜಗಳದಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುವುದನ್ನು ಮರೆತು ಬಿಡುತ್ತಾರೋ ಎಂಬುದನ್ನು ಕಾದು ನೋಡಬೇಕು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!