spot_img
spot_img

ಯುವಕರು ದುಶ್ಚಟಕ್ಕೆ ಒಳಗಾಗದೆ ಯೋಧರಾಗಬೇಕು – ನಿ.ಕರ್ನಲ್ ದಳವಾಯಿ

Must Read

spot_img
- Advertisement -

ಮೂಡಲಗಿ: ಸದೃಢ ದೇಶ ನಿರ್ಮಾಣಕ್ಕೆ ಯೋಧರ ಪಾತ್ರ ಮುಖ್ಯವಾಗಿದೆ ಯುವಕರು ದುಶ್ಚಟಕ್ಕೆ ಒಳಗಾಗದೇ ದೇಶದ ರಕ್ಷಣೆಗೆ ಮುಂದಾಗಬೇಕು,ಪ್ರತಿ ಮನೆಗೆ ಒಬ್ಬರಂತೆ ಯೋಧರು ರೆಡಿಯಾಗಬೇಕು ಎಂದು ನಿವೃತ್ತ ಕರ್ನಲ್ ಪ್ರಭಾಕರ ದಳವಾಯಿ ಆಶಯ ವ್ಯಕ್ತಪಡಿಸಿದರು.

ಮಂಗಳವಾರ ಜು-26 ರಂದು ಕಲ್ಲೋಳಿ ಪಟ್ಟಣದಲ್ಲಿ ಮೂಡಲಗಿ ತಾಲೂಕ ಮಾಜಿ ಸೈನಿಕರ ಸಂಘ ಆಯೋಜಿಸಿದ ಕಾರ್ಗಿಲ್ ವಿಜಯೋತ್ಸವವನ್ನು ಹುತಾತ್ಮ ಯೋಧ ಜೋತೆಪ್ಪ ಗುಂಡಪ್ಪಗೋಳ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಲಾಯಿತು.

ನಂತರ ಮಾತನಾಡಿದ ದಳವಾಯಿ ಅವರು ದೇಶ ರಕ್ಷಣೆಯಲ್ಲಿ ಯೋಧರ ಶ್ರಮ ಸ್ಮರಣೀಯ ಎಂದರಲ್ಲದೇ ಕೇಂದ್ರ ಸರ್ಕಾರ ಜಾರಿಗೆ ತಂದ ಅಗ್ನಿ ಪಥ ಯೋಜನೆ ಮಹತ್ವದ್ದು ಯುವಕರು ಎಲ್ಲ ಸೇರ್ಪಡೆಯಾಗಬೇಕೆಂದರು.

- Advertisement -

ಸೇವಾ ಸಂಸ್ಥೆ ಅಧ್ಯಕ್ಷ ಬಸವರಾಜ ಕಡಾಡಿ ಅವರು ಹುತಾತ್ಮ ಯೋಧ ಜೋತೆಪ್ಪ ಗುಂಡಪ್ಪಗೋಳ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಮೂಡಲಗಿ ತಾಲೂಕ ಮಾಜಿ ಸೈನಿಕರ ಸಂಘ ಅಧ್ಯಕ್ಷ ರಾಮಚಂದ್ರ ಮಾಳೆದವರ,ಪರಪ್ಪ ರಾಚನವರ,ಹಣಮಂತ ಕುರಬೇಟ,ಮಲ್ಲಪ್ಪ ಕಂಕಣವಾಡಿ,ರಾಜು ದಬಾಡಿ,ಈರಪ್ಪ ಮುತ್ನಾಳ,ಪದ್ಮವ್ವ ಪರಸನ್ನವರ,ಜಾಕೀರ ನದಾಫ,ಅನಿತಾ ಮಿರ್ಜಿ,ಮಾರತಿ ಸೂರನ್ನವರ,ಕೆಂಚಪ್ಪ ಡೂಗನ್ನವರ,ರಾಜಶೇಖರ ಮೇತ್ರಿ,ಸುರೇಶ ಗುಂಡಪ್ಪಗೊಳ ಸೇರಿದಂತೆ ಅನೇಕ ಯೋಧರು,ಮಾಜಿ ಸೈನಿಕರು ಉಪಸ್ಥಿತರಿದ್ದರು.

ಪುಂಡಲೀಕ ನದಾಫ ಸ್ವಾಗತಿಸಿದರು,ಅರವಿಂದ ಚೌಡಪ್ಪನವರ ಕಾರ್ಯಕ್ರಮ ನಿರೂಪಿಸಿದರು,ರಮೇಶ ಚೌಗಲಾ ವಂದಿಸಿದರು.

- Advertisement -
- Advertisement -

Latest News

ಕಿವುಡ ಮಕ್ಕಳ ಸಂಸ್ಥೆಗೆ ರಾಜ್ಯ ಪ್ರಶಸ್ತಿ

ಕರ್ನಾಟಕ ಸರ್ಕಾರವು ವಿಕಲಚೇತನ ಸೇವಾ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ 2023ನೇ ಸಾಲಿನ ಉತ್ತಮ ಸಂಸ್ಥೆಯ ವಿಭಾಗದಡಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್,...
- Advertisement -

More Articles Like This

- Advertisement -
close
error: Content is protected !!
Join WhatsApp Group