spot_img
spot_img

ಸ್ತ್ರೀ ಗೆ ಜ್ಞಾನ, ಗೌರವ ಕೊಡದಿದ್ದರೆ ಕಷ್ಟ ನಷ್ಟ ತಪ್ಪಿದ್ದಲ್ಲ

Must Read

- Advertisement -

ಬಡವರ ಮನೆ ಹುಡುಗಿ ಶ್ರೀಮಂತರ ಮನೆ ಹುಡುಗರಿಗೆ ಹಿಂದೆ ಮದುವೆ ಮಾಡಿಕೊಡುತ್ತಿದ್ದರು. ಕಾಲಕ್ರಮೇಣ ಯಾವಾಗ ಸ್ತ್ರೀ ಯ ಜ್ಞಾನವನ್ನು ತಿರಸ್ಕರಿಸಿ ಹಣದಿಂದ ಆಳಲು ಪ್ರಾರಂಭಿಸಿದರೋ ಸ್ತ್ರೀಯೂ ಹಣದ ಸಂಪಾದನೆ ಮಾಡಿ ಸ್ವತಂತ್ರ ಜೀವನ ನಡೆಸಬೇಕಾಯಿತು.

ಬಡತನದಲ್ಲಿ ಕಷ್ಟವನ್ನು ಸಹಿಸಿಕೊಳ್ಳುವ ಜ್ಞಾನ ಹೆಚ್ಚು.ಜ್ಞಾನವಿದ್ದವರು ಹಣವನ್ನು ಸದ್ಬಳಕೆ ಮಾಡಿಕೊಂಡು ಸಂಸಾರ ನಡೆಸುತ್ತಾರೆನ್ನುವುದೆ ಇದರ ಉದ್ದೇಶವಾಗಿತ್ತು. ಕುಂತಿದೇವಿ ಶ್ರೀ ಕೃಷ್ಣನಲ್ಲಿ ಕೇಳಿದ್ದು ಅದನ್ನೇ ಅಲ್ಲವೆ? ಕಷ್ಟವಿದ್ದರೆ ಮಾತ್ರ ಮಾನವ ಪರಮಾತ್ಮನ ಕಡೆ ನಡೆಯೋದು.

ವಿಪರ್ಯಾಸವೆಂದರೆ ಭೂಮಿಯ ಮೇಲಿದ್ದು ಭೂಮಿಯನ್ನು ವ್ಯವಹಾರಕ್ಕೆಳೆದು ಹಣಗಳಿಸಿ ಕೊನೆಗೆ ಭೂಮಿಯನ್ನೇ ಆಳಿ ಅಳಿಸೋದಕ್ಕಿಂತ ದೊಡ್ಡ ಅಜ್ಞಾನವಿಲ್ಲ. ಭಾರತದಂತಹ ದೇಶ ಈಗ ಈ ಸ್ಥಿತಿಗೆ ಬರಲು ಕಾರಣವೇ ಸ್ತ್ರೀ ಯರು ಮನೆಯಿಂದ ಹೊರಬಂದು ಸ್ವತಂತ್ರವಾಗಿ ಜೀವನ ನಡೆಸಿರೋದು.

- Advertisement -

ಇದಕ್ಕೆ ಕಾರಣವೆ ಅಜ್ಞಾನದ ಪುರುಷರ ದಬ್ಬಾಳಿಕೆ. ಎರಡೂ ಕೈಸೇರಿ ಚಪ್ಪಾಳೆಯಾಗಿದೆ. ಚಪ್ಪಾಳೆಯ ಸದ್ದಿಗೆ ಭೂಮಿ ನಡುಗಿದೆ. ಭೂಮಿ‌ನಡುಗಿದರೆ ಪ್ರಕೃತಿವಿಕೋಪವಾಗುತ್ತದೆ. ಪ್ರಕೃತಿಯೇ‌ ಕೋಪಗೊಂಡರೆ ಜೀವಹಾನಿಯಾಗುತ್ತದೆ. ಜೀವಹೋದರೆ ಜೀವನ ಎಲ್ಲಿರುತ್ತದೆ? ಒಟ್ಟಿನಲ್ಲಿ ಜ್ಞಾನವನ್ನು ಬೆಳೆಸದೆ ಹಣ ಸಂಪಾದಿಸಿದರೆ ಹಣದ ಸದ್ಬಳಕೆಯಾಗದೆ ಋಣ ಹೆಚ್ಚುತ್ತದೆ.

ಮಾನವನ ಜನ್ಮಕ್ಕೆ ಕಾರಣವೇ ಋಣ. ಋಣಮುಕ್ತರಾಗಲು ಭೂಮಿಗೆ ಬಂದವರಿಗೆ ಕರ್ಮದ ಬಗ್ಗೆ ಅರಿವಿಲ್ಲವಾದರೆ ಸಾಲ ತೀರೋದಿಲ್ಲ. ಎಷ್ಟು ಹಣ ಸಂಪಾದಿಸಿದರೂ ಸದ್ಬಳಕೆಯ ಜ್ಞಾನವಿಲ್ಲವಾದರೆ ಸ್ತ್ರೀ ಗಾಗಲಿ ಪುರುಷರಿಗಾಗಲಿ ಶಾಂತಿ, ಸಮಾಧಾನ,ತೃಪ್ತಿ, ಮುಕ್ತಿ ಯಿಲ್ಲದೆ ಪುನರ್ಜನ್ಮ. ಎಷ್ಟೋ ‌ ಕಲಾವಿದರಿಗೆ ಜೀವನ ನಡೆಸಲಾಗದೆ ನಾಟಕರಂಗ,‌ ಚಲನಚಿತ್ರ,‌ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಆರ್ಥಿಕ ಪರಿಸ್ಥಿತಿಯಲ್ಲಿ ಅನಿವಾರ್ಯ ಕಾರಣಕ್ಕಾಗಿಯೇ ಮನೆಬಿಟ್ಟು ಹೊರಬಂದ ಸ್ತ್ರೀ ಗೆ ರಾಣಿಯರ ವೇಶಭೂಷಣದ ರಾಣಿಪಾತ್ರ ಸಿಗಬಹುದು.ಆದರೆ ಅವರ ಜೀವನದ ಸತ್ಯ ಯಾರಿಗೂ ಕಾಣದಿರೋದು ದೊಡ್ಡ ದುರಂತ. ಕೆಲವರಿಗೆ ಸಾಕಷ್ಟು ಹಣವಿದ್ದರೂ ಹೆಸರಿಗಾಗಿ ವೃತ್ತಿಯಾಗಿ ನಟನೆ ಒಂದು ಕಲೆಯಾಗಿರಬಹುದು.

- Advertisement -

ಆದರೆ ಅನೇಕರಿಗೆ ಇದೊಂದು ಜೀವನ ನಡೆಸುವ ದಾರಿಯಾಗಿದೆ. ಉದ್ಯೋಗಂ ಪುರುಷ ಲಕ್ಷಣಂ ಎನ್ನುವ ಕಾಲವಿತ್ತು.ಈಗ ಸ್ತ್ರೀ ಗೆ ಉದ್ಯೋಗ ಅನಿವಾರ್ಯವೆಂದಾಗಿದೆ. ಹಣಕ್ಕಾಗಿ ಪುರುಷ ದುಡಿಯಲೇಬೇಕು. ಈಗ ಇಬ್ಬರೂ ದುಡಿದರೂ ಸಾಲ ಮಾಡೋದು ತಪ್ಪಿಲ್ಲವೆಂದರೆ ಅಜ್ಞಾನ.

ಅಧರ್ಮ, ಅನ್ಯಾಯ, ಭ್ರಷ್ಟಾಚಾರದಿಂದ ಎಷ್ಟೇ ಸಂಪಾದನೆ ಮಾಡಿದರೂ ಸಮಸ್ಯೆಗಳು ಕಷ್ಟ ನಷ್ಟಗಳು ಹೆಚ್ಚುತ್ತದೆ.ಆಸೆ ಇರಬೇಕು ಅತಿಆಸೆ ಆಗಬಾರದು. ಹಾಗೆ ದೇವರನ್ನಾಗಲಿ ಅಸುರರನ್ನಾಗಲಿ ಅತಿಯಾಗಿ ಬೇಡಬಾರದು. ಸರ್ಕಾರದ ಹಣ ಜನರ ಋಣ. ಸರ್ಕಾರದ ಸಾಲವನ್ನು ತೀರಿಸಲು ಜನ್ಮಜನ್ಮಗಳೇ ಬೇಕು.

ಹಿಂದಿನ ಜನ್ಮದ ಋಣಕ್ಕೆ ಬಡ್ಡಿ ಚಕ್ರಬಡ್ಡಿ ಬೆಳೆದ ಲೆಕ್ಕ ಮೇಲಿನ ಲೋಕದಲ್ಲಿರುವಾಗ ಅದನ್ನು ಮನ್ನಾ ಮಾಡುತ್ತಾರೆಯೆ? ಪರಮಾತ್ಮನ ಸೇವೆಯನ್ನು ನಿಸ್ವಾರ್ಥ ನಿರಹಂಕಾರದಿಂದ ನಡೆಸಿದವರಲ್ಲಿ ಜ್ಞಾನವಿತ್ತು. ಹಣವಿಲ್ಲದೆಯೂ ಸೇವಾಕಾರ್ಯ ನಡೆಸಿದವರಿಗೆ ಮುಕ್ತಿಯಿತ್ತು. ಆದರೆ ಇಂದಿನ ಸೇವೆ ಭ್ರಷ್ಟಾಚಾರ ದ ಹಣದಲ್ಲಿ ರಾಜಕೀಯವಾಗಿ ‌ಬಳಸುವವರ.

ಸಂಖ್ಯೆ ಬೆಳೆದು ಅಧರ್ಮಕ್ಕೆ ಶಕ್ತಿಹೆಚ್ಚಾಗಿದೆ. ಅಧರ್ಮದಿಂದ ಭೂಮಿ,ಸ್ತ್ರೀ ಶಕ್ತಿ ದುರ್ಭಳಕೆ ಮಾಡಿಕೊಂಡರೆ ಕೊರೊನ ದಂತಹ ಮಹಾಮಾರಿ‌ ಹುಟ್ಟಿ ಜೀವಬಲಿ ತೆಗೆದುಕೊಂಡು ತನ್ನ ಅಸ್ತಿತ್ವಕ್ಕೆ ಆದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದು ಆಧ್ಯಾತ್ಮ ಸತ್ಯ. ಸ್ತ್ರೀ ಗೆ ಗೌರವಕೊಟ್ಟು ಜ್ಞಾನಕೊಟ್ಟು ಸತ್ಯ,ಧರ್ಮದಲ್ಲಿ ನಡೆಸೋ ಬದಲು ಅವಳ ವಿರುದ್ದ ರಾಜಕೀಯ ನಡೆಸಿದರೆ ಮನುಕುಲಕ್ಕೆ ಕಷ್ಟನಷ್ಟ ತಪ್ಪಿದ್ದಲ್ಲ.

ಸ್ತ್ರೀ ಋಣ ತೀರಿಸೋದು ಸುಲಭವಿಲ್ಲ. ಅದರಲ್ಲಿಯೂ ಜ್ಞಾನ ಇಲ್ಲವಾದರೆ ಸಾಧ್ಯವಿಲ್ಲ. ಹೀಗಾಗಿ ಸ್ತ್ರೀ ಶಕ್ತಿಗೆ ಜ್ಞಾನದ ಶಿಕ್ಷಣ ಧಾರ್ಮಿಕ ಕ್ಷೇತ್ರ ನೀಡುವುದು ಭಾರತೀಯರ ಧರ್ಮ.ಪ್ರತಿಮೆಯೊಳಗಿರುವ ಸ್ತ್ರೀ ಬೇರೆ ಭೂಮಿ ಮೇಲಿರುವ‌ ಜೀವ ಬೇರೆ ಎಂದಾಗ ಅದ್ವೈತ ವಾಗೋದಿಲ್ಲ. ಸತ್ಯ ಒಂದೆ.ಶಕ್ತಿ ಒಂದೇ ಭೂಮಿ ಒಂದೇ. ತತ್ವ ಒಂದೇ. ದೇಶ ಒಂದೇ.

ಆದರೆ ರಾಜಕೀಯ ಒಂದೇ ಆಗದ ಕಾರಣ ರಾಜಯೋಗವನ್ನು ಅಪಾರ್ಥ ಮಾಡಿಕೊಂಡು ಹಣಸಂಪಾದನೆಗೆ ಅಧರ್ಮ ಮಾರ್ಗ ಹಿಡಿದರೆ ಜೀವಕ್ಕೆ  ಮುಕ್ತಿ ಸಿಗದು. ಆತ್ಮನಿರ್ಭರ ಭಾರತಕ್ಕೆ ಆತ್ಮಜ್ಞಾನಿಗಳ ಸಹಕಾರದ ಅಗತ್ಯವಿದೆ. ವಿಜ್ಞಾನ ಇದಕ್ಕೆ ವಿರುದ್ದವಾಗಿದೆ. ಸ್ತ್ರೀ ಪುರುಷರ ಸಂಬಂಧ ಗಟ್ಟಿಯಾಗಿರಲು ಜ್ಞಾನದ ಅಗತ್ಯವಿದೆ.

ಹಣದ ಅಗತ್ಯ ಹಿಂದಿನಿಂದಲೂ ಬೆಳೆದು ಬಂದಿದೆ. ಹಿಂದೆ ಸ್ತ್ರೀ ದುಡಿಯದ ಗೃಹಿಣಿಯಾಗಿದ್ದಳು.ಇಂದು ಸ್ತ್ರೀ ದುಡಿಯುವ ಮಹಿಳೆ.ಆದರೆ ಹಿಂದಿನ ಶಾಸ್ತ್ರ ಪುರಾಣಗಳಲ್ಲಿರದ ಅತಿಯಾದ ಆಚಾರ,ವಿಚಾರದಿಂದ ಸ್ತ್ರೀ ಶೋಷಣೆ ಮಾಡಿ ಎಲ್ಲವನ್ನೂ ದಿಕ್ಕರಿಸಿ ಹೊರಬಂದ ಸ್ತ್ರೀ ಶಕ್ತಿ ಹಣದಿಂದಲೂ ಶ್ರೀಮಂತಳಾದಾಗ ಹಿಡಿದು ನಿಲ್ಲಿಸುವುದು ಯಾರನ್ನು? ಜ್ಞಾನಿಯನ್ನು ಅಜ್ಞಾನಿಗಳು ಆಳಿದರೆ ಭೂಮಿಗೆ ನಷ್ಟ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಜಾತ್ರೆಗಳು ಜಾನಪದ ಕಲೆ, ಸಂಪ್ರದಾಯ, ಆಚರಣೆಗಳ ತೊಟ್ಟಿಲು

ಮೂಡಲಗಿ: ‘ಜನಪದರು ಸೇರಿ ದೈವೀಆರಾಧನೆಯೊಂದಿಗೆ ಜಾತಿ, ಧರ್ಮ, ಮೇಲು, ಕೀಳು ಭೇದ ಬಿಟ್ಟು ಸಾಮರಸ್ಯವನ್ನು ಬೆಳೆಸುವುದೇ ಜಾತ್ರೆಗಳಾಗಿವೆ’ ಎಂದು ಸಾಹಿತಿ, ಪತ್ರಕರ್ತ ಬಾಲಶೇಖರ ಬಂದಿ ಹೇಳಿದರು. ತಾಲ್ಲೂಕಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group