ಬೀದರ: ರವಿವಾರ ನಡೆಯಲಿರುವ ಭಾರತ ಆಸ್ಟ್ರೇಲಿಯಾ ತಂಡಗಳ ನಡುವಣ ವಿಶ್ವ ಕಪ್ ಫೈನಲ್ ಪಂದ್ಯ ವೀಕ್ಷಣೆಗೆ ಕ್ರೀಡಾಂಗಣದಲ್ಲಿ ವ್ಯವಸ್ಥೆ ಮಾಡಲಾಗಿದ್ದು ಕೆಲವೇ ಕ್ಷಣಗಳಲ್ಲಿ ನಡೆಯಲಿರುವ ಪಂದ್ಯ ವೀಕ್ಷಣೆಗೆ ಸಿದ್ಧತೆ ಮಾತ್ರ ಇನ್ನೂ ಮುಗಿದಿಲ್ಲ.
ಇದರಿಂದ ಬೀದರ್ ನಲ್ಲಿ ಕ್ರಿಕೆಟ್ ಪ್ರೇಮಿಗಳಿಗೆ ಜಿಲ್ಲಾಡಳಿತ ನಿರಾಸೆ ಮೂಡಿಸಿದ್ದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೆಲವೇ ಕ್ಷಣಗಳಲ್ಲಿ ವಿಶ್ವಕಪ್ ಫೈನಲ್ ಆರಂಭ ಆಗಬೇಕಿದೆ. ಆದರೂ ಇನ್ನೂ ಎಲ್ಇಡಿ ಪರದೆ ಹಾಕಲು ನಿರ್ಲಕ್ಷ್ಯ ತೋರುತ್ತಿರುವ ಜಿಲ್ಲಾಡಳಿತದ ಕ್ರಮ ಟೀಕೆಗೆ ಗುರಿಯಾಗಿದೆ.
ಈ ಬಗ್ಗೆ ಮುಂಚಿತವಾಗಿಯೇ ತಿಳಿಸಲಾಗಿದ್ದರೂ ಜಿಲ್ಲಾಡಳಿತ ಕ್ರಿಕೆಟ್ ವೀಕ್ಷಣೆಗೆ ಕೈಗೊಳ್ಳಬೇಕಾದ ಕ್ರಮ ಕೈಗೊಂಡಿಲ್ಲ. ಚೇರ್ ವ್ಯವಸ್ಥೆ ಇಲ್ಲ.ನೀರಿನ ವ್ಯವಸ್ಥೆ ಕೂಡ ಆಗಬೇಕಾಗಿದೆ. ಜಿಲ್ಲಾಡಳಿತ ತ್ವರಿತ ಕ್ರಮ ಕೈಗೊಂಡು ಸದ್ಯದಲ್ಲಿಯೇ ಆರಂಭವಾಗಲಿರುವ ಪಂದ್ಯ ವೀಕ್ಷಣೆಗೆ ಬೇಗ ಸಿದ್ಧತೆ ಮಾಡಿ ಸಾರ್ವಜನಿಕ ರ ಸಂಭ್ರಮಕ್ಕೆ ಕಾರಣವಾಗಬೇಕಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ