ಹೆಂಗಸರ ಹೋಲುವ ಮಂಗನ ತಲೆಯವರು
ಸಂಗಮಕೆ ಬಂದು ನಿಂದಿಹರು ರಾಜ್ಯವನು
ನುಂಗಿ ಬಿಟ್ಟಾರು ಸರ್ವಜ್ಞ
ನಮ್ಮ ದೇಶಕ್ಕೆ ಇಂಗ್ಲೀಷರು ಬರುವ ಮುನ್ಸೂಚನೆಯನ್ನು
ಸರ್ವಜ್ಞ ಕಾಲಜ್ಞಾನದಲ್ಲಿ ಹೇಳಿದ್ದಾನೆ ಹೆಂಗಸರ ಮುಖ ಮತ್ತು
ಕೋತಿಯ ಹೋಲುವ ಜನರು ನಮ್ಮ ನಾಡಿಗೆ ಬಂದು
ಇಡೀ ದೇಶವನ್ನು ಆಕ್ರಮಿಸುತ್ತಾರೆ . ಅವರೆ ಇಂಗ್ಲೀಷರು.
ಕಾಲು ಕುಪ್ಪಸದವರು ಮೇಲೆ ಟೊಪ್ಪಿಗೆಯವರು
ಬಾಲೆಯರ ಮುಖದ ಕಪಿಗಳು ಶ್ರೀರಂಗ
ವಾಳ ಹೋದಾರು ಸರ್ವಜ್ಞ
ಕಾಲಿನಲ್ಲಿ ಕಾಲುಚೀಲ socks ಹಾಕಿಕೊಂಡು boot ಧರಿಸುವ ಮತ್ತು ತಲೆಮೇಲೆ ಟೊಪ್ಪಿಗೆ ಅಂದರೆ hat ಧರಿಸುವ ಹೆಂಗಸರ ಮುಖದ ಜನರು ಕನ್ನಡ ನಾಡಿನ ಶ್ರೀರಂಗ ಪಟ್ಟಣ ಆಳುತ್ತಾರೆ ಎಂದು ಭವಿಷ್ಯನುಡಿದಂತೆ ಶ್ರೀರಂಗ ಪಟ್ಟಣದ ಟಿಪ್ಪುವನ್ನು ಕೊಂದು ಕನ್ನಡ ನಾಡನ್ನು ಆಕ್ರಮಿಸುತ್ತಾರೆ .
ಎತ್ತು ಇಲ್ಲದೆ ಬಂಡಿ ಒತ್ತೊತ್ತಿ ನಡೆಸುವರು
ಸುತ್ತಲೂ ರಾಜ್ಯವಾಳುವರು ಕಡೆಯಲ್ಲಿ
ಮೃತ್ಯು ಹೊಂದುವರು ಸರ್ವಜ್ಞ
ಎತ್ತು ಇಲ್ಲದೆ ನಡೆಸುವ ಗಾಡಿ ಎಂದರೆ ರೈಲನ್ನು ನೀರಿನ
ಹಬೆಯಿಂದ ಒತ್ತೊತ್ತಿ ನಡೆಸುವರು ಮತ್ತು ಸುತ್ತೆಲ್ಲ ರಾಜ್ಯ
ಆಳುವರು ಎಂದರೆ ಇಡೀ ಜಗತ್ತನ್ನು ಆಕ್ರಮಿಸುವರು. ಅವರದು ಸೂರ್ಯಮುಳುಗದ ಸಾಮಾಜ್ಯಎಂಬ ವಾಡಿಕೆ ಇದೆ. ಹಾಗೆ ಕಡೆಗೆ ನಾಶವಾಗುವರು ಎಂದರೆ ವಶಪಡಿಸಿಕೊಂಡ ದೇಶಗಳನ್ನು ವಾಪಾಸು ಅವರಿಗೆ ಕೊಟ್ಟು ಹೋಗುವರು ಎಂಬುದು ಆತನ ಭವಿಷ್ಯ ವಾಣಿ ನಿಜವಾಗಿದೆ.ಆತ ತ್ರಿಕಾಲ ಜ್ಞಾನಿಯಾಗಿದ್ದ ಎಂಬುದು ಇದರಿಂದ ತಿಳಿಯುತ್ತದೆ.
ಎನ್.ಶರಣಪ್ಪ ಮೆಟ್ರಿ ಗಂಗಾವತಿ