ಬೀದರ – ಮೊದಲಿನಿಂದಲೂ ಚಿತ್ರದುರ್ಗದ ಮುರುಘಾ ಶರಣರ ವಿರುದ್ಧ ಷಡ್ಯಂತ್ರ ನಡೆಯುತ್ತ ಬಂದಿದೆ ಈಗ ಅದು ಬಹಿರಂಗವಾಗಿದೆ ಇದನ್ನು ಭಕ್ತ ಸಮೂಹ ಅರ್ಥ ಮಾಡಿಕೊಳ್ಳಬೇಕು ಎಂದು ಬಸವ ಕೇಂದ್ರದ ಅಧ್ಯಕ್ಷ ಕಿರಣ ಖಂಡ್ರೆ ಹೇಳಿದರು.
ಮುರುಘಾ ಸ್ವಾಮಿಗಳ ವಿರುದ್ಧ ಅತ್ಯಾಚಾರ ಆರೋಪ ಬಂದ ಹಿನ್ನೆಲೆಯಲ್ಲಿ ಅವರು ಪೀಠ ತ್ಯಾಗ ಮಾಡಬೇಕೆಂಬ ಒತ್ತಾಯಗಳ ಕಾರಣ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ದೇಶಾದ್ಯಂತ ಇರುವ 75% ರಾಜಕಾರಣಿಗಳು ಒಂದಲ್ಲ ಒಂದು ಆರೋಪ ಎದುರಿಸುತ್ತಿದ್ದಾರೆ ಹಾಗಂತ ಅವರು ರಾಜೀನಾಮೆ ನೀಡಿಲ್ಲ. ಗೋಧ್ರಾ ಕಾಂಡವಾದಾಗ ಆಗಿನ ಮುಖ್ಯಮಂತ್ರಿಗಳು ರಾಜಿನಾಮೆ ನೀಡಿದರಾ ಎಂದು ಪ್ರಶ್ನಿಸಿದ ಕಿರಣ ಖಂಡ್ರೆ ಆರೋಪ ಬಂದ ತಕ್ಷಣ ಯಾರೂ ಅಪರಾಧಿಯಾಗೋದಿಲ್ಲ. ಕೋರ್ಟಿನಲ್ಲಿ ವಿಚಾರಣೆಯಾಗಿ ನಿರ್ಧಾರವಾಗಬೇಕು ಎಂದರು
ಮುರುಘಾ ಸ್ವಾಮಿಗಳು ಈ ದೇಶದ ಕಾನೂನಿಗೆ ಗೌರವ ಕೊಟ್ಟು ಶರಣ ಆಗಿದ್ದಾರೆ ನಾ ಎಲ್ಲೊ ಓಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ. ಅವರ ವಿರುದ್ಧ ಯಾಕೆ ಚಿತ್ರದುರ್ಗದಲ್ಲಿ ಪ್ರಕರಣ ದಾಖಲೆ ಆಗಿಲ್ಲ.. ಮೈಸೂರಿನಲ್ಲಿ ಹೋಗಿ ಪ್ರಕರಣ ದಾಖಲೆ ಮಾಡಿದ್ದಾರೆ ಯಾಕೆ ಎಂದು ಅವರು ಪ್ರಶ್ನೆ ಮಾಡಿದರು.
ಮುರುಘಾ ಸ್ವಾಮಿಗಳ ವಿರುದ್ಧ ಸಂಚು ನಡೆದಿದೆ ಎಂದ ಅವರು, ಎರಡು ತಿಂಗಳ ನಂತರ ಎರಡನೇ ಸಲ ಆರೋಪ ಮಾಡಿದ್ದಾರೆ ಇವರು ಆಗಲೇ ಯಾಕೆ ಮಾಡಲಿಲ್ಲ ? ಇಷ್ಟು ದಿನ ಎಲ್ಲಿ ಹೋಗಿದ್ದರು? ಶರಣರ ವಿರುದ್ಧ ಮೊದಲೇ ಷಡ್ಯಂತ್ರ ನಡೆದಿತ್ತು ಈಗ ಅದು ಬಹಿರಂಗವಾಗಿದೆ ಎಂದು ಆರೋಪಿಸಿದರು.
ವರದಿ: ನಂದಕುಮಾರ ಕರಂಜೆ,ಬೀದರ