spot_img
spot_img

ರೂ. 4.30 ಲಕ್ಷದ ಮೌಲ್ಯದ ಮೇಕೆಗಳ ಕಳ್ಳತನ

Must Read

ಬೀದರ –  ಗಡಿಯ ಬೀದರ್ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹೊನ್ನಡ್ಡಿ ಗ್ರಾಮದ  ತುಕಾರಾಮ ತಂದೆ ಮಾಣಿಕ್  ಅವರ ಮೇಕೆಗಳ ಕೊಟ್ಟಿಗೆಯಿಂದ ಸುಮಾರು 43 ಮೇಕೆಗಳನ್ನು  ಕಳ್ಳತನ ಮಾಡಿದ ಘಟನೆ ನಡೆದಿದೆ.

ತುಕಾರಾಮ ಎಂಬುವರಿಗೆ ಸೇರಿದ ಮೇಕೆಗಳನ್ನು  ಮಧ್ಯರಾತ್ರಿ ಹಾಗೂ ನಸುಕಿನ ವೇಳೆ 43 ಮೇಕೆಗಳನ್ನು ಕಳ್ಳತನ ಮಾಡಲಾಗಿದ್ದು ಅದರ ಮೌಲ್ಯ ಅಂದಾಜು ಸುಮಾರು 4.30 ಲಕ್ಷ ರೂ. ಎನ್ನಲಾಗಿದೆ.

ಭಾನುವಾರ ರಾತ್ರಿ  ಕಳ್ಳರು 43 ಮೇಕೆಗಳನ್ನು ಕೊಟ್ಟಿಗೆಯಿಂದ ತೆಗೆದುಕೊಂಡು ಹೋಗಿದ್ದು ಕುತೂಹಲಕಾರಿಯಾಗಿದೆ ಅಷ್ಡೇ ಅಲ್ಲ ಅತಿಸಾರದಿಂದ ಬಳಲುತ್ತಿದ್ದ  ಮೇಕೆಗಳನ್ನು ದುಷ್ಕರ್ಮಿಗಳು ಬಿಟ್ಟು ಹೋಗಿದ್ದಾರೆ. ಮೇಕೆಗಳನ್ನು ಕೊಂಡೊಯ್ಯುವಾಗ ಪ್ರಾಣಿಗಳು ಸದ್ದು ಮಾಡದ ಕಾರಣ ಕಳ್ಳರು ಮೇಕೆಗಳನ್ನು ಕದ್ದಮೇಲೆ  ಮರೆಮಾಚಿದ್ದಾರೆ ಎಂದು ಶಂಕಿಸಲಾಗಿದೆ. ಮರುದಿನ ಬೆಳಗ್ಗೆ ಮೇಕೆಗಳು ಕಾಣೆಯಾಗಿದ್ದನ್ನು ಕಂಡು  ತುಕಾರಾಮ ಬಗದಲ್ ಪೊಲೀಸ್ ಠಾಣೆಗೆ ಬಂದು ಎಫ್‌ಐಆರ್ ದಾಖಲಿಸಿದ್ದಾರೆ.

ಸ್ಥಳಕ್ಕೆ ಡಿವೈಸ್ ಪಿ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ನಿಪ್ಪಾಣಿ ನಗರಸಭೆಯ ಮೇಲಿನ ಭಗವಾಧ್ವಜ ತೆರವುಗೊಳಿಸಲು ಗಡಾದ ಆಗ್ರಹ

ಮೂಡಲಗಿ - ಸುಮಾರು ೩೧ ವರ್ಷಗಳಿಂದ ಬೆಳಗಾವಿಯ ನಿಪ್ಪಾಣಿ ನಗರಸಭೆಯ ಕಟ್ಟಡದ ಮೇಲೆ ಅನಧಿಕೃತವಾಗಿ ಹಾರಾಡುತ್ತಿರುವ ಭಗವಾ ಧ್ವಜವನ್ನು ತೆರವುಗೊಳಿಸಬೇಕು ಎಂದು ಮನವಿ ಸಲ್ಲಿಸಿ ಒಂದು...
- Advertisement -

More Articles Like This

- Advertisement -
close
error: Content is protected !!