spot_img
spot_img

ಸರ್ವಜ್ಞ ಸಾರ ; ಯೋಗಿಯ ಯೋಗ್ಯತೆ

Must Read

- Advertisement -

ಮೊಲೆಯಿಲ್ಲದಾ ಆವು ತಲೆಯಲ್ಲಿ ಕರೆದಿಹುದು                ಸಲೆ ನೆಲೆಯನರಿದು ಕರೆದುಂಬ ಯೋಗಿಯ    ಕುಲ‌ನಾಶವೆಂದ – ಸರ್ವಜ್ಞ

ಮೊಲೆಯಿಲ್ಲದ ಆಕಳು ತಲೆಯಲ್ಲಿ‌ ಕರೆದಿಹುದು‌ ಎಂದರೆ
ಶಿರದಲ್ಲಿಯ ಸಹಸ್ರಾರ ಚಕ್ರದಿಂದ ಸ್ರವಿಸುವ ಮೆಲೋಟೊನ್ ರಸ.  ಇದು ಧ್ಯಾನಮಾಡುವುದರಿಂದ ಅಥವಾ ಶಿವಯೋಗ ಮಾಡುವುದರಿಂದ ಮೆದುಳಿನಲ್ಲಿ‌ ಬಿಡುಗಡೆ ಆಗುತ್ತದೆ.ಅದು ಬಿಡುಗಡೆಯಾದರೆ ಮಾನಸಿಕ ಆನಂದ‌ ಮತ್ತು‌ ದೈಹಿಕ‌ ಆರೋಗ್ಯ‌ ಉಂಟಾಗುತ್ತದೆ. ಇದನ್ನೆ ಕಡಕೋಳದ‌ ಮಡಿವಾಳಪ್ಪ ಬರಿತಾರ.

ಎಂಥ ಆಕಳ ಕೊಟ್ಟಾ ಗುರು ಕಾಮಧೇನು.ಹಗಲು‌ ಇರುಳು ಹಾಲು ಕರೆವುದು‌ ಒಂದೆ ಸವನ.
ಇಂಥ ಅಧ್ಯಾತ್ಮ‌ಶಕ್ತಿ‌ ಪಡೆದ ಯೋಗಿಯ ಇಂದ್ರಿಯಗಳ ಕುಲವೆಲ್ಲ‌ ನಾಶವಾತ್ತವೆ ಎಂದು ಸರ್ವಜ್ಞ ಪ್ರತಿಮಾ‌‌ ರೂಪದಲ್ಲಿ
ಹೇಳಿದ್ದಾನೆ

- Advertisement -

ಆಗು ಹೋಗುಗಳಿಲ್ಲ ಮೇಗು ಕೀಳುಗಳಿಲ್ಲ
ಭೋಗಗಳು ಅಲ್ಲಿ‌ ಮೊದಲಿಲ್ಲ ಯೋಗಿಗೆ
ರಾಗವೇ ಇಲ್ಲ ಸರ್ವಜ್ಞ

ಯೋಗಿಗೆ ಆಗು ಹೋಗುಗಳಿಲ್ಲ‌ ಎಂದರೆ‌ ಹುಟ್ಟುಸಾವಿನ
ಭವಚಕ್ರದಿಂದ ಬಿಡುಗಡೆಯಾಗುತ್ತಾನೆ. ಮೇಗು ಕೀಳುಗಳಿಲ್ಲ
ಎಂದರೆ ಆತನಿಗೆ ಸಮಸ್ತ‌ ಜೀವಕೋಟಿಗಳು ಶಿವನಂಶವಾಗಿ
ಕಾಣುತ್ತವೆ ಮತ್ತು ಸಮಾನತ್ವ ಭಾವ ಆತನಲ್ಲಿ ಬರುತ್ತದೆ.
ಆತನಲ್ಲಿ ಎಲ್ಲ ಭೋಗಾಸಕ್ತಿ‌ ಮೊದಲು ನಾಶವಾಗುತ್ತದೆ.
ರಾಗವೇ ಇಲ್ಲ ಎಂದರೆ ಯಾವುದರ ಮೇಲೆ ಮೋಹಮಮತೆ
ಅನುರಾಗಗಳಿಲ್ಲದೆ ವೈರಾಗಿಯಾಗುತ್ತಾನೆ ಎಂದು ಸರ್ವಜ್ಞ
ಯೋಗಿಯ ಗುಣಲಕ್ಚಣಗಳನ್ನು‌ ಹೇಳಿದ್ದಾನೆ

ಮೂರನ್ನು ಆರನ್ನು ಬೇರಿರ್ದ ಏಳನ್ನು
ತೋರಿರ್ದ ಎಂಟನ್ನು ಹರಿದಡೆ ಶಿವಲೋಕ
ಸೂರೆ‌ ಕಾಣಯ್ಯ ಸರ್ವಜ್ಞ

- Advertisement -

ಈ ತ್ರಿಪದಿಯಲ್ಲಿ ಆಳವಾದ ಅರ್ಥ ಇದೆ.ಮೂರನ್ನು ಎಂದರೆ
ತ್ರಿಗುಣಗಳು ( ಸಾತ್ವಿಕ,ಗುಣ,ರಾಜಸಗುಣ, ತಾಮಸಗುಣ) ತ್ರಿಮಲಗಳು(ಆಣಮಮಲ, ಮಾಯಾಮಲ, ಕಾರ್ಮಿಕಮಲ) ತ್ರಿಕರ್ಮಗಳು(ಸಂಚಿತ ಕರ್ಮ ಪ್ರಾರಬ್ಧ ಕರ್ಮ, ಆಗಾಮಿ ಕರ್ಮ) ತ್ರಿಪುರ ಅಥವಾ ದೇಹತ್ರಯ(ಸ್ಥೂಲ,ಸೂಕ್ಷ್ಮ, ಕಾರಣ)

ಮತ್ತು‌ ಆರನ್ನು ಎಂದರೆ ಅರಿಷಡ್ವರ್ಗ(ಕಾಮ,‌ಕ್ರೋಧ, ಮೋಹ
ಮದ, ಲೋಭ , ಮತ್ಸರ) ಬೇರಿನ್ನು ಏಳನ್ನು ಎಂದರೆ ಸಪ್ತವ್ಯಸನಗಳು (ಜೂಜು,ಮಾಂಸಾಹಾರ, ಮದ್ಯಪಾನ, ವೇಶ್ಯಾಸಂಗ, ಪ್ರಾಣಿ ಬೇಟೆ, ಚೋರತನ , ಪರಸ್ತ್ರೀಸಂಗ) ತೋರಿರ್ದ ಎಂಟನ್ನು ಎಂದರೆ ಅಷ್ಟಮದಗಳು (ಕುಲಮದ,ಛಲಮದ,ಧನಮದ,ರೂಪಮದ,ಯೌವನಮದ, ವಿದ್ಯಾಮದ,ರಾಜಮದ, ತಪೋಮದ)

ಮೇಲಿನ‌ ಎಲ್ಲವನ್ನು ಕಳೆದುಕೊಂಡರೆ ಶಿವಲೋಕವನ್ನೆ
ಕಳ್ಳತನಮಾಡಬಹುದು ಎಂದರೆ ಪಡೆಯಬಹುದು ಎಂದು
ಸರ್ವಜ್ಞ ಗಹನವಾದ ಅರ್ಥವನ್ನು ತುಂಬಿದ್ದಾನೆ.

ಎನ್.ಶರಣಪ್ಪ‌ ಮೆಟ್ರಿ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group