ಮುನವಳ್ಳಿ – “ಭಾಗವತ ಕೃಷ್ಣನ ಗುರುತ್ವವನ್ನು ಉಪದೇಶ ಕರ್ತೃತ್ವವನ್ನು ಹೇಳುತ್ತದೆ.ಅದರಲ್ಲಿ ಗೋಪಿಕಾ ಸ್ತ್ರೀಯರ ಭಕ್ತಿ ಪರವಶತೆಯನ್ನು ಭಾಗವತದಲ್ಲಿ ಅನನ್ಯ ರೂಪದಲ್ಲಿ ಹೇಳಲಾಗಿದೆ. ಅವರು ತಮ್ಮ ಪತಿಯರನ್ನು ಮರೆತು ಶ್ರೀ ಕೃಷ್ಣನ ಭಕ್ತಿಗಾಗಿ ಹಾತೊರೆಯುವ ಸನ್ನಿವೇಶಗಳನ್ನು ವರ್ಣಿಸಲಾಗಿದೆ. ಇಲ್ಲಿ ಭಾವನೆಯ ಕುರಿತಂತೆ ತಿಳಿಸಲಾಗಿದ್ದು ನಾವು ಯಾವ ರೀತಿಯಲ್ಲಿ ಭಾವ ಮಾಡಿಕೊಳ್ಳುತ್ತೇವೆಯೋ ಆ ಭಾವ ನಮ್ಮ ವರ್ತನೆಯಲ್ಲಿ ಮೂಡುತ್ತದೆ ಎಂದು ಶ್ರೋ.ಬ್ರ.ನಿ.ಮುಕ್ತಾನಂದ ಸ್ವಾಮೀಜಿ ಹೇಳಿದರು.
ಇದಕ್ಕೆ ಡೋಂಗ್ರೆ ಮಹಾರಾಜರ ಉದಾಹರಣೆಯನ್ನು ನೀಡುತ್ತ ಅವರು ಭಕ್ತಿಭಾವದಿಂದ ನೀಡಿದ ಕೊಡುಗೆಯನ್ನು ಉದಾಹರಿಸಿ, ತಮ್ಮ ಬದುಕಿನಲ್ಲಿ ನಡೆದ ಘಟನೆಯನ್ನು ಹೇಳುತ್ತ ಹಲವು ವರ್ಷಗಳ ಹಿಂದೆ ಅವರು ಮಹಾರಾಷ್ಟ್ರದ ಸಂಚಾರದಲ್ಲಿದ್ದಾಗ ಒಂದು ದೇವಾಲಯದ ಆವರಣದಲ್ಲಿ ಮಲಗುವ ಪ್ರಸಂಗ ಒದಗಿತ್ತು. ಆ ಸಂದರ್ಭ ದೇವಸ್ಥಾನಕ್ಕೆ ಬಂದ ಓರ್ವ ಭಕ್ತ ಇವರನ್ನು ಮರಾಠಿಯಲ್ಲಿ ಮಾತನಾಡಿಸಲು ಇವರು ಅಲ್ವ ಸ್ವಲ್ಪ ಹಿಂದಿ ಬಳಸಿ ಉತ್ತರಿಸಿದ್ದರು.
ಆತ ಆ ಸಂಜೆ ತನ್ನ ಮನೆಯಲ್ಲಿ ಸತ್ಸಂಗ ಏರ್ಪಡಿಸಿದ್ದು ಪೂಜ್ಯರೂ ಆಗಮಿಸಬೇಕು ಎಂದು ನಿವೇದಿಸಿಕೊಂಡನಂತೆ. ಅದೇ ರೀತಿ ಸಂಜೆ ಅವರ ಮನೆಗೆ ಹೋದಾಗ ಆತ ಸತ್ಸಂಗಕ್ಕೆ ಏರ್ಪಾಡು ಮಾಡುವುದಕ್ಕಾಗಿ ಮನೆಯ ಒಳಗಿದ್ದ. ಹೊರಗಿನಿಂದ ವಾತಾವರಣ ಕಂಡ ಪೂಜ್ಯರು ತಮ್ಮನ್ನು ಸ್ವಾಗತಿಸಲು ಈ ಮನೆಯವರಾರೂ ಹೊರಗೆ ಕಾಣಿಸುತ್ತಿಲ್ಲವಲ್ಲ ಎಂಬ ಭಾವ ತಳೆದರು. ಇಲ್ಲಿ ಅವರ ಒಳ ಮನಸ್ಸು ಜಾಗೃತವಾಯಿತು. ತಾವು ಆ ಮನೆಯ ಒಳಗೆ ನೋಡಿದಾಗ ಆ ಭಕ್ತ ಇವರನ್ನು ಕಂಡಿದ್ದ ಮತ್ತು ಆದರಿಸಿದ್ದನು.
ಇದು ಭಾವ ಮತ್ತು ವರ್ತನೆಗೆ ಸಾಕ್ಷಿ.’ ಎಂಬುದನ್ನು ಸೂಚ್ಯವಾಗಿ ತಿಳಿಸುತ್ತ ಓರ್ವ ವ್ಯಕ್ತಿ ತನ್ನ ಸಂಬಂಧಿಯೊಬ್ಬ ಕೊಲೆಯಾಗಿದ್ದು ಆ ಕೊಲೆಯ ಕುರಿತು ಪೋಲಿಸ್ ಠಾಣೆಗೆ ದೂರು ದಾಖಲಿಸಿದನು. ಹತ್ತು ಹದಿನೈದು ದಿನ ಕಳೆದ ನಂತರ ಪೋಲಿಸ್ ಠಾಣೆಗೆ ಬಂದು ಕಳ್ಳ ಸಿಕ್ಕಿರುವನಾ? ಎಂದು ವಿಚಾರಿಸಿದ.
ಪೋಲಿಸರು ಕಳ್ಳ ಇನ್ನೂ ಸಿಕ್ಕಿಲ್ಲ ಹುಡುಕುತ್ತಿದ್ದೇವೆ ಎಂದಾಗ ಅವರ ಬಗ್ಗೆ ಕೋಪದಿಂದ ಮಾತನಾಡಿ ಹೋಗಿದ್ದನು.
ನಂತರ ಮತ್ತೇ ಇದೇ ರೀತಿ ಹದಿನೈದು ದಿನ ಕಳೆದು ಬಂದು ತನ್ನ ಕಿರುಚಾಟ ಮಾಡಿದ್ದ ಈ ರೀತಿ ಅವನ ವರ್ತನೆ ಕಂಡ ಇನಸ್ಪೆಕ್ಟರ್ ಮುಂದಿನ ಸಲ ಬಂದಾಗ ಆತನನ್ನು ಬಂಧಿಸಲು ಸೂಚಿಸಿದರು. ಆತ ಮತ್ತೆ ಹದಿನೈದು ದಿನ ಕಳೆದು ಆ ಠಾಣೆಗೆ ಬಂದು ತನ್ನ ಹಳೆಯ ವರಸೆಯನ್ನು ಆರಂಭಿಸಿದ್ದ. ಇನ್ ಸ್ಪೆಕ್ಟರ್ ಸೂಚಿಸಿದಂತೆ ಪೋಲಿಸರು ಆತನನ್ನು ಬಂಧಿಸಿದರು.
ಹೊರಗೆ ಕೆಲಸದ ನಿಮಿತ್ತ ಹೋಗಿದ್ದ ಇನಸ್ಪೆಕ್ಟರ್ ಆತನನ್ನು ಬೆಂಡೆತ್ತಲು ಆ ಕೊಲೆ ತಾನೇ ಮಾಡಿರುವುದಾಗಿ ಒಪ್ಪಿಕೊಂಡ.ಅಲ್ಲಿ ಅವನು ಕೊಲೆ ಮಾಡಿದ ಅಪರಾಧಿ ಭಾವ ಆತನನ್ನು ಕಾಡುತ್ತಿತ್ತು. ಆ ಕೊಲೆ ಮುಚ್ಚಬಹುದು ಎಂದು ನಾಟಕವನ್ನು ಅವನು ಆಡುತ್ತಿದ್ದ. ತೀಕ್ಷ್ಣ ಬುದ್ಧಿಯ ಇನಸ್ಪೆಕ್ಟರ್ ತನ್ನ ಚಾಕಚಕ್ಯತೆಯಿಂದ ಅವನೇ ಕೊಲೆಗಾರ ಎಂಬುದನ್ನು ಕಂಡು ಹಿಡಿದು ಕೊಲೆಯನ್ನು ಬಯಲು ಮಾಡಿದ್ದರು.ಹೀಗೆ ನಮ್ಮ ಭಾವ ನಮ್ಮ ವರ್ತನೆಯಲ್ಲಿ ಮೂಡುತ್ತಿರುತ್ತದೆ ಎಂದು ಉದಾಹರಿಸಿದರು.
ನಮ್ಮಲ್ಲಿ ಅಪೇಕ್ಷೆ ಶ್ರದ್ಧೆ ಇದ್ದರೆ ಕಲ್ಲೂ ಕೂಡ ದೇವರಾಗುತ್ತದೆ.ನಮ್ಮ ಶರೀರವೇ ಒಂದು ವೃಂದಾವನ.,ಶರೀರದ ಶೋಭೆ ಬರುವುದು ಭಕ್ತಿಯಿಂದ.ದೇವಾನುದೇವತೆಗಳು ತಮ್ಮ ವಾಹನವಾಗಿ ಪ್ರಾಣಿ ಪಕ್ಷಿಗಳನ್ನು ಇಟ್ಟುಕೊಂಡಿದ್ದರು. ಇದರರ್ಥ ದೇವತೆಗಳ ಭಕ್ತಿಯ ಜೊತೆಗೆ ಆ ಪ್ರಾಣಿ ಪಕ್ಷಿಗಳ ಮಹತ್ವದ ಅರಿವೂ ನಮಗಿರಬೇಕು.ಅವುಗಳ ಬಗ್ಗೆಯೂ ಕೂಡ ಭಕ್ತಿಭಾವ ಮೂಡಬೇಕು ಎಂಬುದು. ಗೋಪಿಕೆಯರಲ್ಲಿ ಕೃಷ್ಣನ ಸೇರುವ ದರ್ಶನ ಭಕ್ತಿ ಇತ್ತು.
ಅದನ್ನು ಅವರು ದೈನ್ಯದಿಂದ ಕೃಷ್ಣನಲ್ಲಿ ಬೇಡಿಕೊಳ್ಳುತ್ತಿದ್ದರು. ಕೃಷ್ಣನು ಕೂಡ ಅವರ ಭಕ್ತಿಯ ಪರೀಕ್ಷೆ ಮಾಡುವ ಜೊತೆಗೆ ಅದಕ್ಕೊಂದು ನಿದರ್ಶನ ನೀಡುತ್ತಿದ್ದ ಎಂಬುದನ್ನು ಗೋಪಿಕಾ ಸ್ತ್ರೀಯರ ಘಟನೆಗಳು ಭಾಗವತದಲ್ಲಿ ಬರುತ್ತವೆ ಎಂಬುದನ್ನು ಉದಾಹರಣೆ ಸಹಿತವಾಗಿ ಶ್ರೋ.ಬ್ರ.ನಿ.ಸದ್ಗುರು ಮುಕ್ತಾನಂದ ಪೂಜ್ಯರು ತಿಳಿಸಿದರು.
ಅವರು ಸಿಂದೋಗಿ ಮುನವಳ್ಳಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದ ಗೂಗಲ್ ಮೀಟ್ ಸತ್ಸಂಗದಲಿ ಸೋಮವಾರ ರಾತ್ರಿ 7.30 ಕ್ಕೆ ಜರುಗಿದ ಸತ್ಸಂಗದಲ್ಲಿ ಭಾಗವತದಲ್ಲಿ ಗೋಪಿಕಾ ಸ್ತ್ರೀಯರ ಕೃಷ್ಣಭಕ್ತಿ ಕುರಿತು ತಿಳಿಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಜೀವನಗೌಡ ಪಾಟೀಲ ಅವರಿಂದ ಚಾಮುಂಡಾಂಬೆಯೇ ಸಿಂಹಾರೂಢಿಯೇ ಪಾಲಿಸಮ್ಮ’ ಪ್ರಾರ್ಥನೆ ಜರುಗಿತು.ಧ್ಯಾನದ ಜಪಕ್ಕಿಂತ ಮೊದಲು ಶ್ರೋ.ಬ್ರ.ನಿ.ಸದ್ಗುರು ಮುಕ್ತಾನಂದ ಪೂಜ್ಯರಿಂದ ಶಿಶುನಾಳ ಷರೀಫರ ‘ನಾನಾ ಎಂಬುದು ನಾನಲ್ಲ’ಗೀತೆ ಜರುಗಿತು.ವೀರಣ್ಣ ಕೊಳಕಿ ಕಾರ್ಯಕ್ರಮ ನಿರ್ವಹಿಸುವ ಜೊತೆಗೆ ಸ್ವಾಗತ ವಂದನಾರ್ಪಣೆಗೈದರು.
ವರದಿ – ವೈ.ಬಿ.ಕಡಕೋಳ