spot_img
spot_img

ನಾಡಿನೆಲ್ಲೆಡೆ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿರುವ ತಾಲೂಕಿನ ಸಾಹಿತಿಗಳ ಸಾಹಿತ್ಯಾವಲೋಕನ ಅಗತ್ಯ- ಆನಂದ ಮಾಮನಿ

Must Read

- Advertisement -

ಸವದತ್ತಿ: ಸವದತ್ತಿ ತಾಲೂಕಿನ ಹಿರಿಯ ಸಾಹಿತಿಗಳು ಇಂದು ನಾಡಿನಾದ್ಯಂತ ತಮ್ಮ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡುತ್ತಿರುವರು. ಮುಂಬರುವ ದಿನಗಳಲ್ಲಿ ಅವರ ಸಾಹಿತ್ಯವನ್ನು ಇಂದಿನ ಪೀಳಿಗೆಗೆ ತಿಳಿಸುವ ಜೊತೆಗೆ ಅವರನ್ನು ಗೌರವಿಸುವ ಚಟುವಟಿಕೆಗಳು ಸಾಹಿತ್ಯ ಪರಿಷತ್ತಿನಿಂದ ಜರುಗಲಿ. ಅದಕ್ಕೆ ಸಂಪೂರ್ಣ ಸಹಾಯ ಸಹಕಾರ ನೀಡುವೆನು. ಮುಂಬರುವ  ಯುಗಾದಿ ಕಾರ್ಯಕ್ರಮವನ್ನು ತಾಲೂಕ ಕ್ರೀಡಾಂಗಣದಲ್ಲಿ ಆಯೋಜಿಸುತ್ತಿರುವ ಕಾರಣ ಎಲ್ಲರೂ ಆಗಮಿಸಬೇಕು. ನಮ್ಮ ಕನ್ನಡ ಭಾಷೆ ನೆಲ, ಜಲ, ಸಂಸ್ಕೃತಿಯನ್ನು ಎಲ್ಲ ಕನ್ನಡಪರ ಸಂಘಟನೆಗಳ ಜೊತೆಗೆ ಕನ್ನಡ ಸಾಹಿತ್ಯ ಪರಿಷತ್ತು ಸೇರಿ ಸಾಹಿತ್ಯದ ವಿವಿಧ ಪ್ರಕಾರಗಳ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ನಡೆಯುವಂತಾಗಲಿ” ಎಂದು ವಿಧಾನಸಭೆ ಉಪಸಭಾಧ್ಯಕ್ಷ ಹಾಗೂ ಶಾಸಕರಾದ ಆನಂದ ಮಾಮನಿ ತಿಳಿಸಿದರು.

ಅವರು ಸ್ಥಳೀಯ ಎಸ್.ಜಿ.ಶಿಂತ್ರಿ ಆಂಗ್ಲ ಮಾಧ್ಯಮ ಶಾಲೆಯ ಶ್ರೀ ಚಂದ್ರಶೇಖರ ಮಾಮನಿ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸವದತ್ತಿ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ಮತ್ತು ೨೦೨೧-೨೬ನೇ ಅವಧಿಯ ಸಾಹಿತ್ಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.

ಕಲ್ಮಠದ ಶ್ರೀ ಶಿವಲಿಂಗ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿ “ಕನ್ನಡ ಸಾಹಿತ್ಯಕ್ಕೆ ಸವದತ್ತಿ ತಾಲೂಕಿನ ಸಾಹಿತಿಗಳ ಕೊಡುಗೆ ಇದೆ. ರಟ್ಟರ ಕಾಲದ ಸಾಹಿತ್ಯದಿಂದ ಹಿಡಿದು ಇಂದಿನ ಪೀಳಿಗೆಯ ಸಾಹಿತಿಗಳವರೆಗೂ ತನ್ನದೇ ಆದ ಪರಂಪರೆ ಇದ್ದು ಸಮರ್ಥ ಅಧ್ಯಕ್ಷರಾಗಿ ಯಾಕೊಳ್ಳಿಯವರು ಮುಂದಿನ ದಿನಗಳಲ್ಲಿ ನಿತ್ಯ ವಿನೂತನ ಕಾರ್ಯಕ್ರಮಗಳನ್ನು ನಡೆಸುವಂತಾಗಲಿ” ಎಂದು  ಆಶೀರ್ವಚನದಲ್ಲಿ ತಿಳಿಸಿದರು.

- Advertisement -

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, “ಕನ್ನಡ ಸಾಹಿತ್ಯ ಪರಂಪರೆ ಬೆಳೆದು ಬಂದ ಇತಿಹಾಸವನ್ನು ತಿಳಿಸುತ್ತ ಬದಲಾಗುತ್ತಿರುವ ತಂತ್ರಜ್ಞಾನವನ್ನು ಕನ್ನಡ ಸಾಹಿತ್ಯ ಪರಿಷತ್ತು ಅಳವಡಿಸುತ್ತಿದ್ದು ಮುಂದಿನ ದಿನಗಳಲ್ಲಿ ಸದಸ್ಯತ್ವದಿಂದ ಹಿಡಿದು ಅನೇಕ ಕಾರ್ಯಗಳು ಅಂತರ್ಜಾಲ ತಾಣದಲ್ಲಿ ಮೂಡಿ ಬರುತ್ತವೆ. ಮಹಿಳಾ ಸಾಹಿತಿಗಳು ಕೂಡ ಮುಂಬರುವ ದಿನಗಳಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿ ಬರಲಿ. ವಿಕಲಚೇತನ ಸಾಹಿತ್ಯ ಚಟುವಟಿಕೆಗಳು ಕೂಡ ನಡೆಯುವಂತಾಗಲಿ. ಈಗಾಗಲೇ ದಡೇರಕೊಪ್ಪದಲ್ಲಿ ಶಂಭಾ ಜೋಶಿಯವರ ಹೆಸರಿನ ಸಭಾಭವನ ನಿರ್ಮಾಣವಾಗುತ್ತಿದ್ದು ಮುಂದಿನ ದಿನಗಳಲ್ಲಿ ಸವದತ್ತಿಯಲ್ಲಿ ಸಾಹಿತ್ಯ ಭವನ ನಿರ್ಮಾಣಕ್ಕೆ ಅನುಕೂಲ ಒದಗಿ ಬರಲಿ”ಎಂದು ಆಶಿಸಿದರು.

ಧಾರವಾಡ ಆಕಾಶವಾಣಿ ನಿರ್ದೇಶಕರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಡಾ.ಬಸು ಬೇವಿನಗಿಡದ ಮಾತನಾಡಿ, “ಇಂದು ತಾವೆಲ್ಲ ನನಗೆ ನೀಡಿದ ಸನ್ಮಾನ ನನ್ನ ಸ್ವಂತ ತಾಲೂಕಿನಲ್ಲಿ ನನ್ನವರನ್ನೆಲ್ಲ ನೋಡುವ ಭಾಗ್ಯ ಮರೆಯಲಾಗದ್ದು, ಸಾಹಿತ್ಯದ ನುಡಿ ಬಂಗಾರ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಓದುವುದನ್ನು ರೂಢಿಸಿಕೊಳ್ಳಬೇಕು. ನಮ್ಮವರ ಒಡನಾಟ ಸದಾ ಹೀಗೆಯೇ ಇರಲಿ. ಮುಗಿಯದ ಸಾಹಿತ್ಯನಮ್ಮದಾಗಲಿ. ಯುವಪೀಳಿಗೆಯು ಕೂಡ ಈ ದಿಸೆಯಲ್ಲಿ ಮುಂದುವರೆಯಲಿ” ಎಂದು ಸನ್ಮಾನಪರ ನುಡಿಗಳನ್ನಾಡಿದರು.

- Advertisement -

ಪ್ರಾಸ್ತಾವಿಕವಾಗಿ ಮಾತನಾಡಿದ ನಿಕಟಪೂರ್ವ ಅಧ್ಯಕ್ಷರಾದ ಸಿ.ಬಿ.ದೊಡಗೌಡರ ಈ ಹಿಂದಿನ ಐದು ವರ್ಷಗಳ ಅವಧಿಯಲ್ಲಿ ಎಲ್ಲರ ಸಹಕಾರದಿಂದ ಮುನವಳ್ಳಿ, ಯರಗಟ್ಟಿ,ಸವದತ್ತಿಯಲ್ಲಿ ಸಾಹಿತ್ಯ ಸಮ್ಮೇಳನ ಮತ್ತು ವಿವಿಧ ರೀತಿಯ ಸಾಹಿತ್ಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಯಿತು. ತಮ್ಮೆಲ್ಲರ ಸಹಕಾರ ಮರೆಯಲಾಗದು” ಎಂದು ನುಡಿದರು.

ನೂತನ ಅಧ್ಯಕ್ಷರಾದ ವೈ.ಎಂ.ಯಾಕೊಳ್ಳಿ ಮಾತನಾಡಿ, “ಮುಂದಿನ ದಿನಗಳಲ್ಲಿ ಕನಿಷ್ಠ ತಿಂಗಳಿಗೆ ಒಂದು ಸಾಹಿತ್ಯ ಕಾರ್ಯಕ್ರಮ ಮತ್ತು ಸಾಹಿತಿಗಳ ಸಾಹಿತ್ಯದ ಅವಲೋಕನ ಜರುಗಿಸಲಾಗುವುದು” ಎಂದರು.

ಇದೇ ಸಂದರ್ಭದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಸಿ.ಬಿ.ದೊಡಗೌಡರ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷರಾದ ವೈ.ಎಂ.ಯಾಕೊಳ್ಳಿಯವರಿಗೆ ಅಧಿಕಾರ ಹಸ್ತಾಂತರ ಮಾಡಿದರು.ನಂತರ ನೂತನ ಘಟಕದ ಪದಾಧಿಕಾರಿಗಳಾದ ಗೌರವ ಕಾರ್ಯದರ್ಶಿಗಳಾದ ಬಿ.ಎನ್.ಹೊಸೂರ, ವೈ.ಬಿ.ಕಡಕೋಳ, ಗೌರವ ಕೋಶಾಧ್ಯಕ್ಷರಾದ ಜಿ.ವೈ.ಕರಮಲ್ಲಪ್ಪನವರ, ಪರಿಶಿಷ್ಟ ಜಾತಿ ಪ್ರತಿನಿಧಿಗಳಾದ ರಮೇಶ ಕಾಳೆ, ಬಿ.ಬಿ.ಜಾಬರ, ಪರಿಶಿಷ್ಟ ಪಂಗಡದ ಪ್ರತಿನಿಧಿಗಳಾದ ನಾಗೇಶ ನಾಯಕ, ಮಹಿಳಾ ಪ್ರತಿನಿಧಿಗಳಾದ ಶ್ರೀಮತಿ ಲಕ್ಷ್ಮೀ ಮಹಾದೇವ ಅರಿಬೆಂಚಿ,ಶ್ರೀಮತಿ ವಿಜಯಲಕ್ಷ್ಮೀ ಉಮೇಶ ದೊಡಮನಿ,ಸಂಘ ಸಂಸ್ಥೆಗಳ ಪ್ರತಿನಿಧಿಗಳಾದ ಕೆ.ಪಿ.ಅನಿಗೋಳ ಇತರೆ ಸದಸ್ಯರಾದ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರಾದ ಎಸ್.ವ್ಹಿ.ಬೆಳವಡಿ, ಮಾಧ್ಯಮ ಪ್ರತಿನಿಧಿಗಳಾದ ಬಸವರಾಜ ಶಿರಸಂಗಿ, ಉಪನ್ಯಾಸಕರಾದ ರಮೇಶ ಮುರಂಕರ,ಎಸ್.ಎಸ್.ವಾರೆಪ್ಪನವರ,ಕೆ.ಬಿ. ನರಗುಂದ, ಆನಂದ ಏಣಗಿ, ಮೋಹನ ಸರ್ವಿ,ಸೋಮು ಹೊಂಗಲ ಇವರಿಗೆ ಪೂಜ್ಯರಿಂದ ಅಧಿಕಾರ ಪದಗ್ರಹಣದ ಆಶೀರ್ವಾದವನ್ನು ನೀಡಲಾಯಿತು.

ವೇದಿಕೆಯಲ್ಲಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷರಾದ ಜಗದೀಶ ಶಿಂತ್ರಿ, ಪುರಸಭೆ ಅಧ್ಯಕ್ಷ ರಾಜಶೇಖರ ಕಾರದಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅದ್ಯಕ್ಷರಾದ ಬಿವಿಬಿ ನರಗುಂದ, ಪುರಸಭೆ ಉಪಾಧ್ಯಕ್ಷರಾದ ದೀಪಕ ಜಾನ್ವೇಕರ, ಕಸಾಪ ನಿಕಟಪೂರ್ವ ಅಧ್ಯಕ್ಷ ಸಿ.ಬಿ.ದೊಡಗೌಡರ, ಕಸಾಪ ನೂತನ ಅಧ್ಯಕ್ಷ ಡಾ.ವೈ.ಎಮ್.ಯಾಕೊಳ್ಳಿ. ಕ.ಸಾಪ.ಮಾಜಿ ಅಧ್ಯಕ್ಷ ಮೋಹನಗೌಡ.ಪಾಟೀಲ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವೈ.ಮೆಣಸಿನಕಾಯಿ, ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಹಂಜಿ ಮೊದಲಾದವರು ಉಪಸ್ಥಿತರಿದ್ದರು. ಎಸ್.ಎಸ್.ವಾರೆಪ್ಪನವರ ಕಾರ್ಯಕ್ರಮ
ನಿರೂಪಿಸಿದರು. ರಮೇಶ ಮುರಂಕರ ಸ್ವಾಗತಿಸಿದರು. ವೈ.ಬಿ.ಕಡಕೋಳ ವಂದಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group