ಇಲ್ಲಿ ದುಡ್ಡು ಕೊಟ್ಟರೆ ಏನು ಬೇಕಾದರೂ ಮಾಡುತ್ತಾರೆ !
ಬೀದರ: ರಾಜ್ಯದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ನೋಡಲೇ ಬೇಕಾದ ಭಯಾನಕ ಸ್ಟೋರಿ ಇದಾಗಿದ್ದು ಬೀದರ ತಹಶಿಲ್ದಾರರ ಕಚೇರಿಯಲ್ಲಿ ಹಣ ಕೊಟ್ಟರೆ ಜಮೀನಿಗೆ ಜಮೀನನ್ನೇ ನುಂಗಿ ಹಾಕಬಹುದು ಎಂಬ ಗಂಭೀರ ಆರೋಪವನ್ನು ವೆಂಕಟರಾವ್ ಸೇರಿಕಾರ ಎಂಬ ಹಿಪ್ಪಳಗಾಂವ ಗ್ರಾಮದ ರೈತ ಮಾಡಿದ್ದಾರೆ.
ರಾಜ್ಯ ಸರ್ಕಾರ ರೈತರ ಹಿತಾಸಕ್ತಿ ಕಾಪಾಡುವುದು ರೈತರ ಬೆನ್ನೆಲುಬು ಆಗಿ ಕೆಲಸ ಮಾಡುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದ ರಾಮಯ್ಯ ಹೇಳುತ್ತಾರೆ. ಇನ್ನೊಂದು ಕಡೆ ಬೀದರ ಜಿಲ್ಲೆಯ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತವರೂರಾದ ಬೀದರ ನಲ್ಲಿ ರೈತರ ಗೋಳು ಸಚಿವರ ಕಣ್ಣಿಗೆ ಕಾಣುವುದಿಲ್ಲ ಎಂಬುದು ಈ ಪ್ರಕರಣದಿಂದ ನಿಜವಾಗಿದೆ.
ಬೀದರ ತಹಶಿಲ್ದಾರರ ಕಚೇರಿಯಲ್ಲಿ ದುಡ್ಡು ಕೊಟ್ಟರೆ ಮಾತ್ರ ಕೆಲಸ ದುಡ್ಡು ಕೊಡುವುದಿಲ್ಲ ಅಂದರೆ ಆ ರೈತರು ಮತ್ತು ಸಾರ್ವಜನಿಕರ ಕೆಲಸ ಆಗುವುದಿಲ್ಲ. ಒಂದು ವರ್ಷದಿಂದ ಒಬ್ಬ ರೈತ ತನ್ನ ಹೊಲದ ಫೊಡಿ ಮಾಡಿ ಕೊಡಲು ತಹಶಿಲ್ದಾರರ ಕಚೇರಿಯಲ್ಲಿ ಕೊಟ್ಟಿದ್ದರೂ ಇನ್ನೂ ಕೆಲಸವಾಗಿಲ್ಲ ಎಂದು ರೈತ ಕಣ್ಣೀರ ಹಾಕಿದ ಘಟನೆ ನಡೆಯಿತು.
ಬಹಳ ಆಕ್ರೋಶದಿಂದ ಮಾತನಾಡಿದ ಅವರು, ದುಡ್ಡು ಕೊಟ್ಟರೆ ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾಡಿ ಕೊಡಲು ಕೂಡ ಈ ಬೀದರ ತಹಶಿಲ್ದಾರರ ಕಚೇರಿ ಅಧಿಕಾರಿಗಳು ಹೇಸುವುದಿಲ್ಲ ಇಲ್ಲಿ ಭಾರಿ ಗೊಲಮಾಲ ನಡೆಯುತ್ತದೆ ಎಂದು ಗಂಭೀರ ಆರೋಪ ಮಾಡಿದರು.
ಬೀದರ ತಹಶಿಲ್ದಾರರ ಕಚೇರಿ ಮತ್ತು ಸರ್ವೇ ಇಲಾಖೆ ಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತದೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ ಎಂಬುದು ಬೀದರ ರೈತ ತನ್ನ ಕಷ್ಟ ಮಾದ್ಯಮ ಮುಂದೆ ತನ್ನ ಕಷ್ಟ ಹೇಳಿ ಕೊಂಡಾಗ ಗೊತ್ತಾಗುತ್ತದೆ. ರೈತನ ನೋವು ರಾಜ್ಯದ ಸರ್ಕಾರದ ಕಣ್ಣಿಗೆ ಕಾಣುವಂತೆ ಇಲ್ಲ ಹೋಲ ಫೋಡಿ ಮಾಡಿಕೊಡಲು ಹಣವನ್ನು ನೀಡಿದ್ದರೂ ಇನ್ನೂ ಕೆಲಸ ಮಾಡಿ ಕೊಟ್ಟಿಲ್ಲ ಎಂದರೆ ಸರ್ಕಾರದ ಚರ್ಮ ದಪ್ಪ ಎಂಬ ಗಾದೆ ಮಾತು ಈ ರೈತರ ವಿಚಾರದಲ್ಲಿ ನಿಜವಾಗಿದೆ ಎನ್ನಬಹುದು.
ಮಾತೆತ್ತಿದರೆ ತಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ, ರೈತ ಪರವಾದ ಸರ್ಕಾರ ಎಂದು ಡಂಗುರ ಸಾರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಬೀದರನ ತಹಶಿಲ್ದಾರರ ಕಚೇರಿ ಹಾಗೂ ಸರ್ವೇ ಇಲಾಖೆಯ ಭ್ರಷ್ಟಾಚಾರವನ್ನು ಗಂಭೀರವಾಗಿ ಪರಿಗಣಿಸಿ ಮುಗ್ಧ ರೈತರಿಗೆ ನ್ಯಾಯ ಕೊಡಿಸಬೇಕಾಗಿದೆ. ನೊಂದ ಒಬ್ಬ ರೈತ ರಾಜಾರೋಷವಾಗಿಯೇ ತನ್ನ ಅಳಲು ತೋಡಿಕೊಂಡಿದ್ದು ಸರ್ಕಾರದ ಕಣ್ಣು ತೆರೆಸುತ್ತದೆಯೇ ಎಂಬುದನ್ನು ಕಾದು ನೋಡಬೇಕು.
ವರದಿ: ನಂದಕುಮಾರ ಕರಂಜೆ, ಬೀದರ