spot_img
spot_img

ಶವ ಸಂಸ್ಕಾರಕ್ಕೆ ಜಾಗವಿಲ್ಲ ! ಪ್ರತಿಭಟನೆ ಮಾಡಿದ ದಲಿತ ಸಮುದಾಯ

Must Read

ಬೀದರ – ಶವ ಸಂಸ್ಕಾರಕ್ಕೆ ಜಾಗ ದೊರಕದ ಕಾರಣ ಇಲ್ಲಿನ ದಲಿತ ಸಮುದಾಯದವರು ಶವವನ್ನು ರಸ್ತೆಯಲ್ಲಿ ಇಟ್ಟು ಪ್ರತಿಭಟನೆ ಮಾಡಿದ ಘಟನೆ ಪಶುಸಂಗೋಪನೆ ಸಚಿವರ ತವರೂರು ಕ್ಷೇತ್ರದಲ್ಲಿ ನಡೆದಿದೆ.

ಶವಸಂಸ್ಕಾರ ಮಾಡುವ ಸ್ಥಳ ಮರಾಠಾ ಸಮಾಜಕ್ಕೆ ಸೇರಿದ ಜಮೀನಾಗಿದ್ದು ಅವರು ದಲಿತ ಮಹಿಳೆಯ ಶವಸಂಸ್ಕಾರ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ದಲಿತ ಮಹಿಳೆಯ ಶವವನ್ನು ರಸ್ತೆಯ ಮೇಲೆ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.

ನಾವು ಐವತ್ತು ವರ್ಷಗಳಿಂದ ದಲಿತ ಸಮಯದಾಯದ ಜನರು ಅಲ್ಲಿ ಶವಸಂಸ್ಕಾರ ಮಾಡುತ್ತಾ ಬಂದಿದ್ದೇವೆ. ಈಗ ಏಕಾಏಕಿ ಜಮೀನು ಮಾಲೀಕರು ಶವಸಂಸ್ಕಾರ ಮಾಡಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ತಮ್ಮ ಅಳಲು ತೋಡಿಕೊಂಡರು.

ಕಮಲ ನಗರ ತಾಲೂಕಿನ ತಪ್ಪಶ್ಯಾಳ ಗ್ರಾಮದಲ್ಲಿ ನಡೆದ ಘಟನೆ ನಡೆದಿದ್ದು, ಸ್ಥಳಕ್ಕೆ ಕಮಲ ನಗರ ಪೊಲೀಸ್ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಎರಡೂ ಸಮಯದಾಯದವರ ಜೊತೆ ಮಾತುಕತೆ ನಡೆಸಿದರೂ ಪ್ರಯೋಜನವಾಗದ ಕಾರಣ ಕೊನೆಗೆ ಶವವನ್ನು ಬೇರೆ ಜಾಗದಲ್ಲಿ ಸಂಸ್ಕಾರ ಮಾಡಲಾಯಿತು ಎಂದು ತಿಳಿದು ಬಂದಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!