ಲಿಂಗದ ಮೈವೆಳಗು ಮಂಗಳದ ಚಿದ್ಭಸ್ಮ
ಹಿಂಗದೆ ಧರಿಸಿದವನಿಗೆ ಶಿವನು ಚಿ-
ದಂಗವಾಗಿಕ್ಕು ಸರ್ವಜ್ಞ
ಭಸ್ಮದ ಮಹತ್ವವನ್ನು ಸರ್ವಜ್ಞ ಈ ತ್ರಿಪದಿಯಲ್ಲಿ ತಿಳಿಸಿದ್ದಾನೆ.
ಆಕಳ ಒಣಗಿದ ಸಗಣಿಯ ಕುರುಳು ಸುಟ್ಟು ಮಾಡಿದ ಬೂದಿಯಿಂದ ಭಸ್ಮ ತಯಾರಿಸುತ್ತಾರೆ. ಇದರಲ್ಲಿ ಸಂಪೂರ್ಣ
ಇಂಗಾಲದ ಅಣುಗಳು ಇರುತ್ತವೆ. ಈ ಇಂಗಾಲದ ಅಣುಗಳು
ಮೇಲಿಂದ ಕೆಳಗಿಳಿಯುವ ವಿಶ್ವಶಕ್ತಿಯ ನ್ಯೂಟ್ರಾನ್ ಅಣುಗಳನ್ನು ಹೀರಿಕೊಳ್ಳುತ್ತದೆ.ಅದನ್ನು ಧರಿಸುವುದರಿಂದ
ದೇಹಕ್ಕೆ ನಮಗರಿವಿಲ್ಲದಂತೆ ವಿಶ್ವಶಕ್ತಿಯನ್ನು ಸೇರಿಸುತ್ತದೆ. ಇದರಿಂದ ನಮ್ಮ ದೇಹಕ್ಕೆ ನ್ಯೂಟ್ರಾನ್ ಕಣಗಳು
ಸೇರಿ ನಮ್ಮಲ್ಲಿರುವ ರೋಗಾದಿ ಬಾಧೆಗಳನ್ನು ಕಳೆದು ಸದಾ
ನವಚೈತನ್ಯವನ್ನು ಕೊಡುತ್ತದೆ. ಹೀಗೆ ಧರಿಸುವುದರಿಂದ
ಶಿವಕಳೆ ಶಿವಜ್ಞಾನ ಶಿವಕಾಯವಾಗುತ್ತದೆ. ಮತ್ತು ಶಿವಬೆಳಗು
ಮುಖದಲ್ಲಿ ಹೊಳೆಯುತ್ತದೆ. ವೈಜ್ಞಾನಿಕವಾಗಿ ಶರಣರು
ಕಂಡು ಹಿಡಿದು ಭಸ್ಮ ಧರಿಸಲು ಹೇಳಿದ್ದಾರೆ. ಅದನ್ನೆ
ಸರ್ವಜ್ಞ ತ್ರಿಪದಿಯಲ್ಲಿ ಹೇಳಿದ್ದಾನೆ.
ರುದ್ರನಕ್ಷಿಯ ಮಣಿಯ ಭದ್ರದಲಿ ಧರಿಸಿದಗೆ
ಹೊದ್ದಿರ್ದ ಪಾಪ ಹೋಗಲವ ಸಾಕ್ಷಾತು
ರುದ್ರನೇ ಅಕ್ಕು ಸರ್ವಜ್ಞ
ರುದ್ರಾಕ್ಷಿಗೆ ಕೂಡ ವಿಶ್ವಶಕ್ತಿಯನ್ನು ಹೀರಿಕೊಳ್ಳುವ ಗುಣವಿದೆ.
ಏಕೆಂದರೆ ಅದರ ಮೈತುಂಬ ಪಿರಮಿಡ್ಡಿನೋಪಾದಿ ಚೂಪಾದ
ಸಣ್ಣ ಸಣ್ಣ ಗುರುಳೆಯಂತೆ ಇರುತ್ತವೆ.ಅವು ವಿಶ್ವಶಕ್ತಿಯನ್ನು
ಹೀರಿಕೊಳ್ಳುತ್ತವೆ.ನಾವು ದೇಹದಲ್ಲಿ ಧರಿಸುವುದರಿಂದ
ಅವು ನಮ್ಮ ದೇಹದ ಉಷ್ಣದಿಂದ ನ್ಯೂಟ್ರಾನ್ ಆಗಿ ಬದಲಾಗಿ ನಮ್ಮದೇಹಕ್ಕೆ ಸೇರಿಸುತ್ತವೆ. ಆಗ ನಮ್ಮ ದೇಹದಲ್ಲಿ ನವಚೈತನ್ನ ಉಂಟಾಗುತ್ತದೆ. ದೇಹದ ಅನೇಕ ರೋಗಗಳು ತೊಲಗಿ ಪರಿಶುದ್ಧವಾಗುತ್ತದೆ.ಅದಕ್ಕೆ ಸರ್ವಜ್ಞ ರುದ್ರಾಕ್ಷಿ ಧರಿಸಿದರೆ ಎಲ್ಲ ಪಾಪ ತೊಲಗುತ್ತವೆ ಮತ್ತು ಶಿವಜ್ಞಾನ ಶಿವಕಳೆ ಉಂಟಾಗಿ ಸಾಕ್ಷಾತ್ ಶಿವನೆ ಆಗುಗುವನು ಎಂದು ಹೇಳಿದ್ದಾನೆ.
ರುದ್ರಾಕ್ಷಿ ಭಸಿತವನು ಹೊದ್ದಿರಲು ದೇಹದೊಳ
ಗಿದ್ದ ಪಾಪಗಳು ಬಯಲಾಗಿ ಶಿವನು ತಾ
ನಿದ್ದಲ್ಲಿ ಬರುವ ಸರ್ವಜ್ಞ
ಶಿವನೆಂದರೆ ಮಂಗಳಕರವಾದವನು.ವಿಭೂತಿ ರುದ್ರಾಕ್ಷಿ
ಧರಿಸಿದರೆ ದೇಹ ಶಿವದೇಹ ಆಗುತ್ತದೆ.ಏಕೆಂದರೆ ಎಲ್ಲಾ
ಕಡೆಗೆ ತುಂಬಿರುವ ವಿಶ್ವಶಕ್ತಿ ವಿಭೂತಿರುದ್ರಾಕ್ಷಿಗಳ ಮುಖಾಂತರ ನಮ್ಮ ದೇಹ ಸೇರುತ್ತದೆ. ವಿಶ್ವಶಕ್ತಿಯೇ ಶಿವನು.ಹೀಗಾಗಿ ಆ ಶಿವನು ನೀನಿದ್ದಲ್ಲಿಗೆ ಬರುವ ಎಂಬ ಸರ್ವಜ್ಞನ ಮಾತು ಅಕ್ಷರಸ್ಯ ಸತ್ಯ.
ಎನ್ ಶರಣಪ್ಪ ಮೆಟ್ರಿ ಗಂಗಾವತಿ 9449030990